ನನ್ನ ಆಸ್ತಿ ಸರ್ವೇಗೆ ಅಧಿಕಾರಿಗಳನ್ನು ಕಳುಹಿಸಬೇಡಿ, ಸ್ವತಃ ನಿವೇ ಬನ್ನಿ : ಸಾ.ರಾ. ಮಹೇಶ್
ಮೈಸೂರು: ಒಂದು ಗುಂಟೆ ಒತ್ತುವರಿ ಮಾಡಿ ದಟ್ಟಗಳ್ಳಿಯಲ್ಲಿರುವ ಸಾ.ರಾ. ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಲಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆಗೂ ಸಿದ್ಧ. ಒಂದುವೇಳೆ ಒಂದು ಗುಂಟೆ ಒತ್ತುವರಿ ಕಂಡು ಬಂದರೂ ಸರ್ಕಾರಕ್ಕೆ ನನ್ನ ಆಸ್ತಿಯನ್ನು ಬರೆದುಕೊಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ. ಚೌಲ್ಟ್ರಿ ಜಾಗದಲ್ಲಿ ಒಂದೇ ಗುಂಟೆ ಒತ್ತುವರಿ ಆಗಿದ್ದರೆ ಆಸ್ತಿಯನ್ನು ರಾಜ್ಯಪಾಲರಿಗೆ ಬರೆದುಕೊಡುತ್ತೇನೆ. ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುನೆ ಎಂದು ನಾನು ಈ...









