Latest News

ದಸರಾಗೆ ಸ್ಥಳಿಯ ಕಲಾವಿದರಿಗೆ ಅವಕಾಶಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

AskMysuru 02/09/2021

Appeals to District Collector for opportunity for local artists

sri krishnadevaraya hampi

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಕರ್ನಾಟಕ ಸರ್ಕಾರ ವಿವಿಧ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರಿನ ಕಲಾವಿದರುಗಳಿಗೆ ಪ್ರಥಮ ಆದ್ಯತೆ ಕೊಟ್ಟು ಕಲಾವಿದರ ಕಲಾ ಪ್ರದರ್ಶನಗಳನ್ನು ಅನಲೈನ್ ಪ್ರದರ್ಶನಕ್ಕೆ ಒತ್ತು ನೀಡಲಿ . ಹಾಗೂ ಗಣಪತಿ ಉತ್ಸವಗಳಲ್ಲಿ ಕಾರ್ಯಕ್ರಮವನ್ನು

ಮಾಡಲು ಅವಕಾಶ ಮಾಡಿ ಕೊಡುವುದರ ಬಗ್ಗೆ ಮಾನ್ಯರೇ : ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 400 ವರುಷಗಳ ಇತಿಹಾಸವಿದ ತನ್ನದೇ ಆದ ಪರಂಪರೆ ಕಲಾಸಂಸ್ಕೃತಿ ಹೊಂದಿದ , ಲಕ್ಷಾಂತರ ಪ್ರವಾಸಿಗರನ್ನ ದೇಶವಿದೇಶದಿಂದ ಆಕರ್ಷಿಸುತ್ತದೆ , ಕಳೆದ ಎರಡು ವರುಷಗಳಿಂದ ಕರ್ನಾಟಕ ಸರ್ಕಾರ ಕೋವಿಡ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿಯಮಾನುಸಾರ ಸರಳ ದಸರವನ್ನಾಗಿ ಆಚರಿಸುತ್ತಿದ ಜನರ ಜೀವದ ರಕ್ಷಣೆಯ ಸಲುವಾಗಿ ಒಳ್ಳೆಯ ಬೆಳವಣಿಗೆ , ಆದರೆ ಮೈಸೂರು ದಸರಾ ಎಂದರೆ ಅದು ಪಾರಂಪರಿಕ ಹಬ್ಬ , ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದು ಪ್ರಖ್ಯಾತಿ ಮನ್ನಣೆ ಪಡೆಯಲು ಮೈಸೂರು ಅರಸರಿಂದ ಪ್ರಾರಂಭವಾದ ಮೈಸೂರು ದಸರಾ 400 ವರುಷಗಳಿಂದ ನಡೆದುಕೊಂಡು ಬಂದಿದ , ಎಂತಹ ಪರಿಸ್ಥಿತಿ ಬಂದರೂ ಕಲಾಪ್ರದರ್ಶನಗಳು ನಿಂತಿರಲಿಲ್ಲ ಸರ್ಕಾರ ಅನಲೈನ್ ಡಿಜಿಟಲ್ ಪೋರ್ಟಲ್ ಬಳಸಿಕೊಂಡು ಅತ್ಯುತ್ತಮವಾಗಿ ಕಲಾಪ್ರದರ್ಶನಗಳನ್ನು ಆಯೋಜಿಸಿ ನೇರಪ್ರಸಾರ ಮಾಡಬಹುದು ಇದನ್ನ ಲಕ್ಷಾಂತರ ಮಂದಿ ಅವರ ಮನೆಯ ಟಿವಿಗಳಲ್ಲಿ ಮೊಬೈಲ್ ಗಳಲ್ಲಿ ವೀಕ್ಷಿಸಬಹುದು ಆದಕಾರಣ ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದ ರೀತಿಯಲ್ಲಿಯೇ ಜಗಹನ ಅರಮನೆ ,

ಮೈಸೂರು ಕಲಾಮಂದಿರ ಹಾಗೂ ಇನ್ನಿತರ ಸ್ಥಳಗಳಲ್ಲಿ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲಾ ಕಡೆಯಲ್ಲಿಯೂ ದಸರಾ ಕಾರ್ಯಕ್ರಮ ನಡೆಯುವ ಹಾಗೆ ಸರ್ಕಾರ ಮುಂದಾಗಿ ಕ್ರಮಕೈಗೊಳ್ಳಬೇಕು ಹಾಗೂ ಗಣಪತಿ ಉತ್ಸವಗಳಲ್ಲಿ ಕಲಾವಿದರುಗಳಿಗೆ ಕಾರ್ಯಕ್ರಮ ಮಾಡಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

Contact us for classifieds and ads : +91 9742974234



 
error: Content is protected !!