ಸಾಲಿಗ್ರಾಮದಲ್ಲಿ ಶ್ರೀ ಭಾಷ್ಯಕಾರಸ್ವಾಮಿ ದರ್ಶನ: ಉಚಿತ ಪೂಜೆಯಿಂದ ಭಕ್ತರಿಗೆ ವಿಶೇಷ ಆಕರ್ಷಣೆ
ವಿಶೇಷ ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮೇ.02:- ಅತ್ಯಂತ ಶ್ರೇಷ್ಠ ವೈವಿಧ್ಯಮಯ ಸರಳ ಪೂಜಾ ಕಾರ್ಯಗಳಿಗೆ ಹೆಸರುವಾಸಿಯಾದ ಶ್ರೀ ಭಾಷ್ಯಕಾರಸ್ವಾಮಿ ಪಾದಗಳಿಗೆ ನಮಸ್ಕರಿಸಿ ಪ್ರದಕ್ಷಣೆ ಮಾಡಿದರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಈ ಭಾಗದ ಭಕ್ತರ ಆಶಯವಾಗಿದೆ. ಸಾಲಿಗ್ರಾಮ ಪಟ್ಟಣದ ಶ್ರೀ ಯೋಗನರಸಿಂಹಸ್ವಾಮಿ ಮತ್ತು ಶ್ರೀ ಈಶ್ವರ ಸ್ವಾಮಿ ದೇವಾಲಯದ ಮಧ್ಯದಲ್ಲಿರುವುದೇ ಶ್ರೀ ಭಾಷ್ಯಕಾರಸ್ವಾಮಿ ದೇವಾಲಯ ಈ ದೇವಾಲಯದಲ್ಲಿ ಪೂಜೆ ಪುರಸ್ಕಾರಗಳು ಭಜನೆ ಸೇರಿದಂತೆ ಎಲ್ಲಾ ಕಾರ್ಯಗಳು...




