ಬೇರೆ ಹಾಡನ್ನು ಹಾಡಿಸಬಹುದಿತ್ತೇನೋ…?
ಶಾಲೆಯಲ್ಲಿ ಅದರಲ್ಲೂ ಸಾಂಸ್ಕೃತಿಕವಲಯದಲ್ಲಿ ಸಕ್ರೀಯರಾಗಿರುವವರಿಗೆ ಪ್ರತಿಭಾಕಾರಂಜಿ ಎಂದರೆ ಒಂದು ಸಂತಸ, ಸಂಭ್ರಮ, ಸಡಗರ. ಈಬಾರಿ ಪ್ರತಿಭಾಕಾರಂಜಿ ಆರಂಭವಾದಾಗ ಯಾವ ಯಾವ ವಿಭಾಗದಲ್ಲಿ ಯಾರ್ಯಾರು ಏನೇನು ಕಾರ್ಯಕ್ರಮ ನೀಡಬೇಕೆಂದು ಎಲ್ಲವನ್ನೂ ತೀರ್ಮಾನಿಸಿದೆವು. ತಯಾರಿಗಳು ಆರಂಭವಾದವು. ಇವುಗಳ ಮಧ್ಯೆ ಸಾಮೂಹಿಕಗೀತೆಯ ವಿಭಾಗದಲ್ಲಿ ಮೊದಲೇ ತಿಳಿಸಿರುವಂತೆ ಜನಪದ/ಜನಪದಧಾಟಿಯಲ್ಲಿರುವ ಗೀತೆ ಎಂಬುದನ್ನು ತಿಳಿದು ಯಾವ ರೀತಿಯ ಹಾಡನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ನಮ್ಮ ರಂಗಭೂಮಿಯ ಗೆಳೆಯರಲ್ಲಿ ಈ ಮಾಹಿತಿ ಹಂಚಿಕೊAಡಾಗ ಚಂದ್ರಶೇಖರ ಕಂಬಾರರ...