
ವಿಶೇಷ ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಮೇ.02:- ಅತ್ಯಂತ ಶ್ರೇಷ್ಠ ವೈವಿಧ್ಯಮಯ ಸರಳ ಪೂಜಾ ಕಾರ್ಯಗಳಿಗೆ ಹೆಸರುವಾಸಿಯಾದ ಶ್ರೀ ಭಾಷ್ಯಕಾರಸ್ವಾಮಿ ಪಾದಗಳಿಗೆ ನಮಸ್ಕರಿಸಿ ಪ್ರದಕ್ಷಣೆ ಮಾಡಿದರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಈ ಭಾಗದ ಭಕ್ತರ ಆಶಯವಾಗಿದೆ.
ಸಾಲಿಗ್ರಾಮ ಪಟ್ಟಣದ ಶ್ರೀ ಯೋಗನರಸಿಂಹಸ್ವಾಮಿ ಮತ್ತು ಶ್ರೀ ಈಶ್ವರ ಸ್ವಾಮಿ ದೇವಾಲಯದ ಮಧ್ಯದಲ್ಲಿರುವುದೇ ಶ್ರೀ ಭಾಷ್ಯಕಾರಸ್ವಾಮಿ ದೇವಾಲಯ ಈ ದೇವಾಲಯದಲ್ಲಿ ಪೂಜೆ ಪುರಸ್ಕಾರಗಳು ಭಜನೆ ಸೇರಿದಂತೆ ಎಲ್ಲಾ ಕಾರ್ಯಗಳು ನಡೆಯುತ್ತವೆ ಆದರೆ ಪೂಜೆಗಾಗಿ ಹಣ್ಣು ಕಾಯಿ ಕರ್ಪೂರ ಗಂಧದ ಕಡ್ಡಿ ಸೇರಿದಂತೆ ಪೂಜೆಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ನಿರ್ಬಂಧಿಸಲಾಗಿದೆ ಉಚಿತವಾಗಿ ಪೂಜಾ ಕಾರ್ಯವನ್ನು ಮಾಡಿಕೊಳ್ಳಲಾಗುತ್ತದೆ ಎಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಾರೆ.

ಶ್ರೀ ಭಾಷ್ಯಕಾರ ಸ್ವಾಮಿ ದೇವಾಲಯದ ಇತಿಹಾಸ:- ಶ್ರೀ ಆದಿಶೇಷನ ಅವತಾರವಾಗಿ ಜನ್ಮತಾಳಿದ ಶ್ರೀ ರಾಮಾನುಜರು ತಮಿಳುನಾಡಿನ ಶ್ರೀರಂಗಮನಲ್ಲಿ ಅಂದು ರಾಜ್ಯವನ್ನಳುತ್ತಿದ್ದ ಚೋಳ ರಾಜನ ಕಿರುಕುಳವನ್ನು ಸಹಿಸದ ರಾಮಾನುಜರು ತಮ್ಮ ಶಿಷ್ಯರಾದ ಶ್ರೀ ದಾಶರಥಿ ಮತ್ತು ಕೆಲರೊಡನೆ ಇಂದಿನ ಚುಂಚನಕಟ್ಟೆ ಬಂದಿದ್ದು ಅನಂತರ ಮಿಥಿಲಾಪುರಿ ಎಂದು ಕರೆಯಲ್ಪಟ್ಟ ಊರಿಗೆ ಬಂದು ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನೆಲೆಸಿದ್ದರೂ ಎಂದು ತಿಳಿಯುತ್ತದೆ.
ಮಿಥಿಲಾಪುರಿಯೇ ಸಾಲಿಗ್ರಾಮವಾದ ಇತಿಹಾಸ :- ಶ್ರೀ ರಾಮಾನುಜಾಚಾರ್ಯರು ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ತಂಗಿದ್ದ ವೇಳೆ ಆ ಗ್ರಾಮದ ಜನತೆ ಇವರನ್ನು ತೀವ್ರ ವಿರೋಧಿಸುತ್ತಿದ್ದರು ಹಾಗೂ ಆ ಜನರಿಗೆ ಅನಾರೋಗ್ಯ ಪೀಡಿತರಾಗಿ ಕಷ್ಟದಲ್ಲಿದ್ದ ವೇಳೆ ಪೂಜ್ಯರ ಶಿಷ್ಯರಾದ ಶ್ರೀ ದಾಶರಥಿ ಅವರ ಬಳಿ ಬಂದಿ ಕೇಳಿದಾಗ ಶ್ರೀಗಳ ಪಾದಗಳನ್ನು ದೇವಾಲಯದ ಮುಂಭಾಗವಿರುವ ಕುಡಿಯುವ ನೀರಿನ ಕೊಳದಲ್ಲಿ ಶ್ರೀಗಳ ಪಾದಗಳನ್ನು ಸ್ಪರ್ಶಿಸಿ ಆ ನೀರನ್ನು ಸೇವಿಸಿದರೆ ರೋಗ ವಾಸಿಯಾಗುತ್ತದೆ ಎಂದು ತಿಳಿಸುತ್ತಾರೆ ಅದರಂತೆ ಮಾಡಿದ ಗ್ರಾಮದ ಜನತೆ ಆರೋಗ್ಯವಂತರಾಗಿ ಶ್ರೀಗಳನ್ನು ಪೂಜಿಸುವ ಜೊತೆಗೆ ಭಕ್ತಿ ಭಾವದಿಂದ ಕಾಣುತ್ತಾರೆ ಅಂದಿನಿಂದ ಇಂದಿನವರೆಗೆ ಈ ಗ್ರಾಮವೇ ಶ್ರೀ ಸಾಲಿಗ್ರಾಮ ಮಿಥಿಲಾಪುರಿ ಎಂದು ನಂತರ 2 ಗ್ರಾಮಗಳು ಮಿಥಿಲಾ ಮತ್ತು ಸಾಲಿಗ್ರಾಮ ಎಂದು ಹೆಸರಿನಿಂದ ಖ್ಯಾತಿ ಪಡೆಯುತ್ತವೆ.

850 ವರ್ಷಗಳ ಹಿಂದೆ ಕಟ್ಟಲ್ಪಟ್ಟ ದೇವಾಲಯ :- ಶ್ರೀ ರಾಮಾನುಜರ ಕಾಲಾವಧಿ 1017-1137 ಶ್ರೀ ರಾಮಾನುಜರು ಪರಮ ಪದಕ್ಕೆ.( ಶ್ರೀ ವೈಕುಂಠಕ್ಕೆ ) ಹೋದ ನಂತರ ಅವರ ಶಿಷ್ಯರಾದ ಸ್ವಾಮಿ ವಡಗನಂಬಿಗಳು ಸಾಲಿಗ್ರಾಮಕ್ಕೆ ಬಂದು ಶ್ರೀ ರಾಮಾನುಜರ ಪಾದಗಳನ್ನು ಪ್ರತಿಷ್ಠಾಪನೆ ಮಾಡಿದರು ಈ ದೇವಸ್ಥಾನದ ಮೂಲಸ್ಥಾನದಲ್ಲಿ ಶ್ರೀಗಳ ಪಾದಗಳನ್ನು ಹೊರತುಪಡಿಸಿದರೆ ಬೇರೆ ಯಾವುದೊಂದು ದೇವರ ವಿಗ್ರಹ ಕೂಡ ಇಲ್ಲ ಅವರು ಹುಟ್ಟಿದ ಊರಿನ ಶಿಷ್ಯರಾದ ಸ್ವಾಮಿ ವಡಗನಂಬಿಗಳವರಿಂದ ಕಟ್ಟಲ್ಪಟ್ಟ ಒಂದೇ ಒಂದು ದೇವಸ್ಥಾನ ಈ ದೇವಾಲಯ ಇದನ್ನು ಬಿಟ್ಟರೆ ಜಗತ್ತಿನ ಯಾವ ಗ್ರಾಮದಲ್ಲಿಯೂ ಶ್ರೀಗಳ ಪಾದಗಳು ಇಲ್ಲಾ ಎಂದು ದೇವಾಲಯದ ಈಗಿನ ಗುರುಗಳು ಹೇಳುತ್ತಾರೆ.
ಶ್ರೀ ರಾಮಾನುಜ ಶ್ರೀ ಪಾದ ತೀರ್ಥ ಕೊಳದಲ್ಲಿ ಪುಣ್ಯಜಲ :- ಶ್ರೀ ಪಾದ ತೀರ್ಥ ಇದು ಕೂಡ ದೊರಕ ಬಹುದಾದ ಒಂದು ಪುಣ್ಯಕ್ಷೇತ್ರ ಈ ಪ್ರಪಂಚದಲ್ಲಿಯೇ ಈ ಕ್ಷೇತ್ರವನ್ನು ಬಿಟ್ಟರೆ ಇನ್ನೆಲ್ಲೂ ಶ್ರೀ ಪಾದ ತೀರ್ಥವು ಸಿಗುವುದಿಲ್ಲ ಕಾಶಿ. ಸೇತು. ನೇಪಾಳ.ಹಲವು ಪುಣ್ಯಕ್ಷೇತ್ರಗಳಲ್ಲಿ ಸಿಗುವ ತೀರ್ಥಗಳಿಗಿಂತಲೂ ತುಂಬಾ ಶ್ರೇಷ್ಠವಾದದ್ದು ಶ್ರೀ ರಾಮಾನುಜರ ಪಾದಗಳಿರುವ ದೇವಾಲಯದ ಮುಂಭಾಗವಿರುವ ಇರುವ ನೀರನ್ನು ಸ್ಪರ್ಧಿಸಿದರೆ ಮತ್ತು ಕುಡಿದರೆ ನಮ್ಮ ಜನ್ಮ ಪಾವನ ಎಂದು ಹೇಳುತ್ತಾರೆ ಈ ಭಾಗದ ಭಕ್ತರು.
ಶುಭ ಕಾರ್ಯಗಳಿಗೆ ಸೂಕ್ತ ಸ್ಥಳ ದೇವಾಲಯ:- ಹಿಂದಿನ ಕಾಲದಲ್ಲಿ ಶುಭ ಕಾರ್ಯಗಳು ವಿವಾಹಗಳು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಈ ದೇವಾಲಯದ ಆವರಣ ಮತ್ತು ಸನ್ನಿಧಿಗೆ ಜನರು ನಾ ಮುಂದು ನೀ ಮುಂದು ಎಂದು ಮುಗಿ ಬೀಳುತ್ತಿದ್ದರು ಇಲ್ಲಿ ಶುಭ ಕಾರ್ಯ ಮಾಡಿದ ಎಲ್ಲರಿಗೂ ಯಶಸ್ಸು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿಂದ ಹೆಚ್ಚು ಹೆಚ್ಚು ಈ ಭಾಗದ ಜನತೆ ಶುಭ ಕಾರ್ಯಗಳನ್ನು ಮಾಡುತ್ತಿದ್ದರು.

ದೇವಾಲಯದ ರಚನೆ ವಿಭಿನ್ನ :- ಶ್ರೀ ಭಾಷ್ಯಕಾರಸ್ವಾಮಿ ದೇವಸ್ಥಾನದ ಆವರಣದ ಪ್ರಧಾನ ಪ್ರವೇಶ ದ್ವಾರದ ಕ್ಷಣ ದಿಕ್ಕಿನ ಕಡೆಗೆ ವ್ಯವಸ್ಥಿತವಾಗಿದ್ದು ರಾಜ ಗೋಪುರವಿಲ್ಲದ ದ್ವಾರಮಂಟಪವಿದೆ ಇದರ ಮೂಲಕವಾಗಿ ಒಳಗಡೆ ಪ್ರವೇಶಿಸಿದರೆ ಪ್ರಧಾನ ದೇವಸ್ಥಾನದ ವಿಮಾನವನ್ನು ( ಗರ್ಭಗೃಹದ ಮೇಲಿರುವ ರಾಜಗೋಪುರವನ್ನು ) ದೇವಸ್ಥಾನದ ಹಿಂಭಾಗವನ್ನು ಕಾಣಬಹುದು ಆವರಣದಲ್ಲಿ ಪಶ್ಚಿಮವಾಗಿ ಸುತ್ತಿ ಬರಲು ಉತ್ತರಭಿಮುಖವಾಗಿ ಇರುವ ಪ್ರಧಾನ ದೇವಸ್ಥಾನದ ಪ್ರವೇಶ ದ್ವಾರವನ್ನು ಕಾಣಬಹುದು ಇದಕ್ಕೆ ನೇರ ಎದುರಿನಲ್ಲಿ ಶ್ರೀ ರಾಮಾನುಜಾ ಶ್ರೀ ಪಾದ ತೀರ್ಥ ಕೊಳ ಇದೆ ಇದರ ಪ್ರವೇಶ ದ್ವಾರದ ದಕ್ಷಿಣ ಅಭಿಮುಖವಾಗಿ ಪ್ರಧಾನ ದೇವಸ್ಥಾನವನ್ನು ನೋಡಿಕೊಂಡಂತಿದೆ ಒಳಗೆ ಪ್ರವೇಶಿಸಿದರೆ ಮಹಾಮಂಟಪ ಒಂದಿದೆ ಅದರ ನಂತರ ಅರ್ಧ ಮಂಟಪ ಕಾಣುತ್ತದೆ ಅದರಲ್ಲಿ ಶ್ರೀ ರಾಮಾನುಜರ ಚರಣ ವಿಂದಗಳು ಮಾತ್ರ ಮೂಲ ಮೂರ್ತಿ ಆಗಿರುವುದನ್ನು ಆ ಶ್ರೀ ಪಾದಗಳ ಕೆಳಗೆ ಮುಂಭಾಗದಲ್ಲಿ ಶ್ರೀ ರಾಮಾನುಜರ ಅಷ್ಟದಿಗ್ಗಜರುಗಳಲ್ಲಿ ಮೂರು ಜನರು ಇರುವುದನ್ನು ಕಾಣಬಹುದು ಇಂತಹ ಸುಂದರವಾದ ಸಾಲಿಗ್ರಾಮ ಎಂಬ ಹೆಸರಿನಿಂದ ನಾಮಂಕಿತವಾಗಲು ಕಾರಣವಾದ ಶ್ರೀ ಭಾಷ್ಯಕಾರ ಸ್ವಾಮಿ ದೇವಾಲಯಕ್ಕೆ ಬಂದು ಕೈಮುಗಿದು ಪ್ರಾರ್ಥಿಸುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಪಾದಗಳಿಗೆ ನಮ್ಮದೊಂದು ನಮಸ್ಕಾರ.
ದೇಶದಲ್ಲಿಯೇ ಅತ್ಯಂತ ಪ್ರತಿಷ್ಠಿತ ಶ್ರೀ ರಾಮಾನುಜರ ಪಾದಗಳಿಗೆ ಭಕ್ತಿ ಪೂರ್ವಕವಾಗಿ ಪೂಜಿಸಿ ನಮಸ್ಕರಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಅದರಂತೆಯೇ ಇತಿಹಾಸ ಪ್ರಸಿದ್ಧ ಶ್ರೀ ಯೋಗ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವವು ಶ್ರೀ ಭಾಷ್ಯಕಾರಸ್ವಾಮಿ ದೇವಾಲಯದ ಸಮೀಪ ಬಂದು ಪೂಜೆ ಮಾಡಿಸಿಕೊಂಡು ಹೋಗುವುದು ಸಂಪ್ರದಾಯ ಅದರಂತೆ ಹಿಂದೆಯೂ ನಡೆಯುತ್ತಿದೆ ಮುಂದೆಯೂ ನಡೆಯುತ್ತದೆ ಮತ್ತು ನಮ್ಮಲ್ಲಿ ಶ್ರೀ ಪಾದಗಳನ್ನು ಪೂಜಿಸುವ ಭಕ್ತರಿಗೆ ನಮ್ಮಿಂದಾಗುವ ಹಿತ ನುಡಿಗಳು ಶ್ರೀಗಳ ಪ್ರವಚನಗಳು ಬೋಧನೆ ಮಾಡಿಕೊಡಲಾಗುತ್ತದೆ.” ಶ್ರೀಮದ್ ಉಭಯವೇದಾಂತಿ ಧನುರ್ದಾಸ ರಾಮಾನುಜ ಜೀಯರ್ ಸ್ವಾಮಿಗಳು ಪೀಠಾಧಿಪತಿಗಳು. ಶ್ರೀ ದ್ವಯ ಸಿದ್ಧಾಂತ ಪೀಠ ಮತ್ತು ಟ್ರಸ್ಟ್ ಸಾಲಿಗ್ರಾಮ. ”
ನಮ್ಮ ಸಾಲಿಗ್ರಾಮ ತಾಲೂಕಿನ ಭಾಗದಲ್ಲಿ ಅತ್ಯಂತ ಹೆಸರುವಾಸಿ ಮತ್ತು ಭಕ್ತಿಪೂರ್ವಕವಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಭಾಷ್ಯಕಾರ ಸ್ವಾಮೀಜಿ ದೇವಾಲಯ ಹೆಸರುವಾಸಿಯಾದರೆ ಆ ದೇವಾಲಯದ ಪೀಠಾಧಿಪತಿಗಳಾದ ಶ್ರೀಗಳು ಈ ಭಾಗದ ಕಡೂ ಬಡವರ ಸಹಾಯ ಕೇಳುವ ನಿರ್ಗತಿಕರಿಗೆ ಅತ್ಯಂತ ಹೆಚ್ಚು ಸಹಾಯ ಮಾಡುವ ಸ್ವಾಮಿಗಳು ಜೀಯರ್ ಸ್ವಾಮಿಗಳು. ” ಸಾ ರಾ ಸತೀಶ್ ನಂದಿನಿ ಹಾಲು ಮಾರಾಟ ಕೇಂದ್ರದ ಮಾಲೀಕ ಸಾಲಿಗ್ರಾಮ “

