Latest News

ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಳ್ಳಿ, ಡಿಜೆ ಸಂಭ್ರಮ ಬೇಡ: ಜ್ಞಾನಪ್ರಕಾಶ ಸ್ವಾಮೀಜಿ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ :- ಈ ದೇಶಕ್ಕೆ ಸಂವಿಧಾನ ಕೊಟ್ಟಂತ ಮಹಾನ್ ಮಾನವತವಾದಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಿಎಮ್ ರಸ್ತೆ ಕಾಂಗ್ರೆಸ್ ಕಚೇರಿ ಸಮೀಪ ಇರುವ ಆವರಣದಲ್ಲಿ ತಾಲೂಕು ಬಲಗೈ ಸಮಾಜದ ಒಕ್ಕೂಟದ ವತಿಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದ ಎಲ್ಲಾ ಧರ್ಮದ ಮುಖಂಡರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಅದೇ ರೀತಿ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಂಬೇಡ್ಕರ್ ಅವರಿಗೆ ಕೊಟ್ಟಂತ ಗೌರವ . ಅದೇ ರೀತಿ ಅಂಬೇಡ್ಕರ್ ಅವರಿಗೆ ಪಟಾಕಿ ತಿಳಿಸಿ ಡಿಜೆ ಹಾಕಿ ಕುಣಿಯುದರ ಮೂಲಕ ಅಂಬೇಡ್ಕರ್ ಜಯಂತಿಯ ಮಾಡಬಾರದು ಇದು ನಿಲ್ಲಬೇಕು ಅದೇ ರೀತಿ ಅನೇಕ ಮಹಾನೀರನ್ನು ಒಂದೊಂದು ಜಾತಿಗೆ ಧರ್ಮಕ್ಕೆ ಬೀಗ ಹಾಕುವುದರ ಮೂಲಕ ಎಲ್ಲರನ್ನೂ ಬೇರ್ಪಡಿಸುವ ಕೆಲಸ ಆಗಬಾರದು ಈ ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ಮಾನವತವಾದಿ ಅಂಬೇಡ್ಕರ್ ಅವರು ಅವರ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ಎಲ್ಲರೂ ಮೈಗುಡಿಸಿಕೊಳ್ಳಬೇಕು ಶಿಕ್ಷಣದ ಮೂಲಕ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು ಅದೇ ರೀತಿ ಗ್ರಂಥಾಲಯಗಳನ್ನು ತೆರೆಯುವ ಮೂಲಕ ಉನ್ನತ ಶಿಕ್ಷಣ ಜ್ಞಾನ ಜಾಗೃತಿ ವಿಚಾರ ಹೊಂದಬೇಕು. ದೇವಸ್ಥಾನಗಳು ಕಣ್ಣು ಮುಚ್ಚಿತ್ತವೆ ಆದರೆ ಗ್ರಂಥಾಲಯಗಳು ಕಣ್ಣನ್ನು ತೆರೆಯುವಂತೆ ಮಾಡುತ್ತದೆ ಇದು ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಅದೇ ರೀತಿ 3.90 ಲಕ್ಷ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಇದು ದುರ್ದೈವ ಅಂಬೇಡ್ಕರ್ ಅವರು ಓಟಿನ ಹಕ್ಕಿಗಾಗಿ ಈ ಹಿಂದೆ ತುಂಬಾ ಕಷ್ಟ ಪಟ್ಟಿದ್ದಾರೆ ಆದ್ದರಿಂದ ಸರ್ಕಾರ ಇದನ್ನು ಪರಿಗಣಿಸಿ ಮತದಾರರ ಪಟ್ಟಿ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ ವೆಂಕಟೇಶ್ ಮಾತಾಡಿ ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ಬರೆಯದೆ ಹೋಗಿದ್ದರೆ ಈ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಯಾಕೆಂದರೆ ಶೋಷಿತರ ಪರವಾಗಿ ಎಲ್ಲಾ ಸಮುದಾಯಗಳಿಗೂ ಸಮನವಾಗಿ ಹಂಚಿಕೆಯಾಗಬೇಕು ಎಂಬ ಜ್ಞಾನವುಳ್ಳ ಕಡು ಬಡತನದಲ್ಲಿ ಹುಟ್ಟಿ ಜ್ಞಾನದ ಸಂಕೇತವಾದ ಅಂಬೇಡ್ಕರ್ ಅವರು ಬಹಳ ಎಲ್ಲಾ ದೇಶಗಳನ್ನು ಸುತ್ತಿ ಅನೇಕ ಪದವಿಗಳನ್ನು ತೆಗೆದುಕೊಂಡು ನಮ್ಮ ದೇಶಕ್ಕೆ ಸುಭದ್ರವಾದ ಕಾನೂನನ್ನು ಜಾರಿ ಮಾಡಿ ಸಂವಿಧಾನವನ್ನು ನಮಗೆ ನೀಡಿದ್ದಾರೆ ಆ ಮಹಾನ್ ವ್ಯಕ್ತಿಯ ಪ್ರತಿಯೊಬ್ಬರೂ ಅವರ ಮನದಲ್ಲಿ ಪೂಜೆ ಮಾಡಬೇಕು ಎಂದರು. ಶಿಕ್ಷಣದ ಮೂಲಕ ಉನ್ನತ ಮಠದಲ್ಲಿ ಕೆಲಸ ತೆಗೆದುಕೊಂಡು ಒಳ್ಳೆಯ ಹುದ್ದೆಗಳಿಗೆ ಹೋಗಬೇಕು ಅಂಬೇಡ್ಕರ್ ಅವರು ಜ್ಞಾನದ ಸಂಕೇತ ಅವರ ಆದರ್ಶ ತತ್ವವನ್ನು ಎಲ್ಲರೂ ಪಾಲಿಸಬೇಕು ಎಂದರು ಅದೇ ರೀತಿ ಈ ತಾಲೂಕಿನಲ್ಲಿ ನನ್ನ ಸಂಪೂರ್ಣ ಅವಧಿಯಲ್ಲಿ 40 ವರ್ಷದ ರಾಜಕಾರಣದಲ್ಲಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಮಾಡಿ ನಾಮಪಲಕ ಹಾಕಿದ್ದೇನೆ ಹೊರತು ಬೇರೆಯವರಿಂದ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ ನಾನು ಯಾರ ಬಗ್ಗೆನೂ ದ್ವೇಷ ರಾಜಕಾರಣ ಮಾಡುವುದಿಲ್ಲ ನಾನು ಕಾನೂನಾತ್ಮಕವಾಗಿ ಏನು ಮಾಡಬೇಕು ಆ ಕೆಲಸ ನಾನು ಮಾಡುತ್ತಿದ್ದೇನೆ ಎಂದರು. ಅದೇ ರೀತಿ ಈಗಾಗಲೇ ಸರ್ಕಾರದ ವತಿಯಿಂದ ಒಂದು ಕೋಟಿ ಹಣ ಅಂಬೇಡ್ಕರ್ ಭವನದ ಕಾಮಗಾರಿಗಳಿಗೆ ನೀಡಲಾಗಿದೆ ಎಂದರು.

ವಿಧಾನ ಪರಿಷತ್ ಮೇಲ್ಮನೆ ಸದಸ್ಯರಾದ ಡಾ!! ಶಿವಕುಮಾರ್ ಮಾತಾಡಿ ಈ ದೇಶಕ್ಕೆ ಸಂವಿಧಾನ ಕೊಟ್ಟಂತ ಮಹಾನ್ ವ್ಯಕ್ತಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು 150 ದೇಶಗಳಲ್ಲಿ ಆಚರಣೆ ಮಾಡುವ ಮೂಲಕ ಅವರಿಗೆ ದೊಡ್ಡ ಗೌರವ ನೀಡಿದ್ದಾರೆ ಕ್ರಾಂತಿಕಾರಿ ಅಂಬೇಡ್ಕರ್ ಅವರಿಗೆ ಜ್ಞಾನದ ದಿನ ಎಂದು ಕರೆಯುತ್ತಾರೆ  ಚಳುವಳಿಗಳ ಮುಖಾಂತರ ಹೊರಟ ಮಾಡಿ ಶೋಷಿತರಾ ಪರವಾಗಿ ಅವರ ಬರವಣಿಗೆ ಮತ್ತು ಸಾಹಿತಿಗಳು ಹೋರಾಟದ ಮುಖಾಂತರ ನ್ಯಾಯ ಕೊಡುವ ಮುಖಾಂತರ ಎಲ್ಲಾ ಸಮುದಾಯಕ್ಕೂ ಸಮಾನವಾದ ಹಕ್ಕನ್ನು ನೀಡಿದ ಮಹಾನ್ ವ್ಯಕ್ತಿ ಸದನದಲ್ಲಿ ಬೌದ್ಧ ದಿಕ್ಕುಗಳಿಗೆ 6000 ಮಾಸಾಸನ ನೀಡುವಂತೆ ನನ್ನ ಮನವಿಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಅನುಮೋದನೆ ನೀಡಲಾಗಿದ್ದು ಇದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದರು. ತಾಲೂಕಿನಲ್ಲಿ ಬೌದ್ಧ ವಿಹಾರ ಕೇಂದ್ರವನ್ನು ಸ್ಥಾಪನೆ ವಿಚಾರ ಈಗಾಗಲೇ ಸಚಿವರ ಗಮನಕ್ಕೆ ತರಲಾಗಿದ್ದು ಸ್ಥಳ ನಿಗದಿ ಮಾಡಲಾಗಿದೆ ಶೀಘ್ರದಲ್ಲಿ ಬೌದ್ಧ ವಿಹಾರ ಸ್ಥಾಪನೆ ಮಾಡುವುದಕ್ಕಾಗಿ ಭರವಸೆ ನೀಡಿದ್ದಾರೆ ಈ ಬೌದ್ಧ ವಿಹಾರಕ್ಕೆ ನನ್ನ ಕಡೆಯಿಂದ 15 ಲಕ್ಷ ಹಣವನ್ನು ಕೊಡೋದಾಗಿ ಹೇಳಿದರು ಅದೇ ರೀತಿ ಡಿಜಿಟಲ್ ಗ್ರಂಥಾಲಯಕ್ಕೆ ಹತ್ತು ಲಕ್ಷ ಕೊಡುವುದಾಗಿ ತಿಳಿಸಿದರು.

ಸಮುದಾಯ ಪರವಾಗಿ ಮಾತನಾಡಿದ ಐಲಪುರ ರಾಮು ತಾಲ್ಲೂಕಿನಲ್ಲಿ  ಪರಿಶಿಷ್ಟಜಾತಿಯಲ್ಲಿ ಬರುವ ಬಲಗೈ ಸಮುದಾಯವು ಜನಸಂಖ್ಯೆಯಲ್ಲಿ ಮೂರನೇ ಅತಿ ದೊಡ್ಡ ಸಮುದಾಯವಾಗಿದ್ದು ತಾಲ್ಲೂಕಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ರವರ ವಿಚರ ದಾರೆ ಜನರಲ್ಲಿ ಹಂಚುತ್ತಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಬಲಗೈ ಸಮದದಯ ನಿರಂತರ ಕಾರ್ಯೋನ್ಮುಖವಾಗಿದೆ,

ತಾಲೂಕಿನ ಬಲಗೈ ಸಮುದಾಯವು ಅಂಬೇಡ್ಕರವರ ಆಶಯದಂತೆ ಬುದ್ಧನ ಮಾರ್ಗದಲ್ಲಿ ನಡೆಯುತ್ತಿದ್ದು ಬುದ್ಧನ ಕಾಂತಿ ಮತ್ತು ಧ್ಯಾನಕ್ಕಾಗಿ ಬುದ್ಧವಿಹಾರ ಕೇಂದ್ರ ಮಾಡಿಕೊಡಬೇಕಾಗಿ. ಪಟ್ಟಣದ ಪುರಸಭೆ ಆವರಣದೊಳಗೆ ನಮ್ಮಬಹುದಿನಗಳ ಕನಸಾಗಿರುವ ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದೆ ಮಂಡಿಸಿದರು ಸಮುದಾಯದ ಹಲವು ಬೇಡಿಕೆಗಳನ್ನು ಸಚಿವರ ಮುಂದೆ ಮಂಡಿಸಿದರು.

ಇದಕ್ಕೂ ಮೊದಲು ಸಿದ್ದಾಪುರ ರಸ್ತೆ ಸಮೀಪ ಎಪಿಎಂಸಿ ಆವಣದಿಂದ ಬಿ ಎಂ ರಸ್ತೆ ಮೂಲಕ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಬೆಳ್ಳಿ ರಥದ ಮೂಲಕ ಮೆರವಣಿಗೆ  ಮಾಡಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ಪೈಂಟ್ ಅಂಡ್ ವಾಷಿಂಗ್ ನಿಗಮದ ಅಧ್ಯಕ್ಷ ಎಚ್ ಡಿ ಗಣೇಶ್, ಕೆಪಿಸಿಸಿ ವಕ್ತಾರಾ ಎಂ ಲಕ್ಷ್ಮಣ್, ಬಿಜೆ ಬಸವರಾಜು, ಬಲಗೈ ಸಮಾಜದ ಮುಖಂಡರಾದ ಎಸ್ ರಾಮು ಐಲಾಪುರ, ತಮ್ಮಣ್ಣಯ್ಯ, ಟಿ ಈರಯ್ಯ, ಪಿ ಮಹದೇವ್, ಶೇಖರ್ ಚನಕಲ್ ಕಾವಲು , ಧನರಾಜ್, ಪಿಪಿ ಮಹದೇವ್, ಭೀಮ್ ಆರ್ಮಿ ಗಿರೀಶ್, ಪಡ್ಡೆ ಮಾದೇವ್, ಮೇಲೂರು ರಾಜೇಶ್, ಸೋಮಶೇಖರ್ ಆವರ್ತಿ, ಎಚ್ ಡಿ ರಮೇಶ್, ಆರ್ ಡಿ ಮಹದೇವ್,ಶಿವರಾಜ್, ಮಂಜು ಆಯ್ತನಹಳ್ಳಿ, ಕಾಂತರಾಜ್, ಹೇಮಂತ್, ಚೆಲುವರಾಜ್, ರಾಜಯ್ಯ ದೊಡ್ಡ ಹಾರ್ವೆ, ಸಣ್ಣಯ್ಯ, ನಾಗಣ್ಣ, ಗೋಪಾಲ್,ಶಿವರಾಜ್, ಶಿವಣ್ಣ, ಹರೀಶ್ ಮಾಗಳಿ, ಆನಂದ್, ಪ್ರಕಾಶ್, ಜಗದೀಶ್, ರವಿಕುಮಾರ್, ಕೆ ಬಿ ರಾಜು, ಹಿಟ್ನಳ್ಳಿ ದೇವರಾಜ್ ಮತ್ತು ಬಲಗೈ ಸಮಾಜದ ಎಲ್ಲಾ ಬಂಧುಗಳು ಹಾಜರಿದ್ದರು.

Contact us for classifieds and ads : +91 9742974234