Articles

ಇತಿಹಾಸವನ್ನು ಮರೆತವನು, ಇತಿಹಾಸವನ್ನು ಸೃಷ್ಟಿಸಲಾರ!

ಸಮಾಜದ ಮೇಲ್ವರ್ಗದ ಜನ ಬಡವರು ಮತ್ತು ಶೋಷಿತ ವರ್ಗದ ಜನರ ಮೇಲೆ ಶೋಷಣೆ ಮಾಡುತ್ತಿದ್ದ ಕಾಲವದು. ಮೇಲ್ವರ್ಗದ ಜನ ಎಷ್ಟೇ ಅಪಮಾನ, ಅವಮಾನಗಳಿಂದ ನಿಂದಿಸಿದರು ಸಹ ಅವೆಲ್ಲವನ್ನು ಮೆಟ್ಟಿ ನಿಂತು ಅತ್ಯುತ್ತಮ ಶಿಕ್ಷಣವನ್ನು ಪಡೆದು ಮಹಾನ್ ವ್ಯಕ್ತಿಯಾಗಿ ರೂಪುಗೊಂಡು ಸಂವಿಧಾನವನ್ನು ರಚಿಸಿ ವಿಶ್ವಜ್ಞಾನಿ ಎನಿಸಿಕೊಂಡವರು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ .ಇಂದು ಅವರ ಜನ್ಮದಿನ .ಅಂಬೇಡ್ಕರ್ ರವರು ನಮ್ಮನ್ನು ದೈಹಿಕವಾಗಿ ಆಗಲಿರಬಹುದು ಆದರೆ ಅವರು ನೀಡಿರುವ ಕೊಡುಗೆ ಸೂರ್ಯ...
Articles

“ವಿಶೇಷ ಚೇತನ ವಿದ್ಯಾರ್ಥಿ ಎಲ್ಲರಲ್ಲೂ ಚೈತನ್ಯ ತುಂಬುವ ಸಾಧನೆ”

ಈ ವಿದ್ಯಾರ್ಥಿ ಎಲ್ಲರಿಗಿಂತಲೂ ಭಿನ್ನ. ತನ್ನಲ್ಲಿದ್ದ ಎಲ್ಲರೂ ಕೊರತೆ ಎಂದುಕೊoಡದನ್ನು ಕೊರತೆಯೇ ಇಲ್ಲವೆಂಬoತೆ ಸಾಧಿಸಿದ ಸಾಧಕ ವಿದ್ಯಾರ್ಥಿಯ ಹಾದಿ ಅಕ್ಷರಶಃ ರೋಚಕ. ಇತ್ತಿಚೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ‘ರಾಜ್ಯಪುರಸ್ಕಾರ’ ಪಡೆದ ಒಬ್ಬ ಶಿಷ್ಯ ಸಾಗಿ ಬಂದ ಹಾದಿ. ಹೆಸರು ರೇವಂತ್.ಹೆಚ್.ಪಿ ೫ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಬರಬಹುದಾದ ಒಂದು ಖಾಯಿಲೆಗೆ ತುತ್ತಾಗಿ ತಾನು ೩ತಿಂಗಳ ಮಗುವಾಗಿದ್ದಾಗಿನಿಂದಲೇ ಹಾಲು, ಹಾಲಿನ ಉತ್ಪನ್ನಗಳನ್ನು ತಿನ್ನಲಾಗದೆ, ತನ್ನ ಒಂದು ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡರೂ,...
Articles

‘ಮಕ್ಕಳನ್ನು ಅಡಾಪ್ಟ್ ಮಾಡಿಕೊಂಡು ಓದಿನ ಖರ್ಚನ್ನು ವಹಿಸಿಕೊಳ್ಳುತ್ತೇನೆ’ ಎಂದ ವಿದ್ಯಾರ್ಥಿನಿ

‘ತಾಯಿಮನೆ’ ಗೆಳೆಯ ಸುದರ್ಶನ್ ಮತ್ತು ಅವರ ಸ್ನೇಹಿತರುಗಳು ಸೇರಿ ನಡೆಸುತ್ತಿರುವುದು. ಇದರ ಆರಂಭ ಹೇಗಾಯಿತು? ಎಂದಾಗ ‘ಒಮ್ಮೆ ನಾವು ಬಸ್‌ಗಾಗಿ ಕಾಯುತ್ತಿದ್ದಾಗ ಬಂದ ಹುಡುಗ ಏನನ್ನಾದರೂ ಕೊಡಿ ಎಂದು ಕೇಳಿದ, ನಮಗೆ ಕೊಡುವುದಕ್ಕಿಂತ ಆತ ಇದನ್ನೇ ವೃತ್ತಿ ಮಾಡಿಕೊಂಡರೆ ಎಂದುಕೊoಡು, ಓದುತ್ತೀಯಾ? ನಾವು ಓದಿಸುತ್ತೇವೆ ಎಂದೆವು. ಒಪ್ಪಿಕೊಂಡ ಎಲ್ಲರೂ ಒಂದಿಷ್ಟು ಕೈಲಾದ ಹಣವನ್ನು ಹಾಕಿ ಓದಿಸಲು ಮುಂದಾದೆವು. ಇದರ ಜೊತೆಗೆ ಇತರರು ನೀಡಿದ ಸಹಾಯದಿಂದ ಅಂದಿನಿoದ ಇಂದಿನವರೆಗೂ ಸಾಗುತ್ತಲೇ ಬರುತ್ತಿದೆ’...
Articles

ವೀರ ಮದಕರಿ ನಾಯಕ ಚಿತ್ರದುರ್ಗ ಸಂಸ್ಥಾನದ ಬಗ್ಗೆ “Ask ಮೈಸೂರು” ಯೂಟ್ಯೂಬ್ ಚಾನೆಲ್ ನಲ್ಲಿ ತಿಳಿಯೋಣ ಬನ್ನಿ

. . ಚಿತ್ರದುರ್ಗದ ಕಲ್ಲಿನ ಕೋಟೆ। ಸಿಡಿಲಿಗೂ ಬೆಚ್ಚದ ಉಕ್ಕಿನಕೋಟೆ। ಮದಕರಿ ನಾಯಕರಾಳಿದ ಕೋಟೆ। ವೀರವನಿತೆ ಒನಕೆ ಓಬವ್ವ ಸಾಹಸ ಮೆರೆದ ಕೋಟೆ। . . ತ .ರಾ ಸುಬ್ಬರಾಯರು ಗತವೈಭವವನ್ನ ಬರೆದರು ದುರ್ಗಾಸ್ತಮಾನದಲ್ಲಿ. ಮುರುಘರಾಜೇಂದ್ರರು ಮಠವ ಕಟ್ಟಿದರಿಲ್ಲಿ. ತಾಯಿ ಉಚ್ಚಂಗಿ ಏಕನಾಥೇಶ್ವರಿಯ ಆಶೀರ್ವಾದದಲ್ಲಿ. ಕಲ್ಲುಬಂಡೆ ಗುಡ್ಡೆಗಳ ನಾಡನ್ನು ರಕ್ಷಿಸಿ ವೀರಾವೇಶದಿಂದ ಧರ್ಮದ ಹಾದಿಯಲ್ಲಿ ಚಿತ್ರದುರ್ಗವನ್ನಾಳಿದ ಪಾಳೇಗಾರರ ವಂಶದ ಕುರುಹು ಕಾಣಸಿಗುವುದಿಲ್ಲಿ. ಅಂತಹ ಅಭೇದ್ಯ ಚಿತ್ರದುರ್ಗದ ಸಂಸ್ಥಾನದ ಹದಿನಾರನೆ ಶತಮಾನದ...
Articles

“ಸರ್, ಮತ್ತೊಮ್ಮೆ ತಾಯಿಮನೆಗೆ ಹೋಗಿಬರೋಣವೆ!?”

ಶಾಲಾ ಮಕ್ಕಳಿಂದ ಆರಂಭವಾಗಿದ್ದ ‘ಸಂಕಲ್ಪಂ’ ಸೇವೆಯನ್ನು ಈ ವರ್ಷದಲ್ಲಿ ಹೇಗೆ ಮುಂದುವರೆಸಿಕೊಂಡು ಹೋಗಬಹುದು ಎಂಬುದನ್ನು ನೋಡಿದಾಗ ಒಂದಿಷ್ಟು ವಿಶೇಷ ವಿದ್ಯಾರ್ಥಿಗಳನ್ನು ನೋಡಿದ್ದೆವು. ತಾವಾಯಿತು, ತಮ್ಮ ಪಾಡಾಯಿತು ಎನ್ನುವವರ ಮಧ್ಯೆ ಇತರರಿಗೆ ಸಹಕಾರಿಯಾಗಿ, ತಿಳಿಸುವ, ಕಲಿಸುವ, ಕಲಿಯುವ ಒಂದಿಷ್ಟಾದರೂ ಸೇವೆಗೈಯುವ ಮನಸ್ಥಿತಿ ಉಳ್ಳ ಮನಸ್ಸಿನ ಮಕ್ಕಳೇ ಈ ಬಾರಿಯ ಸೇವೆಗೆ ಸಿಕ್ಕದ್ದು ವಿಶೇಷವೇ ಸರಿ. ಒಂದೊಳ್ಳೆಯ ಸೇವಾಭಾವನೆಯ ಸರಿಸುಮಾರು ೧೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಒಂದು ತಂಡ ಈ ಬಾರಿ ರಚನೆಯಾಗಿತ್ತು. ಪೋಷಕರು...
Articles

ಹಳೇಕಾಲದ ಹಾಡಿಗೆ ನೃತ್ಯ ಮಾಡಾಬೇಕಾ…!?

ಅಜೇಯ ಸಂಸ್ಕೃತಿ ಬಳಗದಿಂದ ಶಿವಮೊಗ್ಗ ನಗರದ ಶಾಲಾ ಮಕ್ಕಳಿಗೆ 1980 ರ ಕಾಲಗಟ್ಟದ ಗೀತೆಗಳಿಗೆ ನೃತ್ಯ ಮಾಡಲು ‘ಮಕ್ಕಳ ಹಬ್ಬ’ ವೇದಿಕೆಯನ್ನು ಕಲ್ಪಿಸಿದ್ದರು. ಅದರ ಸಂಚಾಲಕರಾಗಿದ್ದವರು ರಂಗಭೂಮಿಯ ಆಪ್ತರಾದ ಮೈನಾಸು (ಮೈನಾ ಸುಬ್ರಹ್ಮಣ್ಯ) ಒಮ್ಮೆ ಕಾಲ್‌ಮಾಡಿ, ‘ನೋಡು ಈ ತರಹ ಒಂದು ಕಾರ್ಯಕ್ರಮ ಮಾಡ್ತಾ ಇದೀವಿ, ನಿಮ್ಮ ಶಾಲೆಯ ಮಕ್ಕಳು ಭಾಗವಹಿಸಿದರೆ ಚೆನಾಗಿರತ್ತೆ, ಒಮ್ಮೆ ಶಾಲೆಯಲ್ಲಿ ಕೇಳಿ ನೋಡಬಹುದಾ?’ ‘ಆಗಲಿ’ ಎಂದು ಮರುಮಾತಿಲ್ಲದೆ ಹೇಳಿದೆ. ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ವಿಷಯ...
Articles

“ನಮ್ಮನ್ನು ಸಿನಿಮಾಗೆ ಕರೆದುಕೊಂಡು ಹೋಗಿ” ಎಂದ ವಿದ್ಯಾರ್ಥಿನಿ

ಇಂದಿಗೆ ಎರಡು ವರ್ಷಗಳ ಹಿಂದೆ ಹಿಂದಿ ಸಿನಿಮಾ ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಎನ್ನುವ ಸೈನಿಕರ ಬಗೆಗಿನ ಸಿನಿಮಾ ಬಂದಿತ್ತು. ಸ್ಕೌಟ್ ಬಳಗದ ಗೆಳೆಯರೆಲ್ಲರೂ ಸರ್‌ಗಳ ಜೊತೆಗೆ ಹೋಗಲು ತೀರ್ಮಾನಿಸಿದೆವು. ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ವರ್ಮ ಸರ್‌ಗೂ ತಿಳಿಸಿದ್ದೆವು ಅವರು ಕೂಡ ನಿಗದಿಪಡಿಸಿದ ದಿನದಂದು ನಮ್ಮ ಜೊತೆಗೆ ಬರಲು ಒಪ್ಪಿದ್ದರು. ಆದರೆ ನಿಗದಿತ ದಿನಕ್ಕಿಂತ ಮೊದಲೇ ಅವರು ಕುಟುಂಬ ಸಮೇತರಾಗಿ ಹೋಗಿನೋಡಿಕೊಂಡು ಬಂದು ನಿಜಕ್ಕೂ ಒಂದೊಳ್ಳೆಯ ಸಿನಿಮಾ ತಪ್ಪದೇ ನೋಡಲು ತಿಳಿಸಿದರು....
Articles

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಮಹಿಳಾ ದಿನಾಚರಣೆ ಪ್ರಯುಕ್ತ ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ. ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು. ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ...
Articles

‘ಓದಿದ ಶಾಲೆಯಲ್ಲಿ ಧ್ವಜಹಾರಿಸಿದ ಲೆಫ್ಟಿನೆಂಟ್’

ಪ್ರತೀವರ್ಷವೂ ಬಿಡುವಾದಾಗಲೆಲ್ಲ ಶಾಲೆಗೆ ತಪ್ಪದೇ ಬರುವ ವಿದ್ಯಾರ್ಥಿ ‘ರಾಹುಲ್‌ಬಾಳಿಗ’ ಒಂದೆರಡು ವರ್ಷ ಬರದೇ ಇದ್ದವನು ಇದ್ದಕ್ಕಿದ್ದಂತೆ ಶಾಲಾವಾರ್ಷಿಕೋತ್ಸವ ಸಮೀಪವಿದ್ದಾಗ ಶಾಲೆಗೆ ಬಂದಾಗ ಸಹಜವಾಗಿ ಮುಖ್ಯೋಪಾಧ್ಯಾಯರು, ‘ಏನು ಮಾಡ್ತಾ ಇದೀಯ ಈಗ?’ ಅಂದಾಗ, ‘ಸರ್ ಇಂಡಿಯನ್ ನೇವಿಯಲ್ಲಿ ಸೇವೆಸಲ್ಲಿಸ್ತಾ ಇದೀನಿ, ಈಗ 20ದಿನ ರಜೆ ಹಾಗಾಗಿ ಊರಿಗೆ ಬಂದ ತಕ್ಷಣ ಶಾಲೆಗೆ ಬಂದೆ’ ಆ ಕ್ಷಣವೇ ‘ಸೂಪರ್.. ಹಾಗಾದರೆ ಈ ಬಾರಿಯ ಶಾಲಾವಾರ್ಷಿಕೋತ್ಸವಕ್ಕೆ ಮುಖ್ಯಅತಿಥಿಯಾಗಿ ತಪ್ಪದೇ ಬರಲೇಬೇಕು’ ಎಂಬ ಬೇಡಿಕೆಗೆ ಬೇಡವೆಂದು...
Articles

“ನನಗೆ ಅಕ್ಷರಗಳನ್ನು ಗುರುತಿಸಲು ಬರಲ್ಲ ಸಾರ್…”

ಅದು 8ನೇ ತರಗತಿ. ಮಕ್ಕಳು ಬೇರೆಬೇರೆ ಶಾಲೆಗಳಿಂದ ಬಂದಿರುವವರು. ಹೊಸದಾದ ಶಾಲೆ, ಗೆಳೆಯರು, ಶಿಕ್ಷಕರು ಹಾಗಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಖಂಡಿತವಾಗಿ ಬೇಕೇಬೇಕಿದೆ ಎಂಬುದು ನಮಗೆಲ್ಲ ತಿಳಿದಿರುವ ಅಂಶವೇ ಸರಿ. ಯಾವಯಾವ ಶಾಲೆಯಲ್ಲಿ ಹೇಗೇಗೆ, ಏನೇನು ಪಾಠಗಳನ್ನು ಮಾಡಿರುತ್ತಾರೋ ತಿಳಿಯದು. ತರಗತಿಯಲ್ಲಿರುವ ಒಂದೊಂದು ಮಗುವು ಭಿನ್ನ, ವಿಭಿನ್ನ. ಕೆಲವು ಮಕ್ಕಳು ಓದುವುದರಲ್ಲಿ, ಕೆಲವರು ಆಟೋಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಕೆಲವು ಓದುವುದರಲ್ಲೂ ಇಲ್ಲ ಯಾವುದರಲ್ಲೂ ಇಲ್ಲ. ಆದರೆ...
1 2 3 4 21
Page 2 of 21
error: Content is protected !!