‘ಅಮ್ಮ’ ಎಂದರೆ ನೆನಪಾಗುವುದು ಪ್ರೀತಿ, ತ್ಯಾಗ, ಕರುಣೆ. ಅವಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಆಕೆಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಹಾಗಾಗಿಯೇ ಜನಪದರು ಹೇಳಿರುವುದು ‘ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ’ ಎಂಬ ನುಡಿಯು ಸಹ ತಾಯಿಯ ಮಹತ್ವವನ್ನು ತಿಳಿಸುತ್ತದೆ.
ಒಮ್ಮೆ ನಾನು ಚಿಕ್ಕವಳಿದ್ದಾಗ ನನಗೆ ಖಾಯಿಲೆ ಬಂದಾಗ ರಾತ್ರಿಯ ವೇಳೆಯಲ್ಲಿ ನಿದ್ದೆಯನ್ನು ಬಿಟ್ಟು ನನ್ನ ಪಕ್ಕದಲ್ಲಿಯೇ ಇದ್ದಳು. ಸಮಯಕ್ಕೆ ಅನುಗುಣವಾಗಿ ಔಷಧಗಳನ್ನು ನೀಡುತ್ತಿದ್ದಳು. ನನ್ನನ್ನು ಬೆಚ್ಚಗೆ ಮಲಗಿಸಿ ಆಕೆ ನಿದ್ದೆಯನ್ನು ಬಿಟ್ಟಿದ್ದಳು ಎಂಬುದರಲ್ಲಿ ಅನುಮಾನವೇ ಇಲ್ಲ. ಅಮ್ಮ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುವ ಸಮಯದಲ್ಲಿ ನಾನು ಬಿಡುವಿದ್ದಾಗಲೆಲ್ಲಾ ಮೆಡಿಕಲ್‌ಗೆ ಹೋಗುತ್ತಿದ್ದೆ. ಅಮ್ಮನಿಗೆ ಗೊತ್ತಾಗದಂತೆ ಆಗಾಗ ಚಾಕೊಲೇಟ್‌ಗಳನ್ನು ಗೊತ್ತಾಗದಂತೆ ತೆಗೆದುಕೊಂಡು ತಿನ್ನುತ್ತಿದೆ. ಅಮ್ಮನಿಗೆ ಒಂದಿಷ್ಟೂ ಅನುಮಾನ ಬರದಂತೆ. ಆದರೆ ಇತ್ತೀಚೆಗೆ ಅಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ ಹಾಕಿಸಿದಂದಿನಿoದ ಚಾಕೊಲೇಟ್‌ಗೆ ಬ್ರೇಕ್ ಬಿದ್ದಿದ್ದೆ.
ಬೆಳಗ್ಗೆ ಶಾಲೆಗೆ ಹೊರಡುವಾಗ ಪ್ರೀತಿಯಿಂದ ಕಳಿಸಿಕೊಟ್ಟು ಸಂಜೆಗೆ ನಾನು ಬರುವ ದಾರಿಯನ್ನೇ ಕಾಯುತ್ತಿರುತ್ತಾಳೆ. ಬಂದ ನಂತರದಲ್ಲಿ ನಾನು ಶಾಲೆಯಲ್ಲಿ ನಡೆದ ಪ್ರತೀ ಘಟನೆಗಳ ವರದಿಯನ್ನು ಒಪ್ಪಿಸುತ್ತಿದ್ದೆ. ಅದಾದ ಮೇಲೆಯೇ ನನಗೊಂದು ಸಮಾಧಾನ. ಯಾವುದಾದರೂ ಸ್ಪರ್ಧೆಯಲ್ಲಿ ಬಹುಮಾನ ಬಂದ ಸುದ್ಧಿಯನ್ನು ಹೇಳಿದರೆ ತನಗೇ ಬಂದಷ್ಟು ಸಂಭ್ರಮಿಸುತ್ತಾಳೆ. ಒಮ್ಮೆ ನಾನು ಓದುತ್ತಿದ್ದ ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ನನ್ನದೊಂದು ನೃತ್ಯವನ್ನು ನೋಡಲು ಬಂದಿದ್ದರು. ಅದೇ ಸಮಯದಲ್ಲಿ ಒಂದಿಷ್ಟು ಪ್ರಶಸ್ತಿ ಗಳನ್ನು ಮಕ್ಕಳಿಗೆ ನೀಡುತ್ತಿದ್ದರು. ಆಗ ನನ್ನ ಜೊತೆಗೆ ಅಪ್ಪ-ಅಮ್ಮ ನನ್ನು ವೇದಿಕೆಗೆ ಕರೆದರು. ನಮಗಂತೂ ಏಕೆ ಎಂಬುದೇ ತಿಳಿಯಲಿಲ್ಲ. ಆಗ ವೇದಿಕೆಯಲ್ಲಿ ಶಿಕ್ಷಕರು ‘ಉತ್ತಮ ನಡೆತೆಯನ್ನು ಹೊಂದಿದ ವಿದ್ಯಾರ್ಥಿನಿ’ ಎಂದು ಪೋಷಕರೊಂದಿಗೆ ನೆನಪಿನಕಾಣಿಕೆಯನ್ನು ನೀಡಿದಾಗ, ಅಪ್ಪ-ಅಮ್ಮ ಇಬ್ಬರೂ ಆಶ್ಚರ್ಯ ಮತ್ತು ಸಂತೋಷಗೊoಡರು. ಅಮ್ಮಳಂತು ಆನಂದದಿoದ ಕಣ್ಣು ಒದ್ದೆ ಮಾಡಿಕೊಂಡಳು. ನನ್ನ ಬಗ್ಗೆ ಹೆಮ್ಮೆ ಎನಿಸಿತು ಎನ್ನುವಂತೆ ನನ್ನ ತಬ್ಬಿಕೊಂಡಳು. ಅದನ್ನು ಎಂದಿಗೂ ಎಂದೆAದಿಗೂ ಮರೆಯಲು ಸಾಧ್ಯವೇ ಇಲ್ಲ.
ಒಮ್ಮೆ ನಾನು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದಿಷ್ಟು ಹಣವನ್ನು ತೆಗೆದುಕೊಂಡು ಹೋಗಿ ಗೋಬಿಮಂಚೂರಿ ತಿಂದು ಬಂದೆ. ಇದು ಮನೆಯಲ್ಲಿ ಗೊತ್ತಾಗಿ ಅಣ್ಣ ಬೈದಿದ್ದ, ಅಪ್ಪ ಹೊಡೆದಿದ್ದರು, ಅಮ್ಮನೂ ನಾಲ್ಕು ಬಾರಿಸಿದ್ದರು. ಅದಾದ ಮೇಲೆ ನನ್ನ ತಪ್ಪಿನ ಅರಿವಾಗಿ ಎಲ್ಲರಲ್ಲೂ ಕ್ಷಮೆ ಕೇಳಿದೆ. ಅಳುತ್ತಾ ಕೋಣೆಯೊಳಗಿದ್ದಾಗ ಅಮ್ಮನೇ ಬಂದು ಸಾಂತ್ವಾನ ಹೇಳಿ, ಸಮಾಧಾನ ಮಾಡಿದಳು.
ಈಗ ಪ್ರೌಢಶಾಲೆಗೆ ಬಂದoದಿನಿoದ ಗೆಳತಿಯಂತೆ ನನ್ನನ್ನು ಕಾಣುತ್ತಾಳೆ. ಅಪ್ಪೀತಪ್ಪೀ ಶಾಲೆಯಿಂದ ನನಗೆ ಹುಷಾರಿಲ್ಲ ಎಂದು ಕರೆ ಬಂದರೆ ತನ್ನೆಲ್ಲಾ ಕೆಲಸಗಳನ್ನು ಬಿಟ್ಟುಬಂದು ನನ್ನನ್ನು ಕರೆದುಕೊಂಡು ಹೋಗಿ ಹಾರೈಕೆ ಮಾಡುತ್ತಾಳೆ. ನಾನೇನಾದರೂ ಯಾರಿಗಾದರೂ ಬೇಸರವಾಗುವಂತೆ ಮಾತನಾಡಿದರೆ ತಪುö್ಪ ಎಂದು ತಿಳಿಸಿ ಬುದ್ಧಿ ಹೇಳುತ್ತಾಳೆ. ಎಲ್ಲವನ್ನೂ ಕ್ಷಮಿಸಿ ಪ್ರೀತಿಸುತ್ತಾಳೆ. ಒಟ್ಟಿನಲ್ಲಿ ತಾಯಿಯೆಂದರೆ ನನ್ನ ಪಾಲಿಗೆ ದೇವರೇ… ಎಲ್ಲೋ ಕೇಳಿದ, ಓದಿದ ಹಾಗೇ ‘ತಾಯಿಗಿಂತ ದೇವರಿಲ್ಲ’ ಎಂಬ ಮಾತು ಸತ್ಯ ಮತ್ತು ಶಾಶ್ವತ ಎಂಬುದರಲ್ಲಿ ಅನುಮಾನವೇ ಇಲ್ಲ. ಅವಳ ಬಗ್ಗೆ ಏನೇನೋ ಹೇಳಬೇಕು, ಬರೆಯಬೇಕು ಎನಿಸುತ್ತದೆ. ಆಗ ಅವಳನ್ನು ನೆನಪಿಸಿಕೊಂಡು ಸುಮ್ಮನೆ ನಗುತ್ತಾ ಕೂರುತ್ತಿದ್ದೆ. ಬರೀ ನೆನಪುಗಳು, ಅವುಗಳಲ್ಲಿ ಎಲ್ಲವೂ ಅವಳ ಬಗ್ಗೆ ಹೆಮ್ಮೆ ಎನಿಸುವ ಸಂಗತಿಗಳೇ ಆಗಿರುತ್ತವೆ. ತಿಳಿದೋ ತಿಳಿಯದೆಯೋ ಏನಾದರೂ ತಪುö್ಪ ಮಾಡಿದ್ದರೆ ಕ್ಷಮಿಸಮ್ಮ, ಲವ್ ಯೂ ಅಮ್ಮಾ…
ಸ್ಟೆವಿ ಜೋಸ್
10ನೇ ತರಗತಿ
ಸಾಂದೀಪನಿ ಆಂಗ್ಲ ಪ್ರೌಢಶಾಲೆ, ಶಿವಮೊಗ್ಗ