Articles

ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷಿದ್ದ….

Chethana Ramesh

ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಆಚರಣೆಗೆ ಹಾಗೂ ಖಾಸಗಿ ದರ್ಬಾರಿಗೆ ಸಿದ್ಧತೆ ಪ್ರಾರಂಭವಾಗಿದ್ದು, ನಾಳೆ ಅಕ್ಟೋಬರ್ 9 ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯುತ್ತದೆ ಅಕ್ಟೋಬರ್ 15 ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಮುಗಿದ ನಂತರ ಸಿಂಹಾಸನದ ಭಾಗಗಳನ್ನು ಬೇರ್ಪಡಿಸಿ ತದನಂತರ ಅದನ್ನು ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿ ಇಡುತ್ತಾರೆ. ಮತ್ತೆ ನವರಾತ್ರಿ ಸಮೀಪಿಸುತ್ತಿರುವಾಗ ಈ ಸಿಂಹಾಸನದ ಸಿದ್ಧ ಹಸ್ತರು. ನಾಳೆ ಸ್ಟ್ರಾಂಗ್ ರೂಮ್ ನಿಂದ ರತ್ನ ಖಚಿತ ಸಿಂಹಾಸನವನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಹೊರತೆಗೆದು ಜೋಡಣೆ ಕಾರ್ಯವನ್ನು ಆರಂಭಿಸುತ್ತಾರೆ.

sri krishnadevaraya hampi

ನವರಾತ್ರಿಯ 9 ದಿನಗಳು ಯದು ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನವನ್ನು ಏರುವ ಮೂಲಕ ಖಾಸಗಿ ದರ್ಬಾರ್ ನಡೆಸುತ್ತಾರೆ.

ನಾಳೆ ಬೆಳಿಗ್ಗೆ 6:30 ರಿಂದ ವಿವಿಧ ಧಾರ್ಮಿಕ ಕಾರ್ಯಗಳು ಅರಮನೆಯ ಪಂಚಾಂಗದಂತೆ ನಡೆಯುತ್ತವೆ. ಚಾಮುಂಡೇಶ್ವರಿ ಪೂಜೆ, ಶಾಂತಿ ಹೋಮ, ಗಣಪತಿ ಹೋಮ ಹಾಗೂ ವಿವಿಧ ಪೂಜೆಗಳು ನಡೆಯಲಿವೆ. 10: 05 ರಿಂದ 10:೩೫ ರ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ಜರುಗಲಿದೆ. ಈ ಜೋಡಣೆ ಪ್ರಕ್ರಿಯೆಯು ರಾಜಮಾತೆ ಪ್ರಮೋದ ದೇವಿ ಒಡೆಯರ್ ಹಾಗೂ ಜಿಲ್ಲಾ ಆಡಳಿತ ಉನ್ನತಾಧಿಕಾರಿಗ ಸಮ್ಮುಖದಲ್ಲಿ ನಡೆಯಲಿದೆ.

ಸಿಂಹಾಸನ ಜೋಡಣೆ ಸಂದರ್ಭ ಭದ್ರತಾ ದೃಷ್ಟಿಯಿಂದ ಅರಮನೆಯ ಸಿಬ್ಬಂದಿಗೂ ಕೂಡ ನಾಳೆ ಅರಮನೆಗೆ ಪ್ರವೇಶ ನಿರ್ಬಂಧ. ಇದಲ್ಲದೆ ನಾಳೆ ಎಲ್ಲಾ ಸಿಬ್ಬಂದಿಗಳು ಭದ್ರತಾ ಅಧಿಕಾರಿಗಳಿಗೆ ತಮ್ಮ ತಮ್ಮ ಮೊಬೈಲ್ ಫೋನ್ ಗಳನ್ನು ಒಪ್ಪಿಸಬೇಕು. ಜೋಡಣೆ ಪ್ರಕ್ರಿಯೆ ಮುಗಿದ ನಂತರ ಸಿಂಹಾಸನವನ್ನು ಬಿಳಿ ಪರದೆಯಿಂದ ಮುಚ್ಚಲಾಗುತ್ತದೆ.

Contact us for classifieds and ads : +91 9742974234 
error: Content is protected !!