“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”
ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ ಎಂಬುದನ್ನು ಕಾಣಬಹುದು. ಪ್ರಪಂಚದ ಹಳೆಯ ಭಾಷೆಗಳಲ್ಲಿ ಕನ್ನಡವೂ ಸಹ ಒಂದು. ಭಾರತದ ಪುರಾತನ ಭಾಷೆಗಳ ಸಾಲಿನಲ್ಲಿ ಕನ್ನಡ ಅಗ್ರಸ್ಥಾನ ಪಡೆದುಕೊಂಡಿದೆ. "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಮೈದೊಡೆ ತಕ್ಕನೆ ಮನ ಮೈ ನಿಮಿರುವುದು" ಕವಿ...









