ಮಾಸದಲ್ಲೇ ಶ್ರೇಷ್ಠ ಕಾರ್ತಿಕ
ನಮ್ಮ ಶಾಸ್ತ್ರ-ಸಂಪ್ರದಾಯಗಳು ಕೇವಲ ಮನುಷ್ಯನ ಬದುಕಿನ ಸುತ್ತಲ ಪರಿಸರಕ್ಕಷ್ಟೆ ರೂಪುಗೊಂಡಿಲ್ಲ. ವಿಶ್ವದ ಗ್ರಹಗತಿಗಳ ಚಲನಗತಿಯನ್ನಾಧರಿಸಿ ನಮ್ಮ ಸಂಸ್ಕೃತಿ–ಆಚರಣೆಗಳು ಆವಿಷ್ಕಾರಗೊಂಡಿವೆ. ಮನುಷ್ಯನ ಬದುಕಿನೊಂದಿಗೆ ಜೀವರಾಶಿಗಳಲ್ಲದೆ ಸಕಲ ಗ್ರಹಚರಗಳು ಒಳಗೊಂಡಿವೆ ಎಂಬುದನ್ನು ನಮ್ಮ ಋಷಿಗಳು ಗ್ರಹಿಸಿದ್ದಾರೆ. ಮನುಷ್ಯನ ಹುಟ್ಟು ಬೆಳವಣಿಗೆಯೊಂದಿಗೆ ಗ್ರಹಗತಿಗಳ ಚಲನೆಯನ್ನು ಹೊಂದಿಸಿ ವಿಶ್ಲೇಷಿಸಿದ್ದಾರೆ. ಮನ್ವಂತರ-ಸಂವತ್ಸರಗಳ ಜೊತೆ ತಿಂಗಳು-ದಿನಮಾನಗಳು, ಗಂಟೆ-ನಿಮಿಷಗಳ ಎಣಿಕೆಯ ಮಧ್ಯೆ ಬರುವ ರಾಹು-ಯಮಗಂಡ-ಗುಳಿಕ ಕಾಲಗಳ ಗುಣಿತ ಯಾವ ಗಣಿತಶಾಸ್ತ್ರಕ್ಕೂ ಕಡಿಮೆಯದಲ್ಲ. ನಮ್ಮ ದೇಹಚಲನೆಯೊಂದಿಗೆ ಗ್ರಹಚಲನೆಗೂ ಸಂಬಂಧವಿದೆ. ಈ ಬ್ರಹ್ಮಾಂಡದಲ್ಲಿ...









