“ಆಕಾಶವಾಣಿ, ಭದ್ರಾವತಿ. ಕರ‍್ಯಕ್ರಮ ನಡೆಸಿಕೊಡುತ್ತಿರುವವರು…”
ಒಮ್ಮೆ ಆಕಾಶವಾಣಿ ಭದ್ರಾವತಿ ಇವರಿಂದ 30ನಿಮಿಷಗಳಿಗೆ ಮಕ್ಕಳಿಂದ ಕರ‍್ಯಕ್ರಮಕ್ಕೆ ಅವಕಾಶ ನೀಡಿದ್ದರು. ಆಗತಾನೇ ಒಂದಿಷ್ಟು ಮಕ್ಕಳು ಕೆಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದ ಸಮಯ. ಆಕಾಶವಾಣಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಆಗ ಆಕಾಶವಾಣಿಯಲ್ಲಿದ್ದ ಸುಧೀಂದ್ರ ಸರ್ ಜೊತೆ ಮಾತನಾಡಿದಾಗ ಯಾವ ರೀತಿಯ ಕರ‍್ಯಕ್ರಮಗಳನ್ನು ಮಕ್ಕಳು ನೀಡಬಹುದು ಎಂದು ತಿಳಿಸಿದರು ಅದರಂತೆ ಶಾಲೆಯಲ್ಲಿ ತಿಳಿಸಿದಾಗ ಆಸಕ್ತ ಮಕ್ಕಳು ಹೆಸರನ್ನು ನೀಡಿದರು. ಕರ‍್ಯಕ್ರಮಗಳ ಪಟ್ಟಿ ಮಾಡಿದೆವು, ರಂಜಿನಿ ಹೆಗ್ಡೆ...









