ದಸರಾ ಆಚರಣೆ ಹಿಂದಿನ ಚರಿತ್ರೆ
ಮೈಸೂರು: ವಿಶ್ವವಿಖ್ಯಾತ ದಸರಾ ಆಚರಣೆ ಹಿಂದೆಯೂ ಮೈಸೂರು ಅರಸರ ಶೌರ್ಯ ಪರಾಕ್ರಮಗಳ ಚರಿತ್ರೆಯ ಹಿನ್ನೆಲೆ ಇದೆ. ದ್ವಾರಕೆಯಿಂದ 1399-1423ರ ಅವಯಲ್ಲಿ ಹಂತಹಂತವಾಗಿ ದಕ್ಷಿಣ ರಾಜ್ಯಕ್ಕೆ ಬಂದವರು ಯುದುವಂಶದ ರಾಜರು. ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು (ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಆಪತ್ಯವನ್ನು ಅವರು ಸಾಸಿಕೊಂಡ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. 1553-72ರಲ್ಲಿ ಎರಡನೇ ತಿಮ್ಮರಾಜರು ಪಾಳೆಯಗಾರನನ್ನು ಗೆದ್ದರು. ನಂತರ ಅವರ ಸಹೋ ದರ ಬೋಳಚಾಮರಾಜರು ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿದರು....









