ಎಂಎಲ್’ಎ ಟಿಕೆಟ್ !!! ನಾನು ಕಾಂಗ್ರೆಸ್ ಸೇರಬೇಕಾದರೆ ನನ್ನ ಮಗನಿಗೆ ಟಿಕೆಟ್ ನೀಡಬೇಕು
ಮೈಸೂರು: ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ನನ್ನ ಮಗ ಜಿ.ಡಿ. ಹರೀಶ‍್ ಗೌಡ ಅವರಿಗೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್ ಸೇರ್ಪಡೆಯಾಗುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಹೂಟಗಳ್ಳಿ ನಗರಸಭೆಯನ್ನು ಶುಕ್ರವಾರ ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದ್ದೇನೆ. 2 ವರ್ಷದಿಂದ ಜೆಡಿಎಸ್ ಪಕ್ಷದಿಂದ ನಾನು ದೂರ ಉಳಿದುಕೊಂಡಿದ್ದೇನೆ. ಅವರು ಸಹ ನನ್ನನ್ನು ಕರೆಯುತ್ತಿಲ್ಲ. ಕಳೆದ...









