Latest News

ಅಮೆರಿಕವನ್ನು ಹಿಂದಿಕ್ಕಿ ನಂ.2ನೇ ಸ್ಥಾನಕ್ಕೆ ಜಿಗಿದ ಭಾರತ !

AskMysuru 25/08/2021

ಹೊಸದಿಲ್ಲಿ: ಭಾರತ ಇದೀಗ ವಿಶ‍್ವದ ನೆಚ್ಚಿನ ಉತ್ಪಾದಕರ ತಾಣವಾಗಿ ಹೊರ ಹೊಮ್ಮುತ್ತಿದ್ದು, ಅಮೆರಿಕವನ್ನು ಹಿಂದಿಕ್ಕಿ ಭಾರತ ನಂ.2ನೇ ಸ್ಥಾನ ಪಡೆದುಕೊಂಡಿದೆ.

sri krishnadevaraya hampi

ಜಾಗತಿಕ ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಕಶ್‌’ಮನ್‌ ಆ್ಯಂಡ್  ವೇಕ್‌ಫೀಲ್ಡ್‌ ಪ್ರಸಕ್ತ ವರ್ಷದ ಜಾಗತಿಕ ಉತ್ಪಾದನ ಸವಾಲುಗಳ ಸೂಚ್ಯಂಕವನ್ನು ಆಧರಿಸಿ ಈ ಮಾಹಿತಿ ಯನ್ನು ಪ್ರಕಟಿಸಿದೆ.

ಯುರೋಪ್‌, ಅಮೆರಿಕ, ಏಷ್ಯಾ ಪೆಸಿಫಿಕ್‌ನ 47 ರಾಷ್ಟ್ರಗಳ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಉತ್ಪಾದಕರ ಖರ್ಚು, ಸ್ಪರ್ಧಾತ್ಮಕತೆ, ಗುಣಮಟ್ಟಗಳನ್ನು ಪರಿಶೀಲಿಸಿ ವಿವಿಧ ದೇಶಗಳಿಗೆ ಸ್ಥಾನಗಳನ್ನು ನೀಡಲಾಗಿದೆ.

ಕಳೆದ ವರ್ಷದ ಕಶ್‌ಮನ್‌ ಆ್ಯಂಡ್ ವೇಕ್‌ಫೀಲ್ಡ್‌ ಸೂಚ್ಯಂಕದಲ್ಲಿ ಅಮೆರಿಕ 2 ಹಾಗೂ ಭಾರತ 3ನೇ ಸ್ಥಾನದಲ್ಲಿ ಇತ್ತು. ಇದೀಗ ಕೋವಿಡ್ ಬಿಕ್ಕಟ್ಟಿನ ನಡುವೆಯೂ ಭಾರತ 2ನೇ ಸ್ಥಾನಕ್ಕೆ ಜಿಗಿದಿದೆ. ಎಂದಿನಂತೆ  ಚೀನಾ ನಂ.1ನೇ ಸ್ಥಾನದಲ್ಲಿ ಇದೆ.

ಉತ್ಪಾದನೆಯನ್ನು ಪುನಾರಂಭ ಮಾಡುವ ಸಾಮರ್ಥ್ಯ, ಔದ್ಯಮಿಕ ವಾತಾವರಣ (ಪ್ರತಿಭಾವಂತರು, ಕಾರ್ಮಿಕರು, ಮಾರುಕಟ್ಟೆಯ ಲಭ್ಯತೆ), ನಿರ್ವಹಣ ವೆಚ್ಚ, ಸವಾಲುಗಳನ್ನು (ರಾಜಕೀಯವಾಗಿ, ಆರ್ಥಿಕವಾಗಿ, ಪ್ರಾಕೃತಿಕವಾಗಿ) ಪರಿಗಣಿಸಿ ಉತ್ಪಾದನ ಪ್ರಿಯ ಶ್ರೇಯಾಂಕ ನೀಡಲಾಗುತ್ತದೆ.

Contact us for classifieds and ads : +91 9742974234



 
error: Content is protected !!