ಪ್ರಾಣಿಗಳನ್ನ ದತ್ತು ಪಡೆದ ಅಭಿಮಾನಿಗಳಿಗೆ ಖುದ್ದು ಡಿ ಬಾಸ್ ದರ್ಶನ್‌ರಿಂದಲೇ ಪ್ರಮಾಣ ಪತ್ರ ವಿತರಣೆ.
ಮೈಸೂರು- ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಆ ಒಂದು ಕರೆಯ ಮೇರೆಗೆ ಕೋಟಿ ಕೋಟಿ ಆದಾಯ ರಾಜ್ಯದ ಮೃಗಾಲಯಕ್ಕೆ ಹರಿದು ಬಂದಿತ್ತು. ಈ ವೇಳೆ ಹಲವರು ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು. ಮಾತ್ರವಲ್ಲ ಇವರಿಗೆಲ್ಲ ನಟ ದರ್ಶನ ಅವರೇ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಅರ್ಪಿಸಿದ್ದರು. ಈ ಸಾಲಿನಲ್ಲಿ ದರ್ಶನ್ ಅವರ ಅಭಿಮಾನಿಗಳು ಸಹ ದೊಡ್ಡ ಮಟ್ಟದಲ್ಲಿ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ದರು. ಅವರಿಗಾಗಿ ಇಂದು ಮೈಸೂರು ಮೃಗಾಲಯದಲ್ಲಿ...








