ಮೈಸೂರಿನಲ್ಲಿ ಚಿನ್ನಾಭರಣ ದರೋಡೆಗೆ ಯತ್ನ : ಚಿನ್ನದ ವ್ಯಾಪಾರಿ ಮೇಲೆ ಗುಂಡಿನ ದಾಳಿ..!
AskMysuru-23/08/2021
ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿ ಸೋಮವಾರ ಚಿನ್ನಾಭರಣ ಮಳಿಗೆಯೊಂದರಲ್ಲಿ ದರೋಡೆಗೆ ಯತ್ನಿಸಿದ ಮೂವರು ದರೋಡೆಕೋರರು ಚಿನ್ನಾಭರಣ ವರ್ತಕರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಮಾಲೀಕ ಧರ್ಮೇಂದ್ರ ಎಂಬವರೇ ಗಾಯಗೊಂಡವರು. ವಿದ್ಯಾರಣ‍್ಯಪುರಂನ ಮುಖ್ಯ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ದರೋಡೆಗೆ ಯತ್ನಿಸಿದರು. ದರೋಡೆಗೆ ಯತ್ನಿಸಿದ ಸಂದರ್ಭ ಮಾಲೀಕ ಧರ್ಮೇಂದ್ರ ತಡೆಯೊಡ್ಡಿದರು. ಈ ಸಂದರ್ಭ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.