Latest News

ಮೈಸೂರು ಗ್ಯಾಂಗ್ ರೇಪ್ ಘಟನಾ ಸ್ಥಳಕ್ಕೆ ಎಡಿಜಿಪಿ ಭೇಟಿ

AskMysuru 26/08/2021

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಮೊಬೈಲ್‌ ಟವರ್‌ ಲೋಕೆಷನ್‌ ಬಳಸಲು ಪೊಲೀಸರು ಮುಂದಾಗಿದ್ದು, ಫಿಲ್ಟರ್‌ ಮೂಲಕ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

 ಮೈಸೂರು ಗ್ಯಾಂಗ್ ರೇಪ್ ಘಟನಾ ಸ್ಥಳಕ್ಕೆ ಎಡಿಜಿಪಿ ಭೇಟಿ; ಟವರ್ ಲೋಕೆಷನ್‌ನಿಂದ ಆರೋಪಿ ಪತ್ತೆಗೆ ಬಲೆ

ಹೈಲೈಟ್ಸ್‌:
  • ಮೈಸೂರು ಗ್ಯಾಂಗ್‌ ರೇಪ್‌ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್‌ ರೆಡ್ಡಿ ಭೇಟಿ
  • ಮೊಬೈಲ್‌ ಟವರ್‌ ಲೋಕೆಷನ್‌ನಿಂದ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು
  • ತನಿಖೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಎಡಿಜಿಪಿ ಪ್ರತಾಪ್‌ ರೆಡ್ಡಿ, ಚಂದ್ರಗುಪ್ತ
  • ನಿಮ್ಮ ಸಾಮಾನ್ಯ ಜ್ಞಾನವನ್ನು ಇನ್ನೂ ಹೆಚ್ಚಿಸಿ! ದಿನವೂ ಕ್ಯುರೇಕಾ ಕ್ವಿಜ್‌ ಆಡಿ!

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ

sri krishnadevaraya hampi

ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವೇಳೆ ತನಿಖೆ ಪ್ರಗತಿ ಬಗ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ ಪಡೆದಿದ್ದಾರೆ. ಜೊತೆಗೆ ಈ ಹಿಂದೆ ಅತ್ಯಾಚಾರ ನಡೆದ ಸ್ಥಳದಲ್ಲಿ ಆಗಿರುವ ಕೆಲ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯ ಪಾರ್ಟಿಗಳು ನಡೆಯುತ್ತಿದ್ದವಾ? ಯುವಕ, ಯುವತಿ ಈ ಸ್ಥಳಕ್ಕೆ ಬರುವುದಕ್ಕೆ ಕಾರಣವೇನು? ಪ್ರತಿಯೊಂದು ವಿಚಾರದ ಬಗ್ಗೆಯೂ ಮಾಹಿತಿಯನ್ನು ಪಡೆಯಲಾಗುತ್ತಿದೆ ಎನ್ನಲಾಗಿದೆ.

ಮೊಬೈಲ್ ಟವರ್ ಲೋಕೆಷನ್‌ನಿಂದ ಆರೋಪಿ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದು, ಸದ್ಯ ಸ್ಥಳದಲ್ಲಿ ಸಾವಿರಾರು ಮೊಬೈಲ್ ನಂಬರ್ ಬಳಕೆಯಾಗಿರುವುದು ಪತ್ತೆಯಾಗಿದೆ. ಮೊಬೈಲ್ ನಂಬರ್‌ಗಳನ್ನು ಫಿಲ್ಟರ್ ಮಾಡಲಾಗುತ್ತಿದೆ. ಮೊದಲಿಗೆ ಸಂತ್ರಸ್ತೆಯ ಸ್ನೇಹಿತನ ಮೊಬೈಲ್ ಬಳಕೆಯಾಗಿರುವ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಗುರುವಾರ ಕೂಡ ನಂಬರ್ ಟ್ರೇಸಿಂಗ್ ಮಾಡಲಾಗಿದ್ದು, ಯುವಕ ನಂಬರ್ ಬಳಕೆ ಮಾಹಿತಿ ಸಿಕ್ಕಿದೆ. ಸದ್ಯ ನಂಬರ್ ಫಿಲ್ಟರ್ ಮಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ದುಷ್ಕೃತ್ಯ..! ಲಲಿತಾದ್ರಿಪುರ ಅನೈತಿಕ ಚಟುವಟಿಕೆಗಳ ತಾಣ..?
ಸಾಮೂಹಿಕ ಅತ್ಯಾಚಾರ ನಡೆದ ಸ್ಥಳ ಅನೈತಿಕ ಚಟುವಟಿಕೆಯ ಪ್ರಮುಖ ಸ್ಥಳ ಎಂದು ಹೇಳಲಾಗ್ತಿದೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲ್‌ಗಳು, ಕಾಂಡೋಮ್‌ಗಳು ಸಿಗುತ್ತಿವೆ. ಇಲ್ಲಿ ಮಧ್ಯಾಹ್ನ ಮತ್ತು ಸಂಜೆ ವೇಳೆ ನಿರಂತರವಾಗಿ ಪಾರ್ಟಿ ನಡೆದಿರುವುದಕ್ಕೆ ನೂರಾರು ಪುರಾವೆಗಳು ಸಹ ಲಭ್ಯವಿದೆ. ಇಷ್ಟೆಲ್ಲಾ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿರುವುದು ಇಂತಹ ಘಟನೆಗೆ ಕಾರಣವಾಯ್ತಾ? ಎನ್ನುವ ಅನುಮಾನ ಶುರುವಾಗಿದೆ.

Contact us for classifieds and ads : +91 9742974234 
error: Content is protected !!