Latest News

ಹೊಸ ಶಿಕ್ಷಣ ನೀತಿ ಬಗ್ಗೆ ಬೇಡ ಭೀತಿ- ಸಚಿವ ಅಶ್ವಥ್‌ ನಾರಾಯಣ

AskMysuru 05/10/2021

‘ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅವಸರದಲ್ಲಿ ಜಾರಿಗೊಳಿಸುತ್ತಿಲ್ಲ. ಇದಕ್ಕಾಗಿ ಸತತ ತಯಾರಿಗಳು ನಡೆದಿವೆ. 2 ಲಕ್ಷದಷ್ಟು ಸಲಹೆ ಗಳು ಬಂದಿದ್ದು, ಅದರಲ್ಲಿ 30 ಸಾವಿರ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇನ್ನೂ 6 ಸಾವಿರ ಸಲಹೆಗಳನ್ನು ಅಳವಡಿಸುತ್ತೇವೆ. ನೀತಿ  ಜಾರಿಯ ಹಿಂದೆ ಆರ್‌ಎಸ್‌ಎಸ್ ಪ್ರಣೀತ ನೀತಿಗಳನ್ನು ಹೇರುವ ಅಥವಾ ಶಿಕ್ಷಣವನ್ನು ಕೇಸರೀಕರಣ ಗೊಳಿಸುವ ಯಾವುದೇ ಗುಪ್ತ ಕಾರ‍್ಯ ಸೂಚಿಯೂ ಇಲ್ಲ. 36 ವರ್ಷಗಳ ನಂತರ ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿ ಮೂಲಕ ಭಾರತವನ್ನು ಮುಂದಿನ ದಶಕಗಳಿಗೆ ಸಶಕ್ತಗೊಳಿಸು ವುದಷ್ಟೇ ನಮ್ಮ ಉದ್ದೇಶ. ಯೋಜನೆ ಜಾರಿ ಈಗಾ ಗಲೇ ಶುರುವಾಗಿ ವರ್ಷವೇ ಕಳೆದಿದ್ದು, ಇದರಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ’.

sri krishnadevaraya hampi

ಇದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್.ಅಶ್ವಥ್‌ನಾರಾಯಣ್ ಅವರ ಖಚಿತ ನಿಲುವು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗು ತ್ತಿದ್ದು, ಹೊಸ ಶಿಕ್ಷಣ ನೀತಿ ಸಮಾಜದಲ್ಲಿ ಇನ್ನಷ್ಟು ತಾರತಮ್ಯ ಹೆಚ್ಚಿಸಲಿದೆ. ಇದು ಉಳ್ಳವರ ಪರವಾದ ನೀತಿ ಎನ್ನುವ ಆರೋಪಗಳ ನಡುವೆಯೇ  ‘ಆಂದೋಲನ’ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಸಚಿವರು, ಶಿಕ್ಷಣ ನೀತಿ ಜಾರಿಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು, ಮುಂದಿನ ಹಾದಿಯ ವಿವರಗಳನ್ನು ಸಂವಾದದಲ್ಲಿ  ವ್ಯಕ್ತಪಡಿಸಿದರು.

ದೇಶದಲ್ಲಿ ಕನಿಷ್ಠ ಹತ್ತು ವರ್ಷ ಗಳಿಗೆ ಒಮ್ಮೆಯಾದರೂ ಶಿಕ್ಷಣ ನೀತಿಗಳಲ್ಲಿ ಬದಲಾವಣೆಯಾಗ ಬೇಕು. ಆದರೆ ಭಾರತದಲ್ಲಿ 1986ರ ನಂತರ ನೀತಿಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ನೀತಿಯನ್ನು ಹೊಸ ಶತಮಾನದ ಕಾಲಘಟ್ಟಕ್ಕೆ ಪೂರಕವಾಗಿ ರೂಪಿಸಬೇಕು ಎಂದು ಯೋಜಿಸಿದರು. ಇದಕ್ಕೆ ತಜ್ಞರ ಸಮಿತಿ ರಚಿಸಿ ವರದಿ ನೀಡಲಾಯಿತು. ಆನಂತರ ನಾನಾ ಕ್ಷೇತ್ರದವರ ಸಲಹೆಗಳನ್ನು ಆಧರಿಸಿ ನೀತಿಯನ್ನು ಪ್ರಕಟಿಸಲಾಗಿದೆ ಎಂದರು.

ಕರ್ನಾಟಕ ಎನ್‌ಇಪಿ ಜಾರಿಗೊಳಿಸುತ್ತಿರುವ ಮೊದಲ ರಾಜ್ಯವಾಗಿದ್ದು, ಕಳೆದ ವರ್ಷ ಜುಲೈನಲ್ಲಿ ಇದು ಶುರುವಾಗಿದೆ. ಈಗಾಗಲೇ ಹೊಸ ನೀತಿ ಕುರಿತು ಜನರಲ್ಲಿರುವ ಅನುಮಾನಗಳನ್ನು ಬಗೆಹರಿ ಸುವ, ಮುಖ್ಯವಾಗಿ ಅಧ್ಯಾಪಕರು, ಶಿಕ್ಷಣದ ವಲಯದ ಭಾಗಿದಾರರನ್ನು ಸಜ್ಜುಗೊಳಿಸುವ ಕೆಲಸಗಳು ನಾನಾ ರೂಪದಲ್ಲಿ ಆಗುತ್ತಿವೆ.

ಈ ಕುರಿತು ಪ್ರತಿಪಕ್ಷಗಳು, ಪ್ರಗತಿಪರರು ಹಾಗೂ ನೀತಿ ಜಾರಿಯಿಂದ ಅನಾಹುತ ಆಗಬಹುದು ಎಂದು ಎಚ್ಚರಿಸುತ್ತಿರುವುದರಿಂದ ಸರ್ಕಾರವೂ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಪಠ್ಯ ಪರಿಷ್ಕರಣೆ, ಹೊಸ ಕಾರ‍್ಯಕ್ರಮಗಳ ಜಾರಿಯೂ ಸೇರಿದಂತೆ ಹಿಂದಿನ ಸರ್ಕಾರದಲ್ಲಿದ್ದ  ಪ್ರಮುಖರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕಿಮ್ಮನೆ ರತ್ನಾಕರ್, ತನ್ವೀರ್ ಸೇಠ್, ಬಸವರಾಜ ರಾಯರೆಡ್ಡಿ ಅವರು  ನೀಡಿದ ಸಲಹೆಗಳನ್ನೂ ನಾವು ಅಳವಡಿಸಿಕೊಂಡಿದ್ದೇವೆ. ಇದು ಆರ್‌ಎಸ್‌ಎಸ್ ಆಗಲಿ, ಯಾವುದೇ ಧರ್ಮದ ಶಿಕ್ಷಣವಾಗಲಿ ಅಲ್ಲ.  ಹಾಗಾಗಿ ಇದು ಪಕ್ಷಕ್ಕೆ, ಸಂಘಟನೆಗೆ ಸೀಮಿತ ವಾದ ನೀತಿಯಲ್ಲ. ಇಡೀ ಸಮಾಜ ಒಟ್ಟುಗೂಡಿ ಮಾಡಿದ ಶಿಕ್ಷಣ ನೀತಿ. ಕಲಿಕೆ ಗುಣಮಟ್ಟ, ಮೂಲಸೌಕರ್ಯ, ಶಿಕ್ಷಕರಲ್ಲಾಗಲಿ ಎಲ್ಲ ನ್ಯೂನತೆಗಳನ್ನ್ನೂ ಸರಿಪಡಿಸುವುದೇ ಶಿಕ್ಷಣದ ಉದ್ದೇಶವಾಗಿದೆ. ವಿದ್ಯಾರ್ಥಿ ಗಳು ಸದೃಢ ಶಿಕ್ಷಣ ಪಡೆದು ಬದುಕು ಸುಸ್ಥಿರಗೊಳ್ಳಬೇಕು ಎನ್ನುವುದು ಸರ್ಕಾರದ ಆಶಯವೂ ಹೌದು ಎನ್ನುವುದು ಅಶ್ವಥ್ ನಾರಾಯಣ್ ಅವರ ವಿವರಣೆ.

ಹೀಗಿರಲಿದೆ ಜಾರಿ: 6-14 ವರ್ಷದ ವರೆಗೂ ಕಡ್ಡಾಯ ಶಿಕ್ಷಣ ಇತ್ತು. ಎನ್‌ಇಪಿ ಯಿಂದ ಜನಿಸಿದ ಕ್ಷಣದಿಂದಲೂ ಶಿಕ್ಷಣ ನೀಡಲಾಗುತ್ತದೆ. ಆದರೆ, 3-6 ವಯೋಮಾನದಲ್ಲಿ ಮಕ್ಕಳಿಗೆ ಬುದ್ಧಿಶಕ್ತಿ ಹೆಚ್ಚಾಗಿ ಬೆಳವಣಿಗೆ ಆಗುವುದರಿಂದ ಆ ವಯಸ್ಸಿನಲ್ಲಿ ಕಲಿಕೆ ಆರಂಭವಾಗಲಿದೆ. ಅವರಿಗೆ ಎಲ್ಲ ರೀತಿಯ ವಿದ್ಯಾರ್ಥಿ ವೇತನಗಳೂ ಇರಲಿವೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಹಿಂದುಳಿದ ಸಮುದಾಯಗಳನ್ನು ಗುರಿಯಾಗಿಸಿ ಆದ್ಯತೆ ಮೇರೆಗೆ ಶಿಕ್ಷಣ ನೀಡಲಾಗುತ್ತದೆ.

ಯೋಜನೆ ಜಾರಿಗೆ ದೇಶದಲ್ಲಿ 15 ವರ್ಷಗಳ ಕಾಲಾವಕಾಶವಿದೆ. ಆದರೆ, ರಾಜ್ಯದಲ್ಲಿ ಮುಂದಿನ 10 ವರ್ಷಗಳಲ್ಲಿ ಅನುಷ್ಠಾನ ಮಾಡುವ ಗುರಿ ಹಾಕಿಕೊಂಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ 30 ವಿಶ್ವವಿದ್ಯಾನಿಲಯಗಳನ್ನು ಸ್ವಾಯತ್ತ ಮಾಡಿಕೊಂಡು, ಅವುಗಳಲ್ಲಿ 10 ವಿವಿಗಳನ್ನು ಬೋಧನೆ ಮತ್ತು ಸಂಶೋಧನೆಗಳಿಗೆ ವರ್ಗೀಕರಣ ಮಾಡಿಕೊಳ್ಳಲಾಗುತ್ತದೆ. ಜತೆಗೆ ವ್ಯವಸ್ಥಿತ ನೀತಿಗಾಗಿ ಕಲಿಕೆಯಲ್ಲಿ ಸುಧಾರಣೆ ತರಲು ಶಿಕ್ಷಣ ಆಯೋಗ, ಉನ್ನತ ಶಿಕ್ಷಣ ಆಯೋಗ ಹಾಗೂ ಪ್ರೈಮರಿ ಪರಿಷತ್ ಅನ್ನು ನೇಮಕ ಮಾಡಲಾಗುತ್ತದೆ. ಇದರಲ್ಲಿ 4 ವರ್ಟಿಕಲ್‌ಗಳನ್ನು ಮಾಡಿ, ಪ್ರತ್ಯೇಕ ಜವಾಬ್ದಾರಿ ನೀಡಲಾಗುತ್ತದೆ ಎಂದು ವಿವರಿಸಿದರು.

ಇಂದು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ, ಗುಣಮಟ್ಟ ಹಾಗೂ ಪರಿಪೂರ್ಣತೆಯ ಶಿಕ್ಷಣ ಬೇಕಿದೆ. ಜತೆಗೆ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ದೈಹಿಕ ಸದೃಢತೆಗೆ (ಕ್ರೀಡೆ) ಒತ್ತು ನೀಡುವುದು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಕಲಿಯುವ ಕೆಲಸ ಆಗಬೇಕಿದೆ. ಎಲ್ಲವನ್ನೂ ಸಮೀಕರಿಸಿ ಕಲಿಸುವ ಕೆಲಸ ಈ ನೀತಿಯಿಂದ ಆಗಲಿದೆ. ಮುಖ್ಯವಾಗಿ ಈಗಿರುವ ಶಿಕ್ಷಣ ಬರೀ ಪರೀಕ್ಷೆ ಹಾಗೂ ಅಂಕ ಆಧರಿತವಾಗಿದೆ ಎನ್ನುವ ಆರೋಪಗಳಿದ್ದವು. ಅದನ್ನು ಬದಲಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅವರು ಬಯಸುವ ವಿಷಯಗಳ ಆಯ್ಕೆ. ಆನಂತರ ಕೌಶಲ ತರಬೇತಿಗಳೊಂದಿಗೆ ಶಿಕ್ಷಣಕ್ಕೂ -ವೃತ್ತಿಗೂ ಗಟ್ಟಿ ನಂಟು ಬೆಸೆಯುವ ಕೆಲಸವನ್ನು ಸರ್ಕಾರ ಮಾಡಲಿದೆ. ಈ ಕಾರಣಕ್ಕಾಗಿಯೇ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ, ಐಟಿಐ, ಡಿಪ್ಲೊಮಾ ಸಹಿತ ತಾಂತ್ರಿಕ ಶಿಕ್ಷಣದಲ್ಲೂ ಬದಲಾವಣೆಗಳಾಗುತ್ತಿವೆ ಎಂದು ತಿಳಿಸಿದರು.

Contact us for classifieds and ads : +91 9742974234



 
error: Content is protected !!