Agriculture

ಬಗೆಬಗೆಯ ಮಣ್ಣಿನ ಬಣ್ಣಗಳು

AskMysuru 02/09/2021

ಪ್ರಶ್ನೆ: ಮಣ್ಣಿನ ಮೊದಲ ಬಣ್ಣ ಯಾವುದು ?

sri krishnadevaraya hampi

ಉತ್ತರ: ಕಂದು – ಕಪ್ಪು – ಕೆಂಪು – ಹಳದಿ – ಬಿಳಿ – ಬೂದು – ಹಸಿರು – ನೀಲಿ . . . .

ನಿಜ. ಮಣ್ಣುಗಳು ವೈವಿಧ್ಯಮಯ ಬಣ್ಣಗಳಲ್ಲಿ ಕಂಗೊಳಿಸುತ್ತವೆ. ಈ ಉತ್ತರಗಳೆಲ್ಲವೂ ಸರಿಯೇ . . . ಹಾಗೆಯೇ ಈ ಮಣ್ಣು ಸೃಷ್ಟಿಯಾದ ಪ್ರದೇಶ – ವಾತಾವರಣ – ಹವಾಗುಣ ಇವುಗಳ ಆಧಾರದ ಮೇರೆಗೆ ಮಣ್ಣಿನ ಬಣ್ಣ ತೀರ್ಮಾನವಾಗುತ್ತದೆ.

* ನಿಸರ್ಗದಲ್ಲಿರುವ ಹಲವು ಬಗೆಯ ಅಂಶಗಳು – ಶಕ್ತಿಗಳು (forces) ಮಣ್ಣನ್ನು ಸೃಷ್ಟಿಸುತ್ತವೆ. ಇವೇ ಶಕ್ತಿಗಳು ಮಣ್ಣು ನಿರ್ದಿಷ್ಟ ಬಣ್ಣ ತಳೆಯಲೂ ಪ್ರಭಾವ ಬೀರುತ್ತವೆ.

* ಒಂದು ಪ್ರದೇಶದ ಹವಾಗುಣ – ನೆಲದೊಳಗೆ ಆವರಿಸಿರುವ ತಾಯಿಬಂಡೆ – ಆ ಪ್ರದೇಶದಲ್ಲಿ ನಡೆಯುವ ಜೈವಿಕ ಚಟುವಟಿಕೆಗಳು – ಅಲ್ಲಿನ ಭೂಪ್ರದೇಶದ ಸ್ಥಿತಿಗತಿ – ಮಣ್ಣು ರೂಪುಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿ ಹಾಗೂ ಆ ಪ್ರದೇಶದಲ್ಲಿನ ಜನಸಮುದಾಯಗಳ ಚಟುವಟಿಕೆಗಳು . . . ಈ ಎಲ್ಲಾ ಅಂಶಗಳೂ ಮಣ್ಣಿನ ನಿರ್ಮಾಣ ಮತ್ತು ಹೊಂದಿರಬೇಕಾದ ಬಣ್ಣವನ್ನು ನಿರ್ಧರಿಸುತ್ತವೆ.

* ಮಣ್ಣಿನ ಭೌತಿಕ ಗುಣಲಕ್ಷಣಗಳನ್ನು ತೀರ್ಮಾನಿಸಲೂ ಸಹ ಮಣ್ಣಿನ ಬಣ್ಣವನ್ನು ಮಾರ್ಗಸೂಚಿಯಾಗಿ / ಸೂಚಕವಾಗಿ ಬಳಸಬಹುದು.

* ಹಾಗೆಯೇ, ಮಣ್ಣೊಳಗಿರುವ ಸಾವಯವ ವಸ್ತುಗಳು / ಸಾವಯವ ಅಂಶಗಳು, ಮಣ್ಣಲ್ಲಿ ಸಂಪೂರ್ಣವಾಗಿ ಕೊಳೆತು ಕಳಿತ ಗಿಡಗಳ ಉಳಿಕೆಗಳು, ಮಣ್ಣಲ್ಲಿನ ತೇವಾಂಶ . . . . ಇವೆಲ್ಲವೂ ಮಣ್ಣಿನ ಒಟ್ಟಾರೆ ಬಣ್ಣವನ್ನು ನಿರ್ಧರಿಸುತ್ತವೆ.

* ಜೊತೆಗೆ ಮಣ್ಣಲ್ಲಿ ಇರುವ – ಇಲ್ಲದಿರುವ ಖನಿಜಯುಕ್ತ ಅಂಶಗಳೂ ಸಹ ಮಣ್ಣು ನಿರ್ದಿಷ್ಟ ಬಣ್ಣ ಹೊಂದಿರಲು ಕಾರಣವಾಗಿವೆ.

* ಮಣ್ಣು ಒಂದು ನಿರ್ಧಿಷ್ಟ ಬಣ್ಣ ತಳೆಯಲು ಆ ಪ್ರದೇಶದ ಹವಾಮಾನವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಹೇಗೆಂದರೆ, ಮಣ್ಣಲ್ಲಿನ ಜೀವಿಗಣಗಳು ಎಲ್ಲಿ ಮತ್ತು ಹೇಗೆ ಮತ್ತು ಎಷ್ಟು ಬೇಗ ಬೆಳೆಯಬಹುದೆನ್ನುವುದನ್ನು ನಿರ್ಧರಿಸುತ್ತವೆ.

ಈ ಮಣ್ಣುಜೀವಿಗಣಗಳು ಮಣ್ಣಲ್ಲಿ ಬೆರೆತಿರುವ ಗಿಡಗಳ ಉಳಿಕೆಗಳು ಹಾಗೂ ಪ್ರಾಣಿಗಳ ಹಿಕ್ಕೆಗಳು – ಸಗಣಿ ಇನ್ನಿತರ ಸಾವಯವ ವಸ್ತುಗಳನ್ನು ಸಾವಯವ ಅಂಶವಾಗಿ ಪರಿವರ್ತಿಸುತ್ತವೆ. ಹೀಗೆ ರೂಪುಗೊಂಡ ಸಾವಯವ ಅಂಶವೂ ಸಹ ಮಣ್ಣು ನಿರ್ದಿಷ್ಟ ಬಣ್ಣ ತಳೆಯಲು ಕಾರಣವಾಗಿವೆ.

* ಮಣ್ಣಿನ ಮೇಲ್ಪದರದಲ್ಲಿರುವ ತೇವಾಂಶವೂ ಸಹ ಹವಾಮಾನಕ್ಕೆ ಈಡಾಗಿ ಆವಿಯಾಗುವುದರಿಂದ, ತೇವಾಂಶ ಕಡಿಮೆ ಇರುವ ಮಣ್ಣೂ ಸಹ ತನ್ನ ಸೊಬಗಿನ ಬಣ್ಣವನ್ನು ಕಳೆದುಕೊಂಡು ಪೇಲವಗೊಳ್ಳುತ್ತದೆ. ಆದ್ದರಿಂದ ಮಣ್ಣಲ್ಲಿನ ತೇವಾಂಶ ಹಾಗೂ ಅಲ್ಲಿನ ಹವಾಮಾನವೂ ಸಹ ಮಣ್ಣಿನ ಬಣ್ಣ ರೂಪುಗೂಳಲು ಕಾರಣವಾಗುತ್ತವೆ.

Contact us for classifieds and ads : +91 9742974234



 
error: Content is protected !!