ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದ ಈ ಹತ್ಯೆ ಪ್ರಕರಣ ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಕಾಣಿಸಿಕೊಂಡಿತ್ತು. ಆದರೆ ಪೊಲೀಸರು ನಡೆಸಿದ ಸೂಕ್ಷ್ಮ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ. ಮೃತ ವ್ಯಕ್ತಿಯನ್ನು ಕುರ್ಣೇಗಾಲ ಗ್ರಾಮದ ಜವರಪ್ಪ ಎಂದು ಗುರುತಿಸಲಾಗಿದೆ. ಅವರಿಗೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾ ಜೊತೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬದಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದುದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಅಮೃತಾ ಮತ್ತು ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ನಡುವೆ ಅಕ್ರಮ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಜವರಪ್ಪ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ಸೇರಿ ಅವನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಸುಮಾರು 12 ದಿನಗಳ ಹಿಂದೆ ಅಮೃತಾ ತನ್ನ ಮಕ್ಕಳೊಂದಿಗೆ ತವರಿನ ಮನೆಗೆ ಹಬ್ಬದ ನಿಮಿತ್ತ ತೆರಳಿದ್ದಳು. ಏಪ್ರಿಲ್ 16ರಂದು ಜವರಪ್ಪ...
ಮೇಷ (Aries) – 18-04-2026 ದಿನಭವಿಷ್ಯ ನಿಮ್ಮೊಳಗಿನ ಶಕ್ತಿ ಒಂದು ಕುದುರೆಯಂತೆ ಓಡಲು ತುದಿಗಾಲಿನಲ್ಲಿ ನಿಂತಿರುತ್ತದೆ. ನೀವು ಯಾವುದನ್ನೇ ಕೈಗೆತ್ತಿಕೊಂಡರೂ ಅದರಲ್ಲಿ ವೇಗ ಮತ್ತು ಉತ್ಸಾಹ ಕಾಣಿಸುತ್ತದೆ. ಆದರೆ ಈ ವೇಗಕ್ಕೆ ಒಂದು ದಿಕ್ಕು ಕೊಡುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಕಡೆ ಬರಬಹುದು. ನೀವು ಅದನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿದರೆ ಮೇಲಾಧಿಕಾರಿಗಳ ಗಮನ ನಿಮ್ಮತ್ತ ಸೆಳೆಯಬಹುದು. ಹಣಕಾಸಿನ ವಿಷಯದಲ್ಲಿ ಇಂದು ಸ್ವಲ್ಪ ಜಾಗ್ರತೆ ಅವಶ್ಯಕ. ತಕ್ಷಣ ಲಾಭ ಕಾಣಿಸುವ ಯೋಜನೆಗಳು ಎಲ್ಲವೂ ನಿಜವಾಗಿಯೂ ಲಾಭಕರವಾಗಿರಲಿಕ್ಕಿಲ್ಲ. ಹೀಗಾಗಿ ದೊಡ್ಡ ಹೂಡಿಕೆ ಮಾಡುವ ಮೊದಲು ಯೋಚಿಸಿ. ಸಣ್ಣ ಮಟ್ಟದ ಉಳಿತಾಯ ಇಂದು ನಿಮಗೆ ಭವಿಷ್ಯದಲ್ಲಿ ದೊಡ್ಡ ಬೆಂಬಲವಾಗಬಹುದು. ಸಂಬಂಧಗಳ ವಿಚಾರದಲ್ಲಿ ಇಂದು ಮೃದುವಾದ ಮಾತುಗಳು ಮಾಯೆಯಂತೆ ಕೆಲಸ ಮಾಡುತ್ತವೆ. ಮನೆಯವರ ಜೊತೆ ಅಥವಾ ಪ್ರಿಯಜನರ ಜೊತೆ ಸಣ್ಣ ಮಾತಿನ ತಪ್ಪುಗಳಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ...
ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಭಯಾನಕ ಘಟನೆ ಒಂದು ನಡೆದಿದ್ದು, ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಅವರ...
ವರದಿ:ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕಂದೇಗಾಲ ವತಿಯಿಂದ ಎ.18 ರಂದು ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಅಂದು ರಾತ್ರಿ 7.30 ಗಂಟೆಗೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯ ಬಳಿ ಶ್ರೀ ಶನಿ ದೇವರ ಪೂಜಾ ಕಾರ್ಯಕ್ರಮದ 16ನೇ ವರ್ಷದ ಪ್ರಯುಕ್ತ ಸಾಲಿಗ್ರಾಮದ ಶ್ರೀ ನಟರಾಜ ಡ್ರಾಮಾ ಸೀನ್ಸ್ ಭವ್ಯ ರಂಗ ಮಂಟಪದಲ್ಲಿ ನಾಟಕ ನಡೆಯಲಿದ್ದು ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅವರು ಹಾಗೂ ಅಧ್ಯಕ್ಷತೆಯನ್ನು ಮೈಮುಲ್ ಮಾಜಿ ಅಧ್ಯಕ್ಷರಾದ ಪಿ.ಎಮ್ ಪ್ರಸನ್ನ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ, ಪೂಜಾ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ...
ವರದಿ:ರವಿಚಂದ್ರ ಬೂದಿತಿಟ್ಟು ಬೆಟ್ಟದಪುರ : ಇಲ್ಲಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿ ಕ್ವಿಂಟಲ್ ಗೆ 4 ಕೆ.ಜಿ ಹೆಚ್ಚುವರಿ ಕಡಿತ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಶಾಸಕ ಕೆ.ಮಹದೇವ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹೆಚ್ಚುವರಿ ಕಡಿತವನ್ನು ಕಡಿಮೆ ಮಾಡಿ ಕ್ವಿಂಟಾಲಿಗೆ 2 ಕೆ.ಜಿಗೆ ಅಂತಿಮಗೊಳಿಸುವಂತೆ ಖರೀದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು,ಮುಂದಿನ ಬಾರಿ ರಾಗಿ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೂಲಿ ಕಾರ್ಮಿಕರಿಗೆ ಇನ್ನೂ ಕೂಲಿ ಹಣ ಪಾವತಿ ಆಗದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ, ಸಂಬಂಧಪಟ್ಟ ಗುತ್ತಿಗೆದಾರರು ತಕ್ಷಣವೇ ಬಾಕಿ ಹಣ ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ...