Latest News

ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ

ವರದಿ:ರವಿಚಂದ್ರ ಬೂದಿತಿಟ್ಟು.

ಪಿರಿಯಾಪಟ್ಟಣ: ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕಂದೇಗಾಲ ವತಿಯಿಂದ ಎ.18 ರಂದು ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ ನಡೆಯಲಿದೆ.

ಅಂದು ರಾತ್ರಿ 7.30 ಗಂಟೆಗೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯ ಬಳಿ ಶ್ರೀ ಶನಿ ದೇವರ ಪೂಜಾ ಕಾರ್ಯಕ್ರಮದ 16ನೇ ವರ್ಷದ ಪ್ರಯುಕ್ತ ಸಾಲಿಗ್ರಾಮದ ಶ್ರೀ ನಟರಾಜ ಡ್ರಾಮಾ ಸೀನ್ಸ್ ಭವ್ಯ ರಂಗ ಮಂಟಪದಲ್ಲಿ ನಾಟಕ ನಡೆಯಲಿದ್ದು ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅವರು ಹಾಗೂ ಅಧ್ಯಕ್ಷತೆಯನ್ನು ಮೈಮುಲ್ ಮಾಜಿ ಅಧ್ಯಕ್ಷರಾದ ಪಿ.ಎಮ್ ಪ್ರಸನ್ನ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ, ಪೂಜಾ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಾಟಕ ಮಂಡಳಿ ಪದಾಧಿಕಾರಿಗಳು ಸದಸ್ಯರು ಯಜಮಾನರು ಮತ್ತು ಗ್ರಾಮಸ್ಥರು ಕೋರಿದ್ದಾರೆ.

 

Contact us for classifieds and ads : +91 9742974234