ಮೈಸೂರು ಹಾಸನ ರಸ್ತೆಯಲ್ಲಿ ಅಂಬೇಡ್ಕರ್ ಜಯಂತಿ: ಅರಳಿ ಮರ ತೆರವು ಮಾಡಿ ಉದ್ಯಾನವನ ನಿರ್ಮಾಣ ಘೋಷಣೆ
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ:ಏ.,14:- ಪ್ರತಿ ದೇಶವಾಸಿಯು ನೆಮ್ಮದಿ ಮತ್ತು ಸಮಾನತೆಯ ಜೀವನ ನಡೆಸಲು ಅನುಕೂಲವಾಗುವಂತಹ ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಜರಾಮರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕು ಆಡಳಿತ ಮತ್ತು ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಜನತೆಯ ಸುಭದ್ರ ಭವಿಷ್ಯಕ್ಕಾಗಿ ಹತ್ತು ಹಲವು ಶಾಶ್ವತ ಕೊಡುಗೆ ಗಳನ್ನು ನೀಡಿದ ಬಾಬಾ ಸಾಹೇಬರು ಸೂರ್ಯ ಮತ್ತು ಚಂದ್ರರು ಇರುವವರೆಗೂ ಶಾಶ್ವತ ಎಂದು ಬಣಿಸಿದ ಶಾಸಕರು ಸಮಾಜದ ಬಾಂದವರ ಬೇಡಿಕೆಯಂತೆ ಅಂಬೇಡ್ಕರ್ ಪುತ್ಥಳಿ ಬಳಿ ಇರುವ ಅರಳಿ ಮರವನ್ನು ತೆರವು ಮಾಡಿ ಇಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವುದಾಗಿ...






