ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಏ.08:- ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ನಾಗರೀಕರನ್ನು ಅಲೆದಾಡಿಸಿದ ಬಗ್ಗೆ ನಮಗೆ ದೂರು ಬಂದಲ್ಲಿ ಹಾಗೂ ನಮ್ಮ ದೂರವಾಣಿ ಕರೆಯನ್ನು ಸ್ವೀಕರಿಸದೆ...
ಮೈಸೂರು, ಏ.08:- ಬಲಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ:ಶಿವರಾಜು ಪಿ...
ವರದಿ: ವಡ್ಡರಕೊಪ್ಪಲು ಶಿವರಾಮು ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಸಾಂಸ್ಕೃತಿಕ ಸಂಭ್ರಮಕ್ಕೆ ಇಂದು ಮತ್ತೊಮ್ಮೆ ಜೀವ ತುಂಬಿದಂತೆ ಕಂಡದ್ದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಓಂಕಾಳಿಯಮ್ಮ ದೇವಾಲಯದ...
ಮೇಷ ರಾಶಿ ದಿನಭವಿಷ್ಯ 08-04-2026, ಬುಧವಾರ ನಿಮ್ಮ ದಿನ ಒಂದು ಚುರುಕು ಗಾಳಿಯಂತೆ ಶುರುವಾಗಬಹುದು ಆರಂಭದಲ್ಲಿ ಸ್ವಲ್ಪ ಒತ್ತಡ, ಆದರೆ ಕ್ರಮೇಣ ನಿಯಂತ್ರಣ ನಿಮ್ಮ ಕೈಗೆ ಬರುತ್ತದೆ. ಕೆಲಸದ ಕಡೆ ನೀವು ತೋರಿಸುವ ಚಾತುರ್ಯ ಮತ್ತು ತ್ವರಿತ ನಿರ್ಧಾರಗಳು ನಿಮಗೆ ಒಳ್ಳೆಯ ಫಲಿತಾಂಶ ತರುತ್ತವೆ. ವಿಶೇಷವಾಗಿ ಆಫೀಸ್ ಅಥವಾ ವ್ಯವಹಾರದಲ್ಲಿ ಬಾಕಿ ಇರುವ ಕೆಲಸಗಳನ್ನು ಮುಗಿಸಲು ಇದು ಸೂಕ್ತ ದಿನ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಅನಾವಶ್ಯಕ ಖರ್ಚುಗಳು ತಲೆದೋರುವ ಸಾಧ್ಯತೆ ಇದೆ, ಆದ್ದರಿಂದ “ಇದನ್ನು ಈಗಲೇ ಬೇಕಾ?” ಅನ್ನೋ ಪ್ರಶ್ನೆ ನಿಮ್ಮನ್ನು ಉಳಿಸಬಹುದು. ಹಳೆಯ ಸಾಲ ಅಥವಾ ಬಾಕಿ ಹಣ ವಾಪಸ್ಸಾಗುವ ಸುಳಿವುಗಳು ಕೂಡ ಇವೆ. ಸಂಬಂಧಗಳ ವಿಷಯದಲ್ಲಿ, ನಿಮ್ಮ ನೇರ ಮಾತು ಕೆಲವೊಮ್ಮೆ ಇತರರಿಗೆ ಕಠಿಣವಾಗಿ ತೋರಬಹುದು. ಆದ್ದರಿಂದ ಸ್ವಲ್ಪ ಮೃದುವಾಗಿ ಮಾತನಾಡಿದರೆ ಸಂಬಂಧಗಳು ಇನ್ನಷ್ಟು ಗಾಢವಾಗುತ್ತವೆ . ಕುಟುಂಬದ ಹಿರಿಯರ ಸಲಹೆ ಇಂದು...
ಮೈಸೂರು :- ನಗರದ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಕರ್ಲಾ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ಲೇಖನಿಯನ್ನು ವಿತರಿಸುವ ಸೇವಾ ಕಾರ್ಯದೊಂದಿಗೆ ದೇಶದ ಅಗ್ರಗಣ್ಯ ನಾಯಕ,ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಸ್ನೇಹ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪ್ರಕಾಶ್ ಪ್ರಿಯಾದರ್ಶನ್ ಶೋಷಿತರ ಧ್ವನಿಯಾಗಿ ಭಾರತದ ಹಸಿರು ಕ್ರಾಂತಿ ರೂವಾರಿಯಾಗಿ ದೇಶವನ್ನು ಮುನ್ನಡೆಸಿದ ಧೀಮಂತ ರಾಷ್ಟ್ರೀಯ ನಾಯಕ ಡಾ. ಬಾಬು ಜಗಜೀವನ್ ರಾಂ ರವರ ಜನ್ಮ ದಿನದಂದು ಅವರನ್ನು ಸ್ಮರಿಸುವುದು ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ” ಸಮಾಜದಿಂದ ನಾವು ಬದಲಾಗುವುದಿಲ್ಲ, ನಮ್ಮಿಂದ ಸಮಾಜ ಬದಲಾಗಬೇಕು ಎಂಬ ಸಿದ್ಧಾಂತದೊಂದಿಗೆ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು –...
ಮೈಸೂರು ಏಪ್ರಿಲ್ 7:- ಮೇ 01.ರಂದು ಅರ್ಥಪೂರ್ಣವಾಗಿ ಭಗವಾನ ಬುದ್ಧ ಅವರ ಜಯಂತಿಯನ್ನು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಭಗವಾನ ಬುದ್ಧ ಜಯಂತಿ ,ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದರು. ಭಗವಾನ ಬುದ್ಧ ಜಯಂತಿಯನ್ನು ಮೇ 01.ರಂದು ಬೆಳಗ್ಗೆ 11:30 ಗಂಟೆಗೆ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೇದಿಕೆ ಮೇಲೆ ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿ ಯನ್ನು ಆಹ್ವಾನಿಸಲಾಗುವುದು ಎಂದರು....
ಪಿರಿಯಾಪಟ್ಟಣ: ತಾಲೂಕು ಸಿನಿಮಾ ರಂಗಕ್ಕೆ ಪುಟ್ಟಣ್ಣ ಕಣಗಾಲ್ ರಂತಹ ಮಹಾನ್ ನಿರ್ದೇಶಕರನ್ನು ನೀಡಿದ ನೆಲವಾಗಿದೆ ಎಂದು ಚಲನಚಿತ್ರ ನಟ ದುನಿಯಾ ವಿಜಯ್ ಹೇಳಿದರು. ಪಟ್ಟಣದಲ್ಲಿ ನಡೆದ ಪ್ರೀಮಿಯರ್ ಲೀಗ್ 9ನೇ ಸೀಸನ್ “ಪುನೀತ್ ರಾಜಕುಮಾರ್ ಕಪ್” ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮುಂತಾದ ಮಹನೀಯರ ಪುಣ್ಯಭೂಮಿ ಎಂದರು. ಇಂದಿನ ಯುವಕರು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಯುವಕರು ಇಂತಹ ದುಷ್ಪ್ರವೃತ್ತಿಗಳಿಂದ ದೂರವಿದ್ದು ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸಿ ಉತ್ತಮ ಸಾಧನೆ ಮಾಡಬೇಕು. ಅಕ್ರಮ ಮಾದಕ ದ್ರವ್ಯಗಳ ಮಾರಾಟದ ವಿರುದ್ಧ ಸಮಾಜವೇ ಒಟ್ಟಾಗಿ ಧ್ವನಿ ಎತ್ತಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ....