ತಂಬಾಕು ಬೆಲೆ ಕುಸಿತ: ಪ್ರತಿ ಕೆಜಿಗೆ ರೂ.300 ನಿಗದಿ ಮಾಡುವಂತೆ ರೈತ ಸಂಘ ಆಗ್ರಹ
ವರದಿ:ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ, ಏಪ್ರಿಲ್ 10: ತಂಬಾಕು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಪ್ರತಿ ಕೆಜಿಗೆ ಕನಿಷ್ಠ ರೂ.300 ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಚಪ್ಪರದಹಳ್ಳಿ ಅಜಿತ್ ಒತ್ತಾಯಿಸಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಾರುಕಟ್ಟೆ ಆರಂಭವಾದ ವೇಳೆ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ ರೂ.250 ರಿಂದ 320ರವರೆಗೆ ಬೆಲೆ ನೀಡಲಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಬೆಲೆ ಏಕಾಏಕಿ ಸುಮಾರು ರೂ.100ಕ್ಕಿಂತಲೂ ಕಡಿಮೆಗೆ ಇಳಿದಿದ್ದು, ರೈತರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ತಂಬಾಕು ಮಂಡಳಿ ಹಾಗೂ ಖರೀದಿದಾರ ಕಂಪನಿಗಳು ರೈತರಲ್ಲಿ ಭಿನ್ನಾಭಿಪ್ರಾಯ ಉಂಟುಮಾಡುವ ಉದ್ದೇಶದಿಂದ ಕೆಲ ರೈತರನ್ನು ಮಧ್ಯವರ್ತಿಗಳಂತೆ ಬಳಸಿಕೊಂಡು ಅವರಿಗೆ ಮಾತ್ರ ಉತ್ತಮ ಬೆಲೆ ನೀಡುತ್ತಿರುವ ಬಗ್ಗೆ ದೂರುಗಳು...








