ಏಪ್ರಿಲ್ 19 ರಂದು ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪ ಹಾಗೂ ರಾಮ ತಾರಕ ಹೋಮ
ಮೈಸೂರು: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹ ಸಂಸ್ಥಾನ ಶ್ರೀ ಮದುತರದಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳರವರ ಶ್ರೀ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಅಭಿವೃದ್ಧಿ ಹಿಂದೂ ಸಮಾಜದ ಸಂಘಟನೆ ಹಾಗೂ ರಾಮ ರಾಜ್ಯದ ಸಕಾರಾತೆಗಾಗಿ ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪವನ್ನು ಯಾದವಾಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19 ರಂದು ಬೆಳಗ್ಗೆ 9 ಗಂಟೆಗೆ ರಾಮ ತಾರಕ ಹೋಮ ಹಾಗೂ 11 ಗಂಟೆಗೆ ಸಾಮೂಹಿಕ ರಾಮನಾಮ ಜಪವನ್ನು ಆಯೋಜಿಸಿದ್ದು ಅದರ ಪೋಸ್ಟರ್ ಅನ್ನು ಯಾದವ್ ಗಿರಿಯ ಕೆ ಆರ್ ಎಸ್ ರಸ್ತೆಯಲ್ಲಿರುವ ಶ್ರೀ ಉಸಿರಾಜು ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಇಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಜಾತ್ಯತೀತ ಪಕ್ಷತೀತವಾಗಿ...






