ಎಚ್. ಮಟಕೆರೆ ಶಾಲೆಯಲ್ಲಿ ಬಡ್ತಿ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಪ್ಪ ರವರಿಗೆ ಬೀಳ್ಕೊಡುಗೆ.
ಹೆಚ್.ಡಿ.ಕೋಟೆ:- ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಎಚ್ ಡಿ ಕೋಟೆ ತಾಲೂಕಿನ ಎಚ್ ಮಟಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಲ್ ಕೃಷ್ಣಪ್ಪ ರವರನ್ನ ಶಾಲೆಯ ಶಿಕ್ಷಕರಿಂದ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಗುರುವಾರ ಬೀಳ್ಕೊಡುಗೆ ಮಾಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪರವರು ಮಾತನಾಡಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ. ನಾನು ಕಳೆದ ಮೂರು ವರ್ಷ ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಈ ಗ್ರಾಮದ ಜನರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ ಎಂದರು. ಎಲ್ ಕೃಷ್ಣಪ್ಪ ರವರು 32 ವರ್ಷ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಅವರು ಬರುವ ಮೇ 31ಕ್ಕೆ ನಿವೃತ್ತಿಯಾಗಲಿದ್ದಾರೆ. ಪ್ರಸ್ತುತ ಅವರು ಎಚ್ ಡಿ ಕೋಟೆ ತಾಲೂಕಿನ ಮಲಾರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 8 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ ಪಿ...









