ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ ” ಸಾಕ್ರೆಟಿಸ್………
ಕ್ರಿಸ್ತ ಪೂರ್ವ 399 ಇಸವಿಯ ಆಸುಪಾಸಿನಲ್ಲಿ ಬದುಕಿದ್ದ ಪಾಶ್ಚಾತ್ಯ ಸಂಸ್ಕೃತಿಯ ಅತ್ಯದ್ಬುತ ಚಿಂತಕ, ಗ್ರೀಕ್ ದೇಶದ ಅಥೆನ್ಸ್ ನ ಈ ಸಾಕ್ರೆಟಿಸ್. ಮತ್ತೊಬ್ಬ ಅದ್ಭುತ ತತ್ವಜ್ಞಾನಿ ಪ್ಲೋಟೋ ಕೂಡ ಇವರ ಶಿಷ್ಯರೇ ಆಗಿದ್ದರು. ಬಹುತೇಕ ಭಾರತದ ಗೌತಮ ಬುದ್ಧ, ಚೀನಾದ ಕನ್ಫ್ಯೂಷಿಯಸ್, ಲಾವೋತ್ಸೇ ಎಂಬ ಜಗತ್ತಿನ ಅತ್ಯದ್ಭುತ ಚಿಂತಕರ ರೀತಿಯಲ್ಲಿಯೇ ಕ್ರಿಸ್ತಪೂರ್ವ ಕಾಲಘಟ್ಟದ, ನಾಗರಿಕತೆಯ ಪ್ರಾರಂಭದ ಹಂತದಲ್ಲೇ ಮನುಷ್ಯನ ಅಂತಃಶಕ್ತಿ ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅತ್ಯಮೂಲ್ಯ ಸಾರ್ವತ್ರಿಕ...





