Latest News

ಸಮಾನ ಅವಕಾಶವಿರುವ ಸಮಸಮಾಜವೇ ಕನಕಗುರುಪೀಠದ ಆಶಯ: ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ

ಕನಕಗುರುಪೀಠ ಜಾತ್ಯಾತೀತ ಪೀಠ: ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರಾಯಚೂರು, ಫೆಬ್ರವರಿ 1: ಸಮಾನ ಅವಕಾಶ, ಸಮಾನ ಗೌರವ ಮತ್ತು ಜಾತ್ಯಾತೀತ ಚಿಂತನೆಯನ್ನೊಳಗೊಂಡ ಸಮಸಮಾಜ ನಿರ್ಮಾಣವೇ ಕನಕಗುರುಪೀಠದ ಮೂಲ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕದಲ್ಲಿ ಕನಕಗುರುಪೀಠವು ಜಾತಿ-ಧರ್ಮ ಮೀರಿ ಸಮಾಜವನ್ನು ಒಗ್ಗೂಡಿಸುವ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಲೀನ ಪರಮಪೂಜ್ಯ...
Latest News

ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್: ಡಾ.ಈ.ಸಿ.ನಿಂಗರಾಜ್ ಗೌಡ.

ಇಂದಿನ ಕೇಂದ್ರ ಸರ್ಕಾರದ 2026-27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ (Union Budget 2026-27) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿರುವ ಬಜೆಟ್ ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷಕ್ಕೆ ಸರ್ಕಾರದ ಆದಾಯ-ಖರ್ಚು ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಮೇಲ್ವಿಚಾರಣೆ, ಸರ್ಕಾರದ...
Latest News

ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಿ.ಟಿ. ರವಿಗೆ ಪಿಎಚ್‌ಡಿ: ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ

ರಾಜಕೀಯ ಬ್ಯುಸಿಯ ಮಧ್ಯೆಯೂ ಶೈಕ್ಷಣಿಕ ಸಾಧನೆ: ಸಿ.ಟಿ. ರವಿ ಡಾಕ್ಟರೇಟ್ ಪಡೆದರು ಮೈಸೂರು, ಜನವರಿ 31:- ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆದ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸಿ.ಟಿ. ರವಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದರು. ಈ ವೇಳೆ ಸಿ.ಟಿ. ರವಿ ರಾಜ್ಯಪಾಲರ ಕಾಲಿಗೆ ನಮಸ್ಕರಿಸಿ...
Latest News

ಸ್ವಾವಲಂಬಿ ಮತ್ತು ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ – ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್

ದೂರ ಶಿಕ್ಷಣದಿಂದ ಶಕ್ತಿಶಾಲಿ ಭಾರತ ನಿರ್ಮಾಣ: ಕೆಎಸ್ಒಯು ಘಟಿಕೋತ್ಸವದಲ್ಲಿ ರಾಜ್ಯಪಾಲರ ಸಂದೇಶ ಮೈಸೂರು, ಜನವರಿ 31:- ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಉನ್ನತಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣವೇ ಸ್ವಾವಲಂಬಿ ಮತ್ತು...
Latest News

ಒಗ್ಗಟ್ಟು, ಸಂಸ್ಕೃತಿ, ಸ್ವದೇಶಿ ಚಿಂತನೆ: ಹಿಂದು ಸಮಾಜೋತ್ಸವದಲ್ಲಿ ನಾಯಕರ ಕರೆ

ಹಿಂದುಗಳ ಏಕತೆ ನಮ್ಮ ಕರ್ತವ್ಯ: ಲಕ್ಷ್ಮೀಪುರಂ ನಗರದಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ ಮೈಸೂರು:- ಹಿಂದು ಸಮಾಜದ ಏಕತೆ, ಸಾಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಉದ್ದೇಶದಿಂದ ಲಕ್ಷ್ಮೀಪುರಂ ನಗರ ಘಟಕದ ವತಿಯಿಂದ ಹಿಂದು ಸಮಾಜೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ನಗರದ ವಿವಿಧ ಭಾಗಗಳಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ ಆಯೋಜಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದ್ದರು. ಮೆರವಣಿಗೆಯು ಜಯನಗರದ...
Latest News

ಕ್ರಿಕೆಟ್: ಭಾರತ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕುತೂಹಲ

ಭಾರತೀಯ ಕ್ರಿಕೆಟ್ ತಂಡ ಮುಂದಿನ ಸರಣಿಗಳಿಗೆ ಸಜ್ಜಾಗುತ್ತಿದ್ದು, ಆಟಗಾರರ ಫಾರ್ಮ್ ಮತ್ತು ತಂಡದ ಆಯ್ಕೆ ಕುರಿತ ಚರ್ಚೆಗಳು ಜೋರಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹಿರಿಯ ಆಟಗಾರರೊಂದಿಗೆ ತಂಡದ ಸಮತೋಲನ ಹೇಗೆ ರೂಪುಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಮತ್ತು ಇತರೆ ಟೂರ್ನಿಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ತಂಡಗಳು ಉತ್ತಮ ಹೋರಾಟ ನೀಡುತ್ತಿವೆ. ಯುವ ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸುತ್ತಿದ್ದು, ವೇಗದ...
Latest News

ಲ್ಯಾಂಡ್ ಲಾರ್ಡ್ ಸಿನಿಮಾ…..

ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಅಸುರನ್, ಜೈ ಭೀಮ್, ಕಾಟೇರ, ಛಾವ, ಧುರಂದರ್, ಈಗ ಲ್ಯಾಂಡ್ ಲಾರ್ಡ್  ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ, ಅಕ್ರಮ, ಹಿಂಸೆ, ತಾರತಮ್ಯಗಳನ್ನು ಮನರಂಜನೆ, ವ್ಯಾಪಾರ ಮತ್ತು ಕಲಾತ್ಮಕವಾಗಿ ಚಿತ್ರಿಸಿ ಯಶಸ್ಸು ಪಡೆಯಲಾಗುತ್ತಿದೆ. ಜನರು ಸಹ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹಿಂಸೆ, ಕ್ರೌರ್ಯ, ಅಸಮಾನತೆ, ಅಮಾನವೀಯತೆಯು ಒಂದು ಮನರಂಜನೆ ಎಂಬಲ್ಲಿಗೆ ನಮ್ಮ ಮನಸ್ಥಿತಿಗಳು ಬಂದು ತಲುಪಿದೆ…… ಸಿನಿಮಾಗಳ...
Latest News

ಸರ್ವೋದಯ ಮತ್ತು ಹುತಾತ್ಮರ ದಿನ…. ಜನವರಿ 30…..ಹೀಗೊಬ್ಬ ಮಹಾತ್ಮ…..

  ಗಾಂಧಿ,  ನಿನ್ನನ್ನು ಕೊಂದು ಸುಮಾರು 78 ವರ್ಷಗಳಾಯಿತು.  ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ ” ಹುತಾತ್ಮರ ದಿನ ” ಎಂದು ಆಚರಿಸಿಕೊಂಡು ಬರುತ್ತಿದ್ದೇವೆ…..   ಅಂದು ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದೆ. ಪ್ರಾರಂಭದ ದಿನಗಳಲ್ಲಿ ನಿನ್ನನ್ನು ಮಹಾತ್ಮ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಯಾಕೋ ನಿನ್ನನ್ನು ಟೀಕಿಸುವವರೇ ಹೆಚ್ಚಾಗಿದ್ದಾರೆ. ಬಹಳ ಅನುಮಾನದಿಂದಲೇ ನೋಡುತ್ತಿದ್ದಾರೆ. ಜನರಿಗೆ ಈಗ ಹಣ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಜನ ಓದಿ ವಿದ್ಯಾವಂತಾಗಿದ್ದಾರೆ....
Latest News

ಜ.30ರಂದು ತೆರೆಕಾಣಲಿದೆ ಅರ್ಜುನನ ಸ್ಮರಣೆಗೆ ಸಮರ್ಪಿತ ‘ಮಾವುತ’ ಚಿತ್ರ

  ಮೈಸೂರು:-ಮೈಸೂರು ದಸರೆಯ ಶೋಭೆ ಹೆಚ್ಚಿಸಿದ್ದ, ಅನೇಕ ಬಾರಿ ಅಂಬಾರಿ ಹೊತ್ತು ಜನಮನ ಗೆದ್ದಿದ್ದ ಮಹಾನಾಯಕ ಆನೆ ಅರ್ಜುನನ ಸ್ಮರಣೆಗೆ ಸಮರ್ಪಿತವಾದ ‘ಮಾವುತ’ ಚಲನಚಿತ್ರ ಜ.30ರಂದು ರಾಜ್ಯಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಅರಣ್ಯ, ಕಾಡಿನ ಸಂಸ್ಕೃತಿ ಹಾಗೂ ಮಾವುತರ ಬದುಕಿನ ನೈಜ ಕಥನವನ್ನು ಒಳಗೊಂಡಿರುವ ಈ ಚಿತ್ರ, ವಾಣಿಜ್ಯ ಚಿತ್ರಗಳ ನಡುವೆ ವಿಭಿನ್ನ ಪ್ರಯತ್ನವಾಗಿ ಮೂಡಿಬಂದಿದೆ. ಈ ಸಂಬಂಧ ಮೈಸೂರಿನ ಪತ್ರಕರ್ತರ ಭವನದಲ್ಲಿ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ, ಚಿತ್ರದ ಹಿನ್ನೆಲೆ, ಚಿತ್ರೀಕರಣದ...
Latest News

29-01-2026 ರ ಗುರುರಾಯರ ಯೋಗದಿಂದ ಈ ಮೂರು ರಾಶಿಯವರಿಗೆ ಲಕ್ಷ್ಮಿ ಯೋಗ

ಮೇಷ ರಾಶಿ ಮೇಷ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಈ ರಾಜಯೋಗ ಜೀವನದಲ್ಲಿ ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ನಿರೀಕ್ಷಿಸಬಹುದು. ನೀವು ಆರ್ಥಿಕ ತೊಂದರೆಗಳಿಂದ ಪರಿಹಾರ ಪಡೆಯಬಹುದು ಮತ್ತು ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಅವಿವಾಹಿತರಿಗೆ ಸೂಕ್ತ ವಿವಾಹ ಸಂಗಾತಿ ಕೈ ಹಿಡಿಯುವ ಸಮಯ. ಈಗಾಗಲೇ ವಿವಾಹವಾದವರ ವೈವಾಹಿಕ ಜೀವನದಲ್ಲೂ ಹೊಸ ಸಂತೋಷ ಶಾಂತಿ ನೆಮ್ಮದಿ ನೆಲೆಸಲಿದೆ. ಈ ಸಮಯದಲ್ಲಿ ಮಕ್ಕಳ ಪ್ರಗತಿ ಗಮನಾರ್ಹವಾಗಿ ಹೆಚ್ಚಾಗಲಿದೆ....
1 37 38 39 40 41 62
Page 39 of 62