Latest News

ಮಹಾರಾಜ ಕಾಲೇಜು ಮೈದಾನದಲ್ಲಿ ‘ಮೈಸೂರು ಸಂತೆ’ಗೆ ಚಾಲನೆ

ಸ್ಥಳೀಯ ಉತ್ಪನ್ನಗಳಿಗೆ ವೇದಿಕೆ, ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಹೆಜ್ಜೆ ಮೈಸೂರು, ಫೆ.7: ನಗರದ ಐತಿಹಾಸಿಕ ಮಹಾರಾಜ ಕಾಲೇಜು ಮೈದಾನವು ಶುಕ್ರವಾರ ಬಣ್ಣ ಬಣ್ಣದ ಮಳಿಗೆಗಳು, ಸ್ಥಳೀಯ ಉತ್ಪನ್ನಗಳ ಸುವಾಸನೆ ಮತ್ತು ಜನರ ಸಂಚಾರದಿಂದ ಸಂಭ್ರಮದ ವಾತಾವರಣಕ್ಕೆ ಸಾಕ್ಷಿಯಾಯಿತು. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ‘ಮೈಸೂರು ಸಂತೆ’ ಕಾರ್ಯಕ್ರಮವನ್ನು ಗಣ್ಯರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಈ ಸಂತೆ ಗ್ರಾಮೀಣ ಕೈಗಾರಿಕೆಗಳಿಗೆ ಬೆಂಬಲ ಒದಗಿಸುವುದರ...
Latest News

ಬೆಳವಾಡಿ ಶಾಲೆಯಲ್ಲಿ ತರಗತಿ ಕೊಠಡಿ ನವೀಕರಣ, ಕುಡಿಯುವ ನೀರಿನ ವ್ಯವಸ್ಥೆ

ಆರ್ಪಿಜಿ ಫೌಂಡೇಶನ್ ಸಿಎಸ್ಆರ್ ಉಪಕ್ರಮಕ್ಕೆ ಚಾಲನೆ ಮೈಸೂರು, ಫೆ. 6: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಆರ್ಪಿಜಿ ಫೌಂಡೇಶನ್ನ ಸಿಎಸ್ಆರ್ (ಸಮುದಾಯ ಅಭಿವೃದ್ಧಿ) ಉಪಕ್ರಮದಡಿ, ಕೆಇಸಿ ಏಷಿಯನ್ ಕೇಬಲ್ಸ್ ಲಿಮಿಟೆಡ್ನ ಮೈಸೂರು ಘಟಕವು ಬೆಳವಾಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂರು ತರಗತಿ ಕೊಠಡಿಗಳನ್ನು ನವೀಕರಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ಸೌಲಭ್ಯಗಳನ್ನು ಇತ್ತೀಚೆಗೆ ಉದ್ಘಾಟಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸಂತೋಷ ಮೂಡಿಸಿದೆ. ನವೀಕರಿಸಲಾದ ತರಗತಿ ಕೊಠಡಿಗಳು...
Latest News

ಹಿರಿಯ ಪತ್ರಕರ್ತ ಕೆ.ವಿ. ಶ್ರೀನಿವಾಸನ್ ನಿಧನಕ್ಕೆ ಮಾಧ್ಯಮ ವಲಯ ಕಂಬನಿ

“ಬ್ರದರ್”ಅಗಲಿಕೆ: ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಮೈಸೂರು, ಫೆ. 06:-  ಹಿರಿಯ ಪತ್ರಕರ್ತ ಹಾಗೂ ಮಾಧ್ಯಮ ವಲಯದಲ್ಲಿ “ಬ್ರದರ್” ಎಂದೇ ಆತ್ಮೀಯವಾಗಿ ಪರಿಚಿತರಾಗಿದ್ದ ಕೆ. ವಿ. ಶ್ರೀನಿವಾಸನ್ ಅವರು ಶುಕ್ರವಾರ ಸಂಜೆ ನಿಧನರಾದರು. ಹುಣಸೂರು ಸಮೀಪದ ಕಲ್ಕುಣಿಕೆ ಗ್ರಾಮದ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರು ಹಲವು ದಶಕಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಗುರುತು ಮೂಡಿಸಿಕೊಂಡಿದ್ದರು. ಕಳೆದ ಕೆಲವು...
Latest News

ಕೆ.ಆರ್.ನಗರಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ: ಶಾಸಕ ರವಿಶಂಕರ್ ಆತ್ಮೀಯ ಸ್ವಾಗತ

ವರದಿ :-ವಡ್ಡರಕೊಪ್ಪಲು ಶಿವರಾಮು. ಕ್ಷೇತ್ರ ಅಭಿವೃದ್ಧಿಗೆ ಬೆಂಬಲದ ಭರವಸೆ: ಕೆ.ಆರ್.ನಗರದಲ್ಲಿ ಗೃಹ ಸಚಿವರ ಮಾತು ಕೆ.ಆರ್.ನಗರ, ಫೆ. 06: ಹಾಸನದಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೆ.ಆರ್.ನಗರ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಪಟ್ಟಣದ ಪುರಸಭೆ ವೃತ್ತದಲ್ಲಿ ನಡೆದ ಸ್ವಾಗತ ಕಾರ್ಯಕ್ರಮ ರಾಜಕೀಯ ಉತ್ಸಾಹದಿಂದ ಕಂಗೊಳಿಸಿತು ಪಟಾಕಿ ಸಂಭ್ರಮದಲ್ಲಿ ಸಚಿವರಿಗೆ ಸ್ವಾಗತ, ಹೆಚ್ಚುವರಿ ಪೊಲೀಸ್...
Latest News

ಶ್ರೀ ಹನುಮಾನ್ ಚಾಲೀಸ ಪಾರಾಯಣ  ಮಹಾಯಜ್ಞಕೆ  ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ  ಕರೆ

ಮೈಸೂರು :- ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ  ಮಹಾಯಜ್ಞದ ಭಿತ್ತಿಪತ್ರವನ್ನ  ಶ್ರೀದತ್ತವಿಜಯಾನಂದ ಸ್ವಾಮೀಜಿ ಮತ್ತು ಶಾಸಕ ಟಿಎಸ್ ಶ್ರೀವತ್ಸ ರವರು  ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಆವರಣದಲ್ಲಿ ಬಿಡುಗಡೆ ಮಾಡಿದರು, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ಮಾತನಾಡಿ *ಹನುಮಾನ್ ಚಾಲೀಸ ಪಠಣದಿಂದ ಮನುಷ್ಯನ...
Latest News

ಜಿಲ್ಲಾಧಿಕಾರಿಗಳ ಆದೇಶದಂತೆ ಒತ್ತುವರಿ ತೆರವುಗೊಳಿಸಿದ ಮೈಸೂರು ತಹಶೀಲ್ದಾರ್

ಮೈಸೂರು,ಫೆ.6:- ಮೈಸೂರು ತಾಲ್ಲೂಕು ಕಸಬಾ ಹೋಬಳಿ, ಮೈಸೂರು ಗ್ರಾಮದ ಸ.ನಂ.87ರಲ್ಲಿ 0.38 ಎಕರೆ/ಗುಂಟೆ ಜಮೀನನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಸಂಖ್ಯೆ: LND(1)CR: 280/2009-10, ದಿನಾಂಕ: 30.08.2010 ರ ಆದೇಶದಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ರವರಿಗೆ ಮೆಟ್ರಿಕ್‌ ನಂತರದ ಬಾಲಕಿಯರ/ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ದೇಶಕ್ಕಾಗಿ ಕಾಯ್ದಿರಿಸಿ ಆದೇಶಿಸಲಾಗಿತ್ತು. ಸದರಿ ಪ್ರದೇಶದಲ್ಲಿ ಅನಧಿಕೃತವಾಗಿ ಸ್ಕೂಟರ್‌ ಪಾರ್ಕಿಂಗ್‌ ಮಾಡುತ್ತಿದ್ದುದರಿಂದ ಸದರಿ ಒತ್ತುವರಿಯನ್ನು ತೆರವು ಮಾಡಿಕೊಡುವಂತೆ...
Latest News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ

ಬೆಂಗಳೂರು :- ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಜನರ ಅಹವಾಲಿಗೆ ಕಿವಿಯಾಬೇಕಿರುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ನಂಬಿರುವ ನಮಗೆ ನಿಮ್ಮ ಅಹವಾಲುಗಳೇ...
Latest News

ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆಯ 500 ಮಕ್ಕಳಿಗೆ ನೋಟ್ಬುಕ್ ಹಾಗೂ  ದಿನಸಿ ಕಿಟ್ ವಿತರಣೆ

ಮೈಸೂರು :-  ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿಗಳಿಗೆ ಶ್ರೀ ವಿದ್ಯಾನಂದ ಸ್ವಾಮಿಗಳು ಎಂಬ ನಾಮವನ್ನು ಅನುಗ್ರಹಿಸಿದ ಪುಣ್ಯ ಕಾರ್ಯಕ್ರಮದ ಸ್ಮರಣಾರ್ಥ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ಜರುಗಿದವು. ಗುರುವಾರ ಬೆಳಗ್ಗೆ ಹೂಟಗಳ್ಳಿಯಲ್ಲಿರುವ ಕನ್ನಡಾಂಬೆ ರಕ್ಷಣಾ ವೇದಿಕೆ ಕಚೇರಿ ಎದುರು ಅಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಿಧ ಸರ್ಕಾರಿ ಶಾಲೆಗಳ ೫೦೦ಕ್ಕೂ...
Latest News

ಕೇಂದ್ರ ಬಜೆಟ್ ಅವಲೋಕನ: ವಿದ್ಯಾರ್ಥಿಗಳಿಗೆ ಆರ್ಥಿಕ ಅರಿವು ಮೂಡಿಸಿದ ಉಪನ್ಯಾಸ

ಬಜೆಟ್ ದೇಶದ ಅಭಿವೃದ್ಧಿಯ ದಿಕ್ಸೂಚಿ: ಡಾ. ರವಿ ಭಂಡಾರಿ ಮೈಸೂರು:-  ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಂಯುಕ್ತ ಆಶ್ರಯದಲ್ಲಿ “ಕೇಂದ್ರ ಬಜೆಟ್ 2026–27: ಒಂದು ಅವಲೋಕನ” ಎಂಬ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ದೇಶದ ಆರ್ಥಿಕ ನೀತಿಗಳು, ಸರ್ಕಾರದ ಆದಾಯ–ವ್ಯಯ ತಂತ್ರಗಳು ಹಾಗೂ ಸಾಮಾಜಿಕ ಅಭಿವೃದ್ಧಿಯ ಮೇಲೆ ಬಜೆಟ್‌ನ ಪರಿಣಾಮಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ...
Latest News

ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಗಳನ್ನು ನೀಡಿ ಸುಮ್ಮನಾಗದೆ ಅಭಿವೃದ್ಧಿ ಕಾಮಗಾರಿಗಳಿಗೂ ನೂರಾರು ಕೋಟಿ : ಶಾಸಕ ಡಿ ರವಿಶಂಕರ್

15 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ನಿಜಗನಹಳ್ಳಿ ಗ್ರಾಮ : ಶಾಸಕ ಡಿ ರವಿಶಂಕರ್ ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 05:-  ಹೊಸಕೋಟೆ ಗ್ರಾಮದ ಕೆರೆ ಅಭಿವೃದ್ಧಿಗಾಗಿ 30 ಲಕ್ಷ ರೂ ಗಳ ವೆಚ್ಚದ ಹೂಳೆತ್ತುವ ಕಾಮಗಾರಿ ಮತ್ತು ಕೆರೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 2.96ಕೊಟ್ಟಿರೂ ಗಳ ಕಾಮಗಾರಿಯ ಗುದ್ದಲಿಪೂಜೆ ಮತ್ತು...
1 34 35 36 37 38 62
Page 36 of 62