Latest News

ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಅಲೆಮಾರಿ ಮಹಿಳೆಗೆದಸಂಸ ದ ವತಿಯಿಂದ ಆಹಾರದ ಕಿಟ್ ವಿತರಣೆ

ಮೈಸೂರು:- ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡ ಮೈಸೂರಿನ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಮಹಿಳೆ ಲಕ್ಷ್ಮಮ್ಮಳಿಗೆ ದಿನಾಂಕ :19-03-2026ರ ಗುರುವಾರ ದಸಂಸ ದ ವತಿಯಿಂದ ಆಹಾರದ ಕಿಟ್ನ್ನು ಕೊಡಲಾಯಿತು.ಈ ಸಂದರ್ಭದಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಕಾಳಪ್ಪನ ಹೆಂಡತಿ ಲಕ್ಷ್ಮಮ್ಮ 65 ವರ್ಷ ಕಳೆದ ಕೆಲವು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಬೆಳ್ಳೂರು ಕ್ರಾಸ್ನಲ್ಲಿ...
Latest News

ಡಾ. ಪೂರ್ಣಿಮಾ ಎ.ಪಿ ಅವರಿಗೆ ಅಂತರಾಷ್ಟ್ರೀಯ “ಹಿಂದಿ ಗೌರವ್ ಸಮ್ಮಾನ್ 2026” ಗೌರವ

ಮೈಸೂರು, ಮಾರ್ಚ್ :- ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಡಾ. ಪೂರ್ಣಿಮಾ ಎ.ಪಿ ಅವರಿಗೆ ದುಬೈನ (ಯುಎಇ) ‘ಸಾಹಿತ್ಯ ಅರ್ಪಣ್’ ಸಂಸ್ಥೆಯು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯಾದ “ಹಿಂದಿ ಗೌರವ್ ಸಮ್ಮಾನ್ 2026” ಅನ್ನು ನೀಡಿ ಗೌರವಿಸಿದೆ. ಹಿಂದಿ ಭಾಷೆ ಮತ್ತು ಸಾಹಿತ್ಯಕ್ಕೆ ಅವರು ಸಲ್ಲಿಸಿದ ಅಪಾರ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ ಈ ಜಾಗತಿಕ ಗೌರವವನ್ನು ನೀಡಲಾಗಿದೆ. ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆ ಡಾ. ಪೂರ್ಣಿಮಾ ಅವರು ಪ್ರಸ್ತುತ...
Latest News

“ಸದ್ಯಕ್ಕೆ ನಮ್ಮಲ್ಲಿಲ್ಲ, ಮುಂದೆ ನೋಡೋಣ”: ಜಿ.ಟಿ.ಡಿ. ವಿಚಾರದಲ್ಲಿ ಸಾರಾ ಮಹೇಶ್ ಸ್ಪಷ್ಟನೆ

ಮೈಸೂರು: ರಾಜಕೀಯದ ಅಂಗಳದಲ್ಲಿ ಮೌನಕ್ಕಿಂತ ಮಾತೇ ಹೆಚ್ಚು ಕಂಗೊಳಿಸುವ ಕ್ಷಣಗಳು ಇವೆ. ಅಂತಹ ಕ್ಷಣವೊಂದರಲ್ಲಿ, ಜೆಡಿಎಸ್ ಒಳರಾಜಕೀಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ S. R. Mahesh ಅವರು, ಶಾಸಕ G. T. Devegowda ಅವರ ಪಕ್ಷದ ಸ್ಥಿತಿಗತಿಗಳ ಕುರಿತು ಸ್ಪಷ್ಟನೆ ನೀಡಿದರು. “ಸದ್ಯಕ್ಕಂತೂ ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲಿ ಇಲ್ಲ ಎಂದು ನಮ್ಮ ನಾಯಕ H. D. Kumaraswamy ಅವರೇ ಹೇಳಿದ್ದಾರೆ. ಇನ್ನೂ ಎರಡು-ಅರ್ಧ ವರ್ಷ ಸಮಯವಿದೆ, ಮುಂದೆ ನೋಡೋಣ,” ಎಂದು...
Latest News

ಮಾ. 23ರಂದು ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ಮೈಸೂರು:- ನಗರದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ, ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಧೀನದ ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಮಾ. 23ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಜಂಟಿ ಕಾರ್ಯದರ್ಶಿ ಶೇಷ ನಾರಾಯಣ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು....
Latest News

ಮೈಸೂರು ನಗರಕ್ಕೆ ಹೊಸ DCP: ಡಾ. ಹರ್ಷ ಪ್ರಿಯಂವದ ನೇಮಕ – ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮೈಸೂರು, ಮಾರ್ಚ್ 18, 2026: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಕೈಗೊಂಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆ, ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (DCP) ಡಾ. ಹರ್ಷ ಪ್ರಿಯಂವದ ಅವರನ್ನು ನೇಮಕ ಮಾಡಲಾಗಿದೆ. 2020 ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಡಾ. ಹರ್ಷ ಪ್ರಿಯಂವದ ಅವರು ಈ ಹಿಂದೆ ಕ್ರಿಮಿನಲ್...
Latest News

‘ಮಂಟೇಸ್ವಾಮಿ ಕಥಾಪ್ರಸಂಗ’ ರಂಗಮಂಚದಲ್ಲಿ ದೈವಿಕ ಸ್ಪಂದನೆ: ತಮಟೆ ನಾದದಿಂದ ಪ್ರೇಕ್ಷಕರ ಮನಸೂರೆ

ತುಮಕೂರು:- ಜನಪದ ಸುವಾಸನೆ, ಆಧ್ಯಾತ್ಮಿಕ ಹೊಳಪು ಮತ್ತು ರಂಗಭೂಮಿ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದ ಅಪರೂಪದ ನಾಟಕೀಯ ಅನುಭವಕ್ಕೆ ನಗರ ಸಾಕ್ಷಿಯಾಯಿತು. ಶನಿವಾರ ಸಂಜೆ ನಡೆದ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ, ತನ್ನ ವಿಶಿಷ್ಟ ನಿರೂಪಣೆ ಮತ್ತು ಮನಮುಟ್ಟುವ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನದಲ್ಲಿ ದೀರ್ಘಕಾಲ ಉಳಿಯುವ ಗುರುತು ಮೂಡಿಸಿತು. ನಾಟಕ ಆರಂಭಕ್ಕೂ ಮೊದಲು ಇಡೀ ಸಭಾಂಗಣ ತಮಟೆ ನಾದದಿಂದ ಮಾರ್ದನಗೊಂಡಿತು. ಬಣ್ಣದ ಪೇಟ, ಕರಿ ಕೋಟು ಧರಿಸಿದ ಕಲಾವಿದರು ತಮಟೆ...
Latest News

ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ಸ್ವಾಮೀಜಿಯ ಮನವಿ: ಅಹಿಂಸಾ ಸಂದೇಶ ಯಾತ್ರೆಗೆ ಚಾಲನೆ

ಮೈಸೂರು:- ಸರಗೂರು ತಾಲೂಕಿನ ಕುಂದೂರು ಗ್ರಾಮದ ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಯುಗಾದಿ ಹಬ್ಬದಂದು ಭಕ್ತಿಭಾವದಿಂದ ಜರುಗಲಿರುವ ಹಿನ್ನೆಲೆ, ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾತ್ರೆ ಸಂದರ್ಭಕ್ಕೆ ಸಹಸ್ರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ,...
Latest News

ವೇದಾಂತ ಬರೀ ಬಾಯಿಪಾಠಕ್ಕಲ್ಲ, ಬದುಕಿನ ನಡವಳಿಕೆಗೆ

ಮನದ ಮಾತು: by Pooja raghunandan ಇವತ್ತು ನಾವು ಯಾವುದೋ ಒಂದು ವೇದಾಂತದ ಮಾತನ್ನು ನಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ‘ಅನುಕೂಲಸಿಂಧು’ ಮನಸ್ಥಿತಿಯ ಬಗ್ಗೆ ಮಾತಾಡೋಣ. ನಮ್ಮ ಹಿರಿಯರು ಒಂದು ಮಾತು ಹೇಳ್ತಾರೆ, “ಸ್ಥಳದ ಮಹಿಮೆ ಮತ್ತು ಸಂಸ್ಕಾರ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ” ಎಂದು. ಈ ಮಾತಿಗೆ ಪೂರಕವಾಗಿ ಒಂದು ಸಣ್ಣ ಕಥೆ ನೆನಪಾಗುತ್ತಿದೆ. ಒಂದು ಊರಿನಲ್ಲಿ ಅತ್ಯಂತ ಸುಂದರವಾದ, ಪುರಾತನವಾದ ಬೃಂದಾವನವಿತ್ತು. ಅದು ಸಾಧಕರತಪೋಭೂಮಿ. ಅದರ ಎದುರಿಗೇ ಒಂದು ತಿಳಿನೀರಿನ...
Latest News

ಅಪ್ಪು 51ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ಅನ್ನದಾನ, ನೆನಪುಗಳ ನಿನಾದದಲ್ಲಿ ಸಂಭ್ರಮಾಚರಣೆ

ಮೈಸೂರು: ಸ್ಯಾಂಡಲ್ವುಡ್ನ ಅಪ್ರತಿಮ ನಟ ಪುನೀತ್ ರಾಜ್ ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಅಭಿಮಾನಿಗಳು ಹೃದಯಪೂರ್ವಕವಾಗಿ ಸಂಭ್ರಮಾಚರಣೆ ನಡೆಸಿದರು. ಸಬರ್ ಬಸ್ ಸ್ಟ್ಯಾಂಡ್ ಎದುರು ಅಪ್ಪು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ, ಕೇವಲ ಹುಟ್ಟುಹಬ್ಬ ಆಚರಣೆಯಷ್ಟೇ ಅಲ್ಲದೆ, ಸೇವಾ ಮನೋಭಾವವನ್ನು ಪ್ರತಿಬಿಂಬಿಸಿದ ವಿಶೇಷ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ಬೆಳಗ್ಗಿನಿಂದಲೇ ಅಭಿಮಾನಿಗಳು ಸೇರಿಕೊಂಡು ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ...
Latest News

ರಕ್ತ ದಾನ ಮಾಡಿ ಅಪ್ಪು ಸ್ಮರಿಸಿದ ಅಭಿಮಾನಿಗಳು

ಮೈಸೂರು:- ನಗರದ ಸಯಾಜಿ ರಾವ್ ರಸ್ತೆಯಲ್ಲಿರುವ ರಕ್ತ ನಿಧಿ ಕೇಂದ್ರದಲ್ಲಿ ಅಪ್ಪು ಅಭಿಮಾನಿಗಳು ರಕ್ತ ದಾನ ಮಾಡುವ ಮೂಲಕ ರಕ್ತದಾನ ಮಹಾದಾನ ಎಂಬ ಸಂದೇಶ ಸಾರುವ ಮೂಲಕ ಪುನೀತ್ ರಾಜಕುಮಾರ್ ಜನ್ಮದಿನ ಸ್ಮರಣೆ ಮಾಡಿದ ಅಪ್ಪು ಅಭಿಮಾನಿಗಳ. ರಕ್ತದಾನ ಮಾಡಿ ನಂತರ ಮಾತನಾಡಿದ ಸೋನಾಲಿ ಜೈನ್ ಪುನೀತ್ ರಾಜಕುಮಾರ್ ನನ್ನ ನೆಚ್ಚಿನ ನಟ ಪ್ರತಿ 4 ತಿಂಗಳಿಗೊಮ್ಮೆ ನಾನು ರಕ್ತದಾನ ಮಾಡುತ್ತಿದ್ದು ಇದಕ್ಕೆ ಕಾರಣ ನನ್ನ ನೆಚ್ಚಿನ ನಟ ಅಪ್ಪು...
1 15 16 17 18 19 62
Page 17 of 62