Latest News

ಎಸ್‌ಡಿಎಮ್‌ಐಎಮ್‌ಡಿಯಲ್ಲಿ ‘ವಿಶನ್ ಮೈಸೂರು–2050’ ಮೌಲ್ಯಮಾಪನ ಆರಂಭ

ಮೈಸೂರು ಅಭಿವೃದ್ಧಿಗಾಗಿ 300ಕ್ಕೂ ಹೆಚ್ಚು ಯೋಜನೆಗಳ ಸಲ್ಲಿಕೆ : ಮಾರ್ಚ್ 23ರಂದು ಗ್ರ್ಯಾಂಡ್ ಫಿನಾಲೆ ಮೈಸೂರು, ಮಾ.14: ನಗರದ ಪ್ರತಿಷ್ಠಿತ ಎಸ್ಡಿಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (SDMIMD) ವತಿಯಿಂದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯೋಜಿಸಿರುವ ‘ವಿಶನ್ ಮೈಸೂರು–2050’ ಯೋಜನೆಗೆ ಸಲ್ಲಿಕೆಯಾದ ಪ್ರಸ್ತಾಪಗಳ ಮೌಲ್ಯಮಾಪನ ಪ್ರಕ್ರಿಯೆ ಇಂದು ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆರಂಭಗೊಂಡಿತು. ಮೈಸೂರಿನ ಭವಿಷ್ಯದ ಅಭಿವೃದ್ಧಿಗೆ ದೀರ್ಘಕಾಲೀನ ನೀಲನಕ್ಷೆ ರೂಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಗರಿಕರು, ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ...
Latest News

14-03-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕೆಲಸದ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಬಹುಕಾಲದಿಂದ ಯೋಚಿಸುತ್ತಿದ್ದ ಕೆಲಸವನ್ನು ಆರಂಭಿಸಲು ಇದು ಉತ್ತಮ ಸಮಯ. ಕುಟುಂಬದವರ ಸಹಕಾರ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಆರ್ಥಿಕವಾಗಿ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೂ ಅಗತ್ಯ ಕೆಲಸಗಳಿಗಾಗಿ ಮಾತ್ರ ಖರ್ಚು ಮಾಡುವಿರಿ. ಸ್ನೇಹಿತರೊಂದಿಗೆ ಮಾತುಕತೆ ಮನಸ್ಸಿಗೆ ಹಿತ ನೀಡಬಹುದು. ಆರೋಗ್ಯದ ವಿಷಯದಲ್ಲಿ ಅಲ್ಪ ಮಟ್ಟಿನ ದೌರ್ಬಲ್ಯ ಕಂಡುಬಂದರೂ ವಿಶ್ರಾಂತಿ ತೆಗೆದುಕೊಂಡರೆ...
Latest News

ಮಹಿಳೆ ದುರ್ಬಳಲ್ಲ, ಸಬಲಳು : ಹುಣಸೂರು ನಗರಸಭಾ ಆಯುಕ್ತೆ ಮಾನಸ

ಹುಣಸೂರು:- ಮಹಿಳೆ  ದುರ್ಬಳಲ್ಲ ಅವಳು ಸಬಲಳು  ಎಂದು ಹುಣಸೂರು ನಗರಸಭಾ ಆಯುಕ್ತರಾದ ಮಾನಸ ಮೇಡಂ ರವರು ಹೇಳಿದರು. ಇವರು ದಿನಾಂಕ : 13-03-2026 ರ ಶುಕ್ರವಾರ ಹುಣಸೂರು ನಗರದ ಕಲ್ಕುಣಿಕೆಯ ಗುರುಗಳ ಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ  ಮತ್ತು ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ “ಮಹಿಳಾ ದಿನಾಚರಣೆಯ ಅಂಗವಾಗಿ” ಬಡ ಮಹಿಳೆ ಪಾರ್ವತಮ್ಮಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಾದ ನಾವು...
Latest News

ಮಹಿಳೆಯರಿಗೆ ಉಚಿತ ಎಚ್ ಪಿ ವಿ ಲಸಿಕೆ: ಭಾರತ್ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ

ಮೈಸೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶುಕ್ರವಾರ ಭಾರತ್ ಆಸ್ಪತ್ರೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (ಬಿಎಚ್ಐಒ) ವತಿಯಿಂದ ಹಮ್ಮಿಕೊಂಡ ಉಚಿತ ಎಚ್ ಪಿ ವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಬಿಎಚ್ಐಒ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮಹಿಳೆಯರಲ್ಲಿ ಮುನ್ನೆಚ್ಚರಿಕೆ ಆರೋಗ್ಯ...
Latest News

ತಂಬಾಕು ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆದ ದೇವೇಗೌಡ–ಕುಮಾರಸ್ವಾಮಿ

ವಿಶೇಷ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ. ಮಾ.13:-ರೈತರ  ಸಂಕಷ್ಟಕ್ಕೆ ಧಾವಿಸಿದ ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮತ್ತು ಕೇಂದ್ರ ಸಚಿವರು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ  ಸಚಿವರಾದ ಪಿಯೂಷ್  ಗೋಯಲ್ ರವರನ್ನು ಭೇಟಿ ಮಾಡಿ ರಾಜ್ಯದ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಜೆಡಿಎಸ್ ಪಕ್ಷದ ವರಿಷ್ಠರ ಮನವಿಗೆ...
Latest News

ಕಾಳಿಹುಂಡಿ ಶಿವಕುಮಾರ್ ಗೆ “ಕರ್ನಾಟಕ ರಾಜ್ಯ ರತ್ನ” ರಾಜ್ಯ ಪ್ರಶಸ್ತಿ.

ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಾಂಸ್ಕೃತಿಕ ರಂಗದಲ್ಲಿ ದೊಡ್ಡ ಹೆಸರು ಪಡೆದಿರುವ ಸಂಸ್ಥೆಯಾಗಿದ್ದು,  ಹಲವು ಸಾಧಕರನ್ನು ಗುರುತಿಸುತ್ತಾ ಬರುತ್ತಿದೆ. ಪ್ರತಿಷ್ಠಿತ ಈ ಸಂಸ್ಥೆಯಿಂದ ಕೊಡ ಮಾಡುವ “ಕರ್ನಾಟಕ ರಾಜ್ಯ ರತ್ನ” ರಾಜ್ಯ ಪ್ರಶಸ್ತಿಗೆ  ಮೈಸೂರಿನ ಲೇಖಕ, ವಿಮರ್ಶಕ, ಸಂಗ್ರಹಕ ಕಾಳಿಹುಂಡಿ ಕೆ ವಿ ಶಿವಕುಮಾರ್) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಆವರಣ, ಬೆಂಗಳೂರು ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿನಾಂಕ 15.03.2026...
Latest News

ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದ ದೇವೇಗೌಡ–ಕುಮಾರಸ್ವಾಮಿ

ದೆಹಲಿ :- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು,ತಂಬಾಕು ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಹಾಗೂ ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರರ ಬೇಡಿಕೆಗಳ ವಿಷಯವಾಗಿ ಸುದೀರ್ಘವಾಗಿ ಚರ್ಚಿಸಲಾಯಿತು. ನಮ್ಮ ಮನವಿಗೆ...
Latest News

ಜಿಎಸ್ಎಸ್ಎಸ್ಐಇಟಿಡಬ್ಲ್ಯೂನಲ್ಲಿ ‘Hack The Hackers–2026’ ಹ್ಯಾಕಥಾನ್: ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರಗಳಿಗೆ ವೇದಿಕೆ

ಮೈಸೂರು, ಮಾ.12: ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ನಗರದ ಜಿ.ಎಸ್.ಎಸ್.ಎಸ್.ಐಇಟಿಡಬ್ಲ್ಯೂ (GSSSIETW) ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ “Hack The Hackers – 2026” ಹ್ಯಾಕಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ನವೀನ ಆಲೋಚನೆಗಳು ಹಾಗೂ ಸೈಬರ್ ಭದ್ರತೆ ಸಂಬಂಧಿತ ಪರಿಹಾರಗಳ ಮೇಲೆ ಗಮನ ಹರಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ...
Latest News

ಕಿಡ್ನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ : ಮಲ್ಲಿಕಾರ್ಜುನ ಬಾಲದಂಡಿ

ಮೈಸೂರು : ಮಾ. 12 : ಕಿಡ್ನಿಯ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕರೆ ನೀಡಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತರರಾಷ್ಟ್ರೀಯ ಕಿಡ್ನಿ ದಿನದ ಅಂಗವಾಗಿ ಮೈಸೂರು ಆರ್ಗನೈಜೇಷನ್ ಆಫ್ ಜೈನೈಟೋ ಯೂರಿನರಿ ಸರ್ಜನ್ಸ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾಕತಾನ್ ಮತ್ತು ಸೈಕ್ಲೋತಾನ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವೇ...
Latest News

ಮಹಿಳೆಯರಿಗಾಗಿ ರಸಪ್ರಶ್ನೆ ಸ್ಪರ್ಧೆ: ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಶಸ್ವಿ ಆಯೋಜನೆ

ಮೈಸೂರು :-  ನಗರದ ಸಾಹಿತ್ಯ ಹಾಗೂ ಓದು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಕನ್ನಡ ಓದುಗರ ಒಕ್ಕೂಟ ಮತ್ತು ವಾಣಿವಿಲಾಸ್ ಲೇಡೀಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗಾಗಿ ವಿಶೇಷ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ವಿವಿಎಲ್‌ಸಿ ಸಂಯುಕ್ತಾಶ್ರಯದಲ್ಲಿ ಮಾರ್ಚ್ 11ರಂದು ನಡೆಸಲಾಯಿತು. ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಇಬ್ಬರು ಸದಸ್ಯರ ತಂಡಗಳಾಗಿ ಒಟ್ಟು 38 ತಂಡಗಳು ಪಾಲ್ಗೊಂಡವು. ಸ್ಪರ್ಧೆಯನ್ನು ನಾಲ್ಕು ಸುತ್ತುಗಳಲ್ಲಿ ಆಯೋಜಿಸಲಾಗಿದ್ದು,...
1 17 18 19 20 21 62
Page 19 of 62