Latest News

ಉಪಚುನಾವಣೆ, ಪ್ರಚಾರ ಮತ್ತು ಅದಕ್ಕಾಗಿ ಪಡುತ್ತಿರುವ ಶ್ರಮ……

ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ.ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ, ಅವರ ಪ್ರತಿಷ್ಠೆಗಾಗಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತದಾನ ಮಾಡಬೇಕು. ಅವರನ್ನುನಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು. ಇವರುಗಳನ್ನು ಹೊರತುಪಡಿಸಿ ನಮ್ಮಲ್ಲಿ ಮತ್ಯಾರಿಗೂ ಸ್ಪರ್ಧಿಸುವ ಸಾಮರ್ಥ್ಯವೂ ಇಲ್ಲ, ಅವಕಾಶ ಇಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ !!!!!!ಇಡೀ ಆಡಳಿತ ವ್ಯವಸ್ಥೆ, ಬಹುತೇಕ ಎಲ್ಲಾ ಮಂತ್ರಿಗಳು, ಶಾಸಕರು, ವಿರೋಧ ಪಕ್ಷದವರು, ಎಲ್ಲಾ ಜಾತಿಯ ನಾಯಕರು, ಮಾಧ್ಯಮಗಳು, ಸಾಮಾಜಿಕ...
Latest News

ಕುಂದೂರಿನ ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ಸಂಪೂರ್ಣ ನಿಷೇಧ

ಸಾತ್ವಿಕ ಆರಾಧನೆಯತ್ತ ಐತಿಹಾಸಿಕ ತಿರುವು – 10 ಸಾವಿರ ಭಕ್ತರಿಂದ ಸಸ್ಯಾಹಾರ ಸೇವನೆ ಮೈಸೂರು, ಮಾ.22:-  ಜಿಲ್ಲೆಯ ಸರಗೂರು ತಾಲೂಕಿನ ಕುಂದೂರಿನ ಶ್ರೀ ಚಿಕ್ಕದೇವಮ್ಮ ಜಾತ್ರಾಮಹೋತ್ಸವ ಈ ಬಾರಿ ಒಂದು ಮಹತ್ವದ ಸಾಮಾಜಿಕ ಪರಿವರ್ತನೆಗೆ ಸಾಕ್ಷಿಯಾಗಿದ್ದು, ಚಿಕ್ಕದೇವಮ್ಮನ ಬೆಟ್ಟ (ಸಿ.ಡಿ.ಹಿಲ್ಸ್), ಹಾಲ್ಗಡ ಹಾಗೂ ಇಟ್ನಾ ಗ್ರಾಮಗಳಲ್ಲಿ ಪ್ರಾಣಿಬಲಿ ಪದ್ಧತಿ ಸಂಪೂರ್ಣವಾಗಿ ನಿಲ್ಲಿಸಿ ಅಹಿಂಸಾತ್ಮಕ ಸಾತ್ವಿಕ ಆಚರಣೆಗಳು ನಡೆದಿರುವುದು ಗಮನಾರ್ಹವಾಗಿದೆ.ಯುಗಾದಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ನಡೆದ ಈ ಜಾತ್ರೆಯಲ್ಲಿ,...
Latest News

“ನಾನಾ ಕಾಫಿರ” ಪುಸ್ತಕ ಬಿಡುಗಡೆಗೆ ಸಜ್ಜಾದ ಮೈಸೂರು: ಖ್ಯಾತ ಗಣ್ಯರ ಸಾನ್ನಿಧ್ಯದಲ್ಲಿ ಸಾಹಿತ್ಯ ಸಂಭ್ರಮಕ್ಕೆ ವೇದಿಕೆ

ಮೈಸೂರು, ಮಾ.21: ನಗರದ ಇನ್ಫೋಸಿಸ್ ಸಮೀಪದ ಸ್ಕ್ಷಾನ್ ರೇ ಹೆಲ್ತ್ ಕೇರ್ ಸಭಾಂಗಣದಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 10 ಗಂಟೆಗೆ “ನಾನಾ ಕಾಫಿರ” ಕೃತಿಯ ಭವ್ಯ ಬಿಡುಗಡೆ ಸಮಾರಂಭ ನಡೆಯಲಿದ್ದು, ಸಾಹಿತ್ಯಾಸಕ್ತರು ಹಾಗೂ ಬೌದ್ಧಿಕ ವಲಯದ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಸಹನಾ ವಿಜಯ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಆದಿಚುಂಚನಗಿರಿ ಮಠ, ಮೈಸೂರು ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜೊತೆಗೆ ಆರ್‌ಎಸ್‌ಎಸ್ ದಕ್ಷಿಣ...
Latest News

ಶ್ರೀ ಮಾಯಕಾರ ಗುರುಕುಲದ 14ನೇ ವರ್ಷದ ವಾರ್ಷಿಕೋತ್ಸವ ಭರ್ಜರಿ ಯಶಸ್ಸು

ಪ್ರಮಾಣಪತ್ರ ವಿತರಣೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಮೈಸೂರು, ಮಾ.21: ನಗರದ ರೋಟರಿ ಸಭಾಂಗಣದಲ್ಲಿ ಶ್ರೀ ಮಾಯಕಾರ ಗುರುಕುಲದ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭವು ಸಂಭ್ರಮ, ಸಾಂಸ್ಕೃತಿಕ ವೈಭವ ಮತ್ತು ವಿದ್ಯಾಮಯ ಗಂಭೀರತೆಯ ನಡುವೆ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಗುರುಕುಲದ ಶೈಕ್ಷಣಿಕ ಸಾಧನೆಯ ಪ್ರತಿಬಿಂಬವಾಗಿ ಕಂಗೊಳಿಸಿತು. ಕಾರ್ಯಕ್ರಮಕ್ಕೆ ದೀಪಪ್ರಜ್ವಲನೆ ಮೂಲಕ ಚಾಲನೆ...
Latest News

ಮೈಸೂರು ಜಿಲ್ಲೆಯಲ್ಲಿ ಉಚಿತ ಟೈಲರಿಂಗ್ ತರಬೇತಿ – ಮಾರ್ಚ್ 30ರವರೆಗೆ ಅರ್ಜಿ ಸಲ್ಲಿಕೆ

ಮೈಸೂರು, ಮಾ.20: ಪರಿಶಿಷ್ಟ ಜಾತಿಯ ಭೋವಿ ಜನಾಂಗದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಉಚಿತ ಟೈಲರಿಂಗ್ ತರಬೇತಿ ಹಾಗೂ ಅಗತ್ಯ ಯಂತ್ರೋಪಕರಣಗಳ ವಿತರಣೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನತೆಗೆ ಕೈಗೆ ಕೆಲಸ ನೀಡುವ ಜೊತೆಗೆ ಸ್ವಾವಲಂಬನೆ ಸಾಧಿಸಲು ಈ ಯೋಜನೆ ನೆರವಾಗಲಿದೆ. ತರಬೇತಿಯ ಅವಧಿಯಲ್ಲಿ ತಜ್ಞರಿಂದ ವೃತ್ತಿಪರ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಟೈಲರಿಂಗ್ ಕಾರ್ಯಕ್ಕೆ...
Latest News

ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ – ಪ್ರೊ. ರೇಖಾ ಕೆ. ಜಾದವ್

ಸಮಾಜದ ಅಂಚಿನಲ್ಲಿರುವವರು, ಮುಖ್ಯವಾಹಿನಿಯಿಂದ ಹೊರಗುಳಿದವರು ಮತ್ತು ನಿರ್ಲಕ್ಷಿತರೆಡೆಗೆ ಸಹಾನುಭೂತಿ ಹೊಂದಿರುವುದು ಪ್ರಸ್ತುತ ಅಗತ್ಯ; ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಂಚಾಲಕಿ ಪ್ರೊ. ರೇಖಾ ಕೆ. ಜಾದವ್ ಹೇಳಿದರು. ಇತ್ತೀಚೆಗೆ ಮೈಸೂರಿನ ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ...
Latest News

ಹಿರಿಯ ಸಾಹಿತಿ ಚಂಪಾ ಶಿವಣ್ಣ ನಿಧನ – ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ

ಮೈಸೂರು, ಮಾ.20: ಮೈಸೂರಿನ ಹಿರಿಯ ಲೇಖಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಚಂಪಾ ಶಿವಣ್ಣ (71) ಅವರು ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣದಿಂದ ನಿಧನ ಹೊಂದಿದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ. ಇವರು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಎಂ.ಆರ್. ಶಿವಣ್ಣ ಅವರ ಪತ್ನಿಯಾಗಿದ್ದರು. ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸರಳತೆ...
Latest News

ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

ನವದೆಹಲಿ, ಮಾ.20: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಘೋಷಣೆ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ 40 ದಿನಗಳ ಕಾಲ ನಡೆದ ರೈತ ಜಾಗೃತಿ ಯಾತ್ರೆಯ ಸಮಾರೋಪವಾಗಿ ಈ ಸಮಾವೇಶ ಆಯೋಜಿಸಲಾಗಿತ್ತು. ದೇಶದ 32 ಸಾವಿರ ಹಳ್ಳಿಗಳಿಂದ ಸುಮಾರು 10 ಲಕ್ಷ ರೈತರ...
Latest News

20-03-2026 ರ ರಾಶಿ ದಿನಭವಿಷ್ಯ

ಮೇಷ (Aries) ಇಂದು ನೀವು ಕೈಗೊಂಡ ಕೆಲಸಗಳಲ್ಲಿ ವೇಗ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ ಅತಿಯಾಗಿ ಆತುರಪಡದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಲಾಭ ಇದ್ದರೂ ಖರ್ಚು ಕೂಡ ಹೆಚ್ಚಾಗಬಹುದು. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಅದನ್ನು ಶಾಂತಿಯುತವಾಗಿ ಪರಿಹರಿಸಿ. ಆರೋಗ್ಯದ ಕಡೆ ಗಮನ ಕೊಡಿ, ವಿಶೇಷವಾಗಿ ತಲೆನೋವು ಅಥವಾ ದಣಿವು ಕಾಣಬಹುದು. ಸ್ನೇಹಿತರ ಸಹಾಯ ನಿಮಗೆ ಉಪಯೋಗವಾಗುತ್ತದೆ. ವೃಷಭ...
Latest News

ಶಾಸ್ತ್ರೀಯ ಸಂಗೀತ ಕಚೇರಿ – ಮಾ. 19ರಂದು ಮನಮೋಹಕ ಸಂಗೀತ ಸಂಜೆಗೆ ಆಹ್ವಾನ

ಮೈಸೂರು: ವಿಜಯಲಕ್ಷ್ಮಿ ಬಸವರಾಜ್ ಚಾರಿಟೇಬಲ್ ಸೊಸೈಟಿ ಡಾವತಿಯಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಮನಮೋಹಕ ಕಚೇರಿ ಮಾ. 19ರಂದು ಸಂಜೆ ನಗರದ ಬೋಗಾಡಿಯ ಬಡವರಾಜ್ ರೈಲ್ವೇ ಲೇಔಟ್‌ನಲ್ಲಿ ಆಯೋಜಿಸಲಾಗಿದೆ. ಈ ಕಚೇರಿಯಲ್ಲಿ ಖ್ಯಾತ ಯುವ ವಿದುಷಿ ಪೃಥ್ವಿ ಭಾಸ್ಕರ್ ವೈಯಲಿನ್ ವಾದನ ನೀಡಲಿದ್ದು,  ಅವರು ಪ್ರಸಿದ್ಧ ಸಂಗೀತ ವಿದ್ವಾಂಸ ಎಚ್. ಕೆ. ನರಸಿಂಹಮೂರ್ತಿ ಅವರ ಮೊಮ್ಮಗಳು ಎಂಬುದು ವಿಶೇಷವಾಗಿದೆ. ತಮ್ಮ ಪಾರಂಪರಿಕ ಸಂಗೀತ ಪರಂಪರೆಯನ್ನು ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿರುವ ಅವರು, ಸ್ವರ-ಲಯಗಳ...
1 14 15 16 17 18 62
Page 16 of 62