ಅಪ್ಪನ ಮೇಲಿನ ಕೋಪಕ್ಕೆ ನಾಲ್ಕರ ಮಗುವಿನೊಂದಿಗೆ ವಿಕೃತಿ ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಕಿರಾತಕ
ಮುಂಬೈ :- ಮನುಷ್ಯತ್ವವೇ ನಡುಗಿಸುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದ್ದು, ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ನಡೆದ ಅಮಾನುಷ ಕೃತ್ಯ ದೇಶವನ್ನೇ ಬೆಚ್ಚಿಬೀಳಿಸಿದೆ. ಮುಂಬೈಯ ಮೀರಾ ರಸ್ತೆ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಆರೋಪಿಯನ್ನು ಸಂದೀಪ್ ಪವಾರ್ ಎಂದು ಗುರುತಿಸಲಾಗಿದ್ದು, ಆತ ಮಗುವಿನ ತಂದೆಯೊಂದಿಗೆ ನಡೆದ ವೈಯಕ್ತಿಕ ಜಗಳದ ಸಿಟ್ಟನ್ನು ನಿರಪರಾಧ ಮಗುವಿನ ಮೇಲೆ ಹೊರಹಾಕಿದ್ದಾನೆ. ಘಟನೆ ಸಂಭವಿಸಿದ ವೇಳೆ ನಾಲ್ಕು ವರ್ಷದ ಬಾಲಕ...

