Latest News

ಮೈಸೂರು ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ : ಸರ್ಕಾರದ ವಿರುದ್ಧ ಕಿಡಿಕಾರಿರುವ ಸಂತೋಷ್ ಕುಮಾರ್ ಬಿ.ಎಂ

ಮೈಸೂರು :- ವಿಶ್ವ ವಿಖ್ಯಾತ ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿವೆ ಎಂದು ಬಿಜೆಪಿ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೈಸೂರಿಗೆ ಕಪ್ಪು ಚುಕ್ಕೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಿರಂತರವಾಗಿ ನಡೆಯುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು ಗಂಭೀರ...
Latest News

ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಭರ್ಜರಿ ಸಾಧನೆ 2025–26ರಲ್ಲಿ ₹449.13 ಕೋಟಿ ಆದಾಯ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 2025–26ನೇ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸಿದ್ದು, ಒಟ್ಟು ₹449.13 ಕೋಟಿ ಪ್ರಯಾಣಿಕ ಆದಾಯ ಸಂಗ್ರಹಿಸುವ ಮೂಲಕ ಉತ್ತಮ ಬೆಳವಣಿಗೆ ಸಾಧಿಸಿದೆ. ಕಳೆದ ಸಾಲಿನ ₹419.89 ಕೋಟಿ ಆದಾಯದೊಂದಿಗೆ ಹೋಲಿಸಿದರೆ ಈ ವರ್ಷ ಶೇ.1.49ರಷ್ಟು ಹೆಚ್ಚಳ ಕಂಡುಬಂದಿದೆ. ನಗರದ ರೈಲ್ವೆ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು. ಈ ಅವಧಿಯಲ್ಲಿ ಮಾರಾಟ ಆದಾಯ, ಸರಕು ಸಾಗಣೆ, ಕಾರ್ಯಕ್ಷಮತೆ, ಮೂಲಸೌಕರ್ಯ...
Latest News

ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸಲು ಬೇಸಿಗೆ ಶಿಬಿರ  ಏ.6ರಿಂದ ಮೇ 1ರವರೆಗೆ ಆಯೋಜನೆ

ಮೈಸೂರು: – ಇತ್ತಿಚಿನ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ವೇದಿಕೆ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಾಲ್ವಡಿ ಸೋಷಿಯಲ್, ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಮಕ್ಕಳ ರಂಗ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಬೇಸಿಗೆ ಶಿಬಿರದ ಕುರಿತು ಹಿರಿಯ ರಂಗಕರ್ಮಿ ಬಿ.ಎಂ. ರಾಮಚಂದ್ರ ಅವರು ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಏಪ್ರಿಲ್ 6ರಿಂದ ಮೇ 1ರವರೆಗೆ ನಡೆಯುವ ಈ ಶಿಬಿರವು 8...
Latest News

ಜಾಕಿ ಸಂಸ್ಥೆಯು ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಂಬುಲೆನ್ಸ್ ಕೊಡುಗೆ.

ಮೈಸೂರು:- ಮೈಸೂರಿನ ಜೆ ಪಿ ನಗರದಲ್ಲಿರುವ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಾಕೀ) ಸಂಸ್ಥೆಯು ತನ್ನ ಸಮಾಜಮುಖಿ ಸೇವೆಗೆ ಮತ್ತೊಂದು ಹೊಸ ಮೈಲುಗಲ್ಲು ಮೂಡಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ ಜಿಲ್ಲಾ ಪ್ರತಿಬಂಧಕ  ಮತ್ತು ನಿಯಂತ್ರಣ ಘಟಕಕ್ಕೆ ತನ್ನ ಸಿಎಸ್ಆರ್ ಅನುದಾನದಡಿಯಲ್ಲಿ 32 ಲಕ್ಷ ಮೌಲ್ಯದ ಹೊಸದಾದ ಆಂಬುಲೆನ್ಸ್ ವಾಹನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಬಿ ಸಿ ಕುಮಾರಸ್ವಾಮಿ ಅವರಿಗೆ ಗುರುವಾರ...
Latest News

ಎಚ್. ಮಟಕೆರೆ ಶಾಲೆಯಲ್ಲಿ ಬಡ್ತಿ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಪ್ಪ ರವರಿಗೆ ಬೀಳ್ಕೊಡುಗೆ.

ಹೆಚ್.ಡಿ.ಕೋಟೆ:-   ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಎಚ್ ಡಿ ಕೋಟೆ ತಾಲೂಕಿನ ಎಚ್ ಮಟಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಲ್ ಕೃಷ್ಣಪ್ಪ ರವರನ್ನ ಶಾಲೆಯ ಶಿಕ್ಷಕರಿಂದ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ  ಗುರುವಾರ ಬೀಳ್ಕೊಡುಗೆ ಮಾಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪರವರು ಮಾತನಾಡಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ. ನಾನು ಕಳೆದ ಮೂರು ವರ್ಷ ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಈ...
Latest News

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕ್ರೀಡಾ ಸಂಭ್ರಮ: ವಿದ್ಯಾರ್ಥಿನಿಯರಲ್ಲಿ ಕ್ರೀಡಾಮನೋಭಾವ ಬೆಳೆಸಲು ಕರೆ

ಮೈಸೂರು, ಏಪ್ರಿಲ್ : ನಗರದ ಶಿಕ್ಷಣ ವಾತಾವರಣಕ್ಕೆ ಮತ್ತೊಂದು ಚೈತನ್ಯ ತುಂಬುವಂತೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಭರ್ಜರಿಯಾಗಿ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ವಿದ್ಯಾರ್ಥಿನಿಯರ ಉತ್ಸಾಹ, ಕ್ರೀಡಾ ಜೋಶ್ ಮತ್ತು ಸ್ಪರ್ಧಾತ್ಮಕ ಮನೋಭಾವ ಒಂದೇ ವೇದಿಕೆಯಲ್ಲಿ ಅರಳಿದ ಈ ಕ್ರೀಡಾಕೂಟ, ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಆರೋಗ್ಯಕರ ಜೀವನದ ಸಂದೇಶ ಸಾರಿದ ಮಹತ್ವದ ಕಾರ್ಯಕ್ರಮವಾಗಿ ಪರಿಣಮಿಸಿತು. ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ....
Latest News

ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಮಾಜಿ ಸಚಿವ ಸಾ.ರಾ. ಮಹೇಶ್–ಸಿ.ಎನ್.ಮಂಜೇಗೌಡ ದಿಢೀರ್ ಭೇಟಿ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ. ಏ 02:- ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ರೈತರಿಗೆ ತೊಂದರೆಯಾಗುತ್ತಿದೆ ಮತ್ತು ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬ ರೈತರ ದೂರಿನ ಹಿನ್ನಲೆಯಲ್ಲಿ ಭೇಟಿ ನೀಡಿದ ಅವರು ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚೆ ನಡೆಸಿದರು. ಸರ್ಕಾರದ ಆದೇಶದನ್ವಯ ಪ್ರತಿ...
Latest News

ಹೇಮಾವತಿ ಹೆಗಡೆ ಜನ್ಮದಿನದಂದು ಸೇವೆಯ ಸಡಗರ: ಫಲ ತಾಂಬೂಲ ನೀಡಿ ಗೌರವ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಏ. 02:- ಮಹಿಳೆಯರ ಸಬಲೀಕರಣಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರು ಹಸಿವಿನಿಂದ ಇರಬಾರದೆಂದು ವಾಸ್ತಲ್ಯದ ಮೂಲಕ ಧನಸಹಾಯ ಮಾಡುತ್ತಿರುವ ಮಾತೃ ಹೃದಯದ ಶ್ರೀ ಡಾ. ಹೇಮಾವತಿ ವಿ ಹೆಗಡೆಯವರ ಹುಟ್ಟು ಹಬ್ಬದ ಅಂಗವಾಗಿ ಅತ್ಯಂತ ಜೀವನ ಸಾಗಿಸಲು ಸಾಧ್ಯವಾಗದ ನಿರ್ಗತಿಕರಿಗೆ ಇಂದು ಫಲ ತಾಂಬೂಲ ಕೊಟ್ಟು ಗೌರವಿಸುತ್ತಿದ್ದೇವೆ ಎಂದು ಸಾಲಿಗ್ರಾಮ ತಾಲೂಕಿನ ಯೋಜನಾಧಿಕಾರಿ ಉಮೇಶ್ ಪೂಜಾರಿ ಹೇಳಿದರು. ಅವರು ವಡ್ಡರ ಕೊಪ್ಪಲು ಗ್ರಾಮದಲ್ಲಿ ಶ್ರೀ...
Latest News

ಪ್ರಾಧ್ಯಾಪಕನ ಜತೆ  ಸುಳ್ಳು ಸಂಬಂಧ ಆರೋಪಕ್ಕೆ ಬೇಸತ್ತು ಜೀವತ್ಯಾಗ: ಚಿತ್ರದುರ್ಗದಲ್ಲಿ ಡೆತ್ನೋಟ್ ಬರೆದು ವಿದ್ಯಾರ್ಥಿನಿ !

ಚಿತ್ರದುರ್ಗ :-  ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣವು ಗಂಭೀರ ತಿರುವು ಪಡೆದುಕೊಂಡಿದ್ದು, ಸಾವಿಗೆ ಮುನ್ನ ಬರೆದ ಡೆತ್ನೋಟ್ ಇದೀಗ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಅಪಪ್ರಚಾರ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅವಮಾನ ಒಬ್ಬ ಯುವತಿಯ ಬದುಕನ್ನೇ ಕತ್ತಲೆಗೆ ತಳ್ಳಿದ ದುರಂತವಾಗಿ ಈ ಘಟನೆ ಪರಿಣಮಿಸಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ BAMS ಓದುತ್ತಿದ್ದ ನಿಖಿತಾ (23) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಮುಂದುವರಿದಿರುವ...
Latest News

ನೇಣು ಬಿಗಿದುಕೊಂಡು ಆದಿವಾಸಿ ಯುವತಿ ಶ* ವಾಗಿ ಪತ್ತೆ: ಪ್ರೇಮಿಯೊಂದಿಗೆ ಆ* ಹ*

ಚಾಮರಾಜನಗರ :-  ಜಿಲ್ಲೆಯಲ್ಲಿ ಮನಸ್ಸು ಕಲುಕುವಂತಹ ಘಟನೆ ಬೆಳಕಿಗೆ ಬಂದಿದೆ. ಪ್ರೇಮ ಸಂಬಂಧಕ್ಕೆ ಕುಟುಂಬದ ಅಡ್ಡಿಯೇ ಕಾರಣವೋ ಅಥವಾ ಬೇರೆ ಯಾವ ಒತ್ತಡವೋ ಎಂಬ ಅನುಮಾನಗಳ ನಡುವೆ, ಇಬ್ಬರು ಯುವ ಪ್ರೇಮಿಗಳು ಆ* ಹ*  ಮಾಡಿಕೊಂಡಿರುವ ಘಟನೆ ಸಮಾಜದ ಮನಸ್ಸಿಗೆ ಭಾರವಾದ ನೆರಳು ಚೆಲ್ಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕುಂದಿ...
1 8 9 10 11 12 62
Page 10 of 62