Latest News

ಸಂಬಂಧಿಕರನ್ನು ಭೇಟಿ ಮಾಡಲು ಬಂದವರು: ಬೆಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ದಾಳಿಗೊಳಗಾದ ರಾಜಸ್ಥಾನದ ವ್ಯಕ್ತಿ ಸಾವು

ಬೆಂಗಳೂರು:- ಆರೋಪಿಗಳನ್ನು ಗುರುತಿಸಲು ಮತ್ತು ಕೊ*ಯ ಹಿಂದಿನ ಉದ್ದೇಶವನ್ನು ಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಿಂದ ಬೆಂಗಳೂರಿಗೆ ಭೇಟಿ ನೀಡುತ್ತಿದ್ದ ವ್ಯಕ್ತಿಯನ್ನು ಅಪರಿಚಿತ ದುಷ್ಕರ್ಮಿಗಳು ಕೊ* ಮಾಡಿದ್ದಾರೆ. ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಬಾಲಗೆರೆ ಮುಖ್ಯ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು 26 ವರ್ಷದ ದಲಾ ರಾಮ್ ಎಂದು ಗುರುತಿಸಲಾಗಿದೆ, ಇವರು ಪಾಲಿ ಜಿಲ್ಲೆಯ ದಿವಾಂಡಿ ಗ್ರಾಮದವರು. ಪೊಲೀಸರ ಪ್ರಕಾರ,...
Latest News

ಉಪ್ಪಾರ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ: ಸಾ.ರಾ. ಮಹೇಶ್ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್,ನಗರ. ಏ. 05: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ಭಗೀರಥ ಉಪ್ಪಾರರ ಸಮುದಾಯ ಭವನದ ಮುಂದುವರೆದ ಭವನದ ಕಾಮಗಾರಿಗೆ ಕೇಂದ್ರ ಸರ್ಕಾರದ ಸಣ್ಣಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರ ಅನುದಾನದಲ್ಲಿ 25 ಲಕ್ಷ ರೂ.ಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡರ ಅನುದಾನದ ಜತೆಗೆ ನಾನು ವೈಯುಕ್ತಿಕ ಸಹಾಯ ಮಾಡುವುದಾಗಿ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ಆಂಜನೇಯ ಬಡಾವಣೆಯ ಸಗರವಂಶ...
Latest News

ಡಾ. ಬಾಬು ಜಗಜೀವನ್ ರಾಮ್ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಡಿ. ರವಿಶಂಕರ್ ಕರೆ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 05:-. ಡಾ.ಬಾಬು ಜಗಜೀವನ್ ರಾಂ ರವರ ಆದರ್ಶ ಹಾಗೂ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಮೂಲಕ ಉನ್ನತ ವಿದ್ಯಾಭ್ಯಾಸವನ್ನು ಮಾಡಿಸಿ ಉದ್ಯೋಗ ಕೊಡಿಸಿ ಆಗ ಮಾತ್ರ ಡಾ. ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಶಾಸಕ ಡಿ ರವಿಶಂಕರ್ ತಿಳಿಸಿದರು. ಪಟ್ಟಣದ ಪುರಸಭಾ ವೃತ್ತದಲ್ಲಿರುವ ಡಾ. ಬಾಬು ಜಗಜೀವನ್ ರಾಂ ರವರ...
Latest News

ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ :  ಶೋಷಿತ ಸಮುದಾಯಗಳ ಹಿತಕ್ಕಾಗಿ ಅವಿರತ ಶ್ರಮ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ : ಡಾ. ಬಾಬು ಜಗಜೀವನ ರಾಮ್ ರವರ ಆಡಳಿತ ಸುಧಾರಣೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಹಸೀಲ್ದಾರ್ ನಿಸರ್ಗ ಪ್ರಿಯಾ ತಿಳಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾಕ್ಟರ್ ಬಾಬು ಜಗಜೀವನ ರಾಮ್ ರವರು ರಾಷ್ಟ್ರದ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಮ್ಮ...
Latest News

ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟನೆ ಬಿಜೆಪಿ ಬಲಿಷ್ಠ ಪಕ್ಷ: ಕುಂಬ್ರಳ್ಳಿ ಸುಬ್ಬಣ್ಣ

ವರದಿ:ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: ಬಿಜೆಪಿ ಪಕ್ಷದ ತತ್ವಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಕರ್ತರಿಗೆ ತಿಳಿಸುವ ಉದ್ದೇಶದಿಂದ ಪ್ರಶಿಕ್ಷಣ ಮಹಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ತಿಳಿಸಿದರು. ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಡಾವಣೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಗಾರ ಉದ್ಘಾಟಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಮಾತನಾಡಿದರು. ಬಿಜೆಪಿ ಪಕ್ಷ ವಿಶ್ವದಲ್ಲಿಯೇ ಬಲಿಷ್ಠ ಪಕ್ಷ ಎಂಬ ಕೀರ್ತಿಗೆ...
Latest News

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳರ ಹಾವಳಿ: 9 ಬಾಲಕರು ಸೇರಿ 13 ಬಂಧನ

ಬೆಂಗಳೂರು: ಕ್ರಿಕೆಟ್ ಹುಮ್ಮಸ್ಸಿನ ಮಧ್ಯೆ ನಡೆದ ಮೊಬೈಲ್ ಕಳ್ಳತನ ಪ್ರಕರಣವು ಈಗ ದೊಡ್ಡ ಜಾಲವನ್ನು ಬಯಲಿಗೆಳೆಯುವ ದಿಕ್ಕಿನಲ್ಲಿ ಸಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ವೇಳೆ ನಡೆದ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸರು, 9 ಅಪ್ರಾಪ್ತರು ಸೇರಿ ಒಟ್ಟು 13 ಮಂದಿಯನ್ನು ಬಂಧಿಸಿ 75 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ತಂಡವು ಕಳ್ಳತನಕ್ಕಾಗಿ ಪೂರ್ವಸಂಚು ರೂಪಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿರುವುದು ಬಹಿರಂಗವಾಗಿದೆ....
Latest News

ನಂಜನಗೂಡಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾರಕಾಸ್ತ್ರಗಳಿಂದ  ಗಲಾಟೆ: ಆಸ್ಪತ್ರೆಗೆ ದಾಖಲು

ನಂಜನಗೂಡು: ಸಣ್ಣ ವಿಷಯವೇ ದೊಡ್ಡ ಹಿಂಸೆಗೆ ತಿರುಗಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ಕಾರ್ ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ, ಬಳಿಕ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿಗೆ ತಿರುಗಿ ಐದು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ನಗರದ ನೀಲಕಂಠನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳ ಪ್ರಕಾರ ಚಾಂದ್ ಸಾಬ್ ಎಂಬುವರ ಮನೆಯ ಮುಂಭಾಗದಲ್ಲಿ ಈ ಗಲಾಟೆ ಆರಂಭವಾಗಿದೆ. ಕಾರು...
Latest News

ಕಬಿನಿ ಹಿನ್ನೀರಿನಲ್ಲಿ ‘ಯಂಗ್ ಟೈಗರ್’ ಕೂಲ್ ಕೂಲ್: ವೈರಲ್ ಆದ ಅಪರೂಪದ ದೃಶ್ಯ

ಎಚ್.ಡಿ.ಕೋಟೆ: ಉರಿಯುತ್ತಿರುವ ಬಿಸಿಲಿನ ನಡುವೆಯೇ ಪ್ರಕೃತಿಯ ಮಡಿಲಿನಲ್ಲಿ ತಂಪನ್ನು ಹುಡುಕಿಕೊಂಡ ‘ಯಂಗ್ ಟೈಗರ್’ ಒಂದು ಕಬಿನಿ ಹಿನ್ನೀರಿನಲ್ಲಿ ಮಜಾ ಮಾಡುತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ನೀರಿನಲ್ಲಿ ಅರ್ಧ ದೇಹ ಮುಳುಗಿಸಿಕೊಂಡು, ಶಾಂತವಾಗಿ ವಿಶ್ರಾಂತಿ ಪಡೆಯುತ್ತಿರುವ ಹುಲಿಯ ದೃಶ್ಯ ನೋಡಿದವರಿಗೆ ನಿಜಕ್ಕೂ ಪ್ರಕೃತಿಯೊಂದು ಮೌನ ಕವಿತೆಯಂತೆ ಭಾಸವಾಗುತ್ತಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿ ಈ ಅಪರೂಪದ ಕ್ಷಣವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು...
Latest News

ರೈತರ ಹಿತಕ್ಕಾಗಿ ಕ್ರಮ: ಸಹಕಾರ ಸಂಘಗಳ ಮೂಲಕ ಗೊಬ್ಬರ ವಿತರಣೆ ಹೆಚ್ಚಿಸಿ – ಸಚಿವ ವೆಂಕಟೇಶ್

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: ಮುಂಗಾರು ಪ್ರಾರಂಭವಾಗುತ್ತಿದ್ದು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸಮರ್ಪಕ ವಿತರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಿ– ಸಚಿವ ಕೆ. ವೆಂಕಟೇಶ್ ಸೂಚನೆ ಪಿರಿಯಾಪಟ್ಟಣ: ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ರೈತರಿಗೆ ವಿತರಣೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಸೂಚಿಸಿದರು. ಇದರಿಂದ ರೈತರಿಗೆ ನಿಖರವಾದ ಹಾಗೂ ಸಮಂಜಸ ಬೆಲೆಯಲ್ಲಿ ರಸಗೊಬ್ಬರ ದೊರಕುವಂತೆ...
Latest News

ಚಿಣ್ಣರ ಮೇಳಕ್ಕೆ ನಾಳೆಯಿಂದ ಅರ್ಜಿ ವಿತರಣೆ: ಮಕ್ಕಳಿಗೆ ಸುವರ್ಣಾವಕಾಶ

ಮೈಸೂರು: ಮಕ್ಕಳ ಸೃಜನಶೀಲತೆ, ಕಲೆ ಹಾಗೂ ವ್ಯಕ್ತಿತ್ವ ಅಭಿವೃದ್ಧಿಗೆ ವೇದಿಕೆಯಾದ ‘ಚಿಣ್ಣರ ಮೇಳ’ಕ್ಕೆ ಅರ್ಜಿ ವಿತರಣೆ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ರಂಗಾಯಣ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷವೂ ಮಕ್ಕಳಲ್ಲಿ ಕಲಾತ್ಮಕ ಆಸಕ್ತಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುವ ಈ ಮೇಳಕ್ಕೆ ಈ ಬಾರಿ ಕೂಡ ಭಾರಿ ಸ್ಪಂದನೆ ನಿರೀಕ್ಷಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸಲು 2026ರ ಮಾರ್ಚ್ 31ರೊಳಗೆ ಕನಿಷ್ಠ 7 ವರ್ಷ ಪೂರೈಸಿದ ಮತ್ತು ಗರಿಷ್ಠ 15 ವರ್ಷ ಮೀರದ...
1 7 8 9 10 11 62
Page 9 of 62