Latest News

ಪವಿತ್ರ ಪ್ರೊಡಕ್ಷನ್ ನ ಹೈಕ್ಳು ಕಿಚ್ಚು ಚಲನಚಿತ್ರದ ಮುಹೂರ್ತಕ್ಕೆ ಚಾಲನೆ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ :- ಪಿರಿಯಾಪಟ್ಟಣದ ಯುವ ಕಲಾವಿದ ನವೀನ್ ರಾಜ್ ಅಭಿನಯದ ಪವಿತ್ರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಹೈಕ್ಲು ಕಿಚ್ಚು ಚಲನಚಿತ್ರದ ಮುಹೂರ್ತ ಪಿರಿಯಾಪಟ್ಟಣದ ಗ್ರಾಮ ದೇವತೆ ಮಸಣಿಕಮ್ಮ ದೇವಸ್ಥಾನದ ಆವರಣದಲ್ಲಿ ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಕ್ಲಾಪ್ ಮಾಡುವುದರ ಮೂಲಕ ಮುಹೂರ್ತಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಮಕ್ಕಳು ಮನಸು ಮಾಡಿ ರೊಚ್ಚಿಗೆದ್ದರೆ ವಯಸ್ಸಿನ ವಯೋಮಿತಿ ಇಲ್ಲದೆ ಯಾವುದೇ ಕಾರ್ಯವನ್ನು ಸಾಧಿಸಬಹುದು ಎಂಬ ಗ್ರಾಮೀಣ ...
Latest News

ಕಂಪಲಾಪುರದ ಶ್ರಾವಣಿ ಭರ್ಜರಿ 525 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಗೆ ಅಭಿನಂದನೆಗಳ ಮಹಾಪೂರ

ವರದಿ: ರವಿಚಂದ್ರ ಬೂದಿತಿಟ್ಟು ಕಂಪಲಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅತ್ಯುನ್ನತ ಸಾಧನೆ ಮಾಡಿ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ. ಪಿರಿಯಾಪಟ್ಟಣ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರಾವಣಿ ಎಸ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 525 ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಶ್ರಮ, ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಈ ಸಾಧನೆಯನ್ನು ಮಾಡಿದ್ದಾರೆ. ಶ್ರಾವಣಿ ಎಸ್ ಅವರು ಶಿಕ್ಷಣದಲ್ಲಿ ನಿರಂತರ ಸಾಧನೆ...
Latest News

ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿನಿ 507 ಅಂಕಗಳೊಂದಿಗೆ ಕಂಪಲಾಪುರದ ತೃಪ್ತಿ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಯ ಹಾದಿ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: 2026–27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಗಮನಾರ್ಹ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ತಾಲೂಕಿನ ಕಂಪಲಾಪುರ ಗ್ರಾಮದ ಪತ್ರಿಕಾವರದಿಗಾರರಾದ ಪಿ.ಆರ್. ರಾಜೇಶ್ ಹಾಗೂ ಲತಾ ದಂಪತಿಗಳ ಪುತ್ರಿ ತೃಪ್ತಿ ಆರ್ ಅವರು ವಿಜ್ಞಾನ ವಿಭಾಗದಲ್ಲಿ ಶೇಕಡಾ 85ರಷ್ಟು ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಈ ಸಾಧನೆ ಮಾಡಿದ್ದಾರೆ....
Latest News

ಬೆಟ್ಟದಪುರ ಜಾಗದ ಗೊಂದಲಕ್ಕೆ ತಿರುವು: ದಾಖಲೆಗಳೊಂದಿಗೆ ಮಂಜುನಾಥ್ ಪ್ರತಿಕ್ರಿಯೆ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ದುರಾಲೋಚನೆಯ ಫಲ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಎಸ್. ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಪೊಲೀಸ್ ಠಾಣೆ ಸಮೀಪದ ಮುಖ್ಯ ರಸ್ತೆಯಲ್ಲಿ ನನ್ನ ಹೆಸರಿನಲ್ಲಿ 67×35 ಅಳತೆಯ ನಿವೇಶನವಿದ್ದು, ಆ...
Latest News

ಜಮೀನು ಬರೆದುಕೊಡಿ ಎಂದು ಕಿರುಕುಳ: ಪ್ರಭಾವಿ ಮುಖಂಡ ಹಾಗೂ ಪೊಲೀಸರ ವಿರುದ್ಧ ಕುಟುಂಬದ ಗಂಭೀರ ಆರೋಪ

ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ಜಮೀನು ತಮ್ಮ ಹೆಸರಿಗೆ ಬರೆದುಕೊಡಲು ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಗ್ರಾಮದ ನಿವಾಸಿ ಶಂಕರೇಗೌಡ ಹಾಗೂ ಅವರ ಕುಟುಂಬದವರು ಸುದ್ದಿಗಾರರ ಮುಂದೆ ಅಳಲು ತೋಡಿಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಶಂಕರೇಗೌಡ ಅವರು, “ಗ್ರಾಮದ ಪ್ರಮುಖ ಹೆದ್ದಾರಿಯಲ್ಲಿರುವ ಸುಮಾರು 8 ಗುಂಟೆ ಬೆಲೆಬಾಳುವ ಜಮೀನು ನಮ್ಮ ಹೆಸರಲ್ಲಿ ಇದೆ. ಈ ಜಮೀನನ್ನು ತಮ್ಮ ಹೆಸರಿಗೆ...
Latest News

ಮಹಾಜನ ಕಾನೂನು ಕಾಲೇಜಿನಲ್ಲಿ “ನ್ಯಾಷನಲಿಸಂ ಆ್ಯಂಡ್ ಯೂಥ್” ಕಾರ್ಯಗಾರ: ನ್ಯಾಯಾಧೀಶರಾಗಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸನ್ಮಾನ

ಮೈಸೂರು: –  ನಗರದ ಜಯಲಕ್ಷ್ಮಿಪುರಂ ಪ್ರದೇಶದಲ್ಲಿರುವ ಎಸ್‌.ಬಿ.ಆರ್.ಆರ್ ಮಹಾಜನ ಕಾನೂನು ಕಾಲೇಜು ಆವರಣದಲ್ಲಿ ಏಪ್ರಿಲ್ 8, 2026ರಂದು “ನ್ಯಾಷನಲಿಸಂ ಆ್ಯಂಡ್ ಯೂಥ್” ವಿಷಯದ ಕುರಿತು ಒಂದು ದಿನದ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ಲವ್ ಇಂಡಿಯಾ ರೀಜನಲ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಾವನೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ದಿಸೆಯಲ್ಲಿ ಗಮನ ಸೆಳೆದಿತು. ಕಾರ್ಯಕ್ರಮವು ಬೆಳಗ್ಗಿನಿಂದಲೇ ಉತ್ಸಾಹಭರಿತ ವಾತಾವರಣದಲ್ಲಿ ಆರಂಭಗೊಂಡಿತು. ದೇಶಭಕ್ತಿ ಗೀತೆಗಳ...
Latest News

ಫೋನ್ ಸ್ವೀಕರಿಸದಿದ್ದರೆ ಕ್ರಮ ಖಚಿತ: ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಖಡಕ್ ಸಂದೇಶ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಏ.08:- ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ನಾಗರೀಕರನ್ನು ಅಲೆದಾಡಿಸಿದ ಬಗ್ಗೆ ನಮಗೆ ದೂರು ಬಂದಲ್ಲಿ ಹಾಗೂ ನಮ್ಮ ದೂರವಾಣಿ ಕರೆಯನ್ನು ಸ್ವೀಕರಿಸದೆ ಇದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಪಾರಸ್ಸು ಮಾಡಲಾಗುವುದು ಎಂದು ಮೈಸೂರು ಲೋಕಾಯುಕ್ತ ಡಿ ವೈ ಎಸ್ ಪಿ ಶೈಲೇಂದ್ರ ತಿಳಿಸಿದರು. ಪಟ್ಟಣದ ತಾಲ್ಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಮತ್ತು ದೂರು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ...
Latest News

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಮುಕ್ತವಾಗಿಸಲು ಅಧಿಕಾರಿಗಳು ಶ್ರಮಿಸಿ: ಡಾ: ಶಿವರಾಜು ಪಿ

ಮೈಸೂರು, ಏ.08:- ಬಲಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ:ಶಿವರಾಜು ಪಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ನಿಯಮಿತವಾಗಿ ದಾಳಿ...
Latest News

ಚುಂಚನಕಟ್ಟೆಯಲ್ಲಿ ಭಕ್ತಿ ಸಂಭ್ರಮ ಕರಗ ಮಹೋತ್ಸವಕ್ಕೆ ಜನಸಾಗರ: ಸಾ. ರಾ. ಮಹೇಶ್ ಭಾಗಿ

ವರದಿ: ವಡ್ಡರಕೊಪ್ಪಲು ಶಿವರಾಮು ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಸಾಂಸ್ಕೃತಿಕ ಸಂಭ್ರಮಕ್ಕೆ ಇಂದು ಮತ್ತೊಮ್ಮೆ ಜೀವ ತುಂಬಿದಂತೆ ಕಂಡದ್ದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಓಂಕಾಳಿಯಮ್ಮ ದೇವಾಲಯದ ಆವರಣದಲ್ಲಿ ನಡೆದ ಕರಗ ಮಹೋತ್ಸವ. ಗ್ರಾಮದ ಹೃದಯಭಾಗವೇ ಒಂದು ಉತ್ಸವದ ರಂಗಮಂದಿರವಾಗಿ ರೂಪಾಂತರಗೊಂಡಿದ್ದು, ಭಕ್ತಿಭಾವ, ಸಂಪ್ರದಾಯ ಮತ್ತು ಜನಸಾಮಾನ್ಯರ ಪಾಲ್ಗೊಳ್ಳುವಿಕೆ  ಒಂದೇ ಸೂರಿನಡಿಯಲ್ಲಿ ಮೇಳೈಸಿದವು. ಈ ವರ್ಷ 44ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶ್ರೀ ಓಂಕಾಳಿಯಮ್ಮ ದೇವರ ಕರಗ ಮಹೋತ್ಸವದಲ್ಲಿ ನೂರಾರು...
Latest News

08-04-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ ದಿನಭವಿಷ್ಯ  08-04-2026, ಬುಧವಾರ ನಿಮ್ಮ ದಿನ ಒಂದು ಚುರುಕು ಗಾಳಿಯಂತೆ ಶುರುವಾಗಬಹುದು ಆರಂಭದಲ್ಲಿ ಸ್ವಲ್ಪ ಒತ್ತಡ, ಆದರೆ ಕ್ರಮೇಣ ನಿಯಂತ್ರಣ ನಿಮ್ಮ ಕೈಗೆ ಬರುತ್ತದೆ. ಕೆಲಸದ ಕಡೆ ನೀವು ತೋರಿಸುವ ಚಾತುರ್ಯ ಮತ್ತು ತ್ವರಿತ ನಿರ್ಧಾರಗಳು ನಿಮಗೆ ಒಳ್ಳೆಯ ಫಲಿತಾಂಶ ತರುತ್ತವೆ. ವಿಶೇಷವಾಗಿ ಆಫೀಸ್ ಅಥವಾ ವ್ಯವಹಾರದಲ್ಲಿ ಬಾಕಿ ಇರುವ ಕೆಲಸಗಳನ್ನು ಮುಗಿಸಲು ಇದು ಸೂಕ್ತ ದಿನ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಅನಾವಶ್ಯಕ ಖರ್ಚುಗಳು ತಲೆದೋರುವ...
1 5 6 7 8 9 62
Page 7 of 62