ಸಕಲೇಶಪುರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗಲಾಟೆ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಕ್ಯಾಮೆರಾಗಳು ಜಖಂ
ಸಕಲೇಶಪುರ, ಮಾ.28: ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ನಡೆದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ನಡೆದ ಘಟನೆ ಆತಂಕ ಹುಟ್ಟಿಸಿದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಸ್ಥಳೀಯರೊಂದಿಗಿನ ವಾಗ್ವಾದ ಕ್ಷಣಾರ್ಧದಲ್ಲಿ ಗಲಭೆಯಾಗಿ ಮಾರ್ಪಟ್ಟಿದೆ. ಫ್ರೀ ವೆಡಿಂಗ್ ಶೂಟಿಂಗ್ ಮಧ್ಯೆ ಪುಂಡರ ದಾಳಿ ಶನಿವಾರ ಮುಂಜಾನೆ ಬೆಂಗಳೂರು ಹಾಗೂ ಹಾಸನದಿಂದ...






