ಮದುವೆಯ ನಂತರ ಮೊದಲ ಶೂಟಿಂಗ್: ವಿರೋಶ್ ಜೋಡಿಗೆ ಸೆಟ್‌ನಲ್ಲಿ ಅದ್ಧೂರಿ ಸ್ವಾಗತ
ಅಂಧ್ರಪ್ರದೇಶದ :- ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಚಿತ್ರರಂಗದ ಅಭಿಮಾನಿಗಳ ಕಣ್ಣಲ್ಲಿ ಬಹುಕಾಲದಿಂದ ನೆಲೆಗೊಂಡಿದ್ದ “ವಿರೋಶ್” ಜೋಡಿ ಈಗ ರೀಲ್‌ನಿಂದ ರಿಯಲ್‌ಗೆ ಹೆಜ್ಜೆ ಇಟ್ಟಿದೆ . ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾದ ಬಳಿಕ, ಮೊದಲ ಬಾರಿಗೆ ಒಟ್ಟಿಗೆ ಚಿತ್ರೀಕರಣಕ್ಕೆ ಹಾಜರಾಗಿದ್ದು, ಸಿನಿಮಾ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಅನಂತಪುರದಲ್ಲಿ ಹೊಸ ಆರಂಭ ಅಂಧ್ರಪ್ರದೇಶದ ಅನಂತಪುರನಲ್ಲಿ ನಡೆಯುತ್ತಿರುವ ರಣಬಲಿ (‘Ranabaali’) ಚಿತ್ರದ ಚಿತ್ರೀಕರಣದಲ್ಲಿ ಈ ಜೋಡಿ ಭಾಗಿಯಾಗಿದ್ದು, ಮದುವೆಯ ನಂತರದ ಮೊದಲ ಪ್ರಾಜೆಕ್ಟ್‌ಗೆ ಭರ್ಜರಿ ಆರಂಭ ನೀಡಿದೆ. ಮದುವೆಯ ಬಳಿಕ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ಈ ಜೋಡಿ, ಇದೀಗ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದೆ. ಚಿತ್ರತಂಡವು ಸಾಂಪ್ರದಾಯಿಕ ಸ್ವಾಗತ, ಭಾವನಾತ್ಮಕ ಕ್ಷಣ ಸೆಟ್‌ಗೆ ಬಂದಿಳಿದ ತಕ್ಷಣವೇ ಚಿತ್ರತಂಡವು ಹೊಸ ದಂಪತಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದೆ. ಆರತಿ, ತಿಲಕ ಹಾಗೂ ಹೂಮಾಲೆಗಳೊಂದಿಗೆ...










