ಮೈಸೂರು: ರಸ್ತೆ ಮೇಲೆ ಓಡುವ ಪ್ರತಿಯೊಂದು ಬೈಕ್ ಒಂದು ಜವಾಬ್ದಾರಿ, ಪ್ರತಿಯೊಂದು ಹೆಲ್ಮೆಟ್ ಒಂದು ಜೀವದ ಕವಚ. ಈ ಸಂದೇಶವನ್ನು ಹಬ್ಬಿಸುವ ಉದ್ದೇಶದಿಂದ ಕಡಕೊಳದಲ್ಲಿ ಮಂಗಳವಾರ ವಿಶಿಷ್ಟ...
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 31:-ವಯಸ್ಕರು, ವಯೋವೃದ್ಧರು ಹಾಗೂ ಯುವಜನತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಶಿಕ್ಷಕ ಹಂಪಾಮರ ತುಳಸಿರಾಮನಾಯಕ ಹೇಳಿದರು. ಕೆ.ಆರ್.ನಗರ ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಯುವಕರ ಸಂಘ, ವಿಸ್ಮಯ ಆಸ್ಪತ್ರೆ, ಎಎಸ್‌ಜಿ ಕಣ್ಣಿನ ಆಸ್ಪತ್ರೆ ಮತ್ತು ಲಯನ್ಸ್ ಜೀವಧಾರ ರಕ್ತನಿಧಿ ಇವರ ಸಹಯೋಗದಲ್ಲಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಎಂಬುದು ಸಾಮಾನ್ಯವಾಗಿದ್ದು, ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದಲ್ಲದೆ ಇವೆರಡು ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಎಲ್ಲಾರು ಆರೋಗ್ಯದ ಕಡೆ ಗಮನ ಹರಿಸಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡಲ್ಲಿ ದೇಹದಲ್ಲಿ ಕಂಡು ಬರುವ ಬದಲಾವಣೆಗಳಿಗೆ ತಕ್ಕಂತೆ ಚಿಕಿತ್ಸೆ...
ದಾವಣಗೆರೆ: ರಸ್ತೆ ಮಧ್ಯೆ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂ. ದರೋಡೆ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭದ್ರಾವತಿ ಮೂಲದ ಮಾಲತೇಶ್ ಹಣ ಕಳೆದುಕೊಂಡ ವ್ಯಕ್ತಿ. ಅವರು ತಮ್ಮ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವಿಕರ ಜಮೀನು ಮಾರಾಟ ಮಾಡಿ, ಒಟ್ಟು 76 ಲಕ್ಷ ರೂ. ಹಣವನ್ನು ಓಮ್ನಿ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಹಣವನ್ನು ಎರಡು ಬ್ಯಾಗುಗಳಲ್ಲಿ ವಿಭಜಿಸಲಾಗಿದ್ದು, ಒಂದರಲ್ಲಿ 38 ಲಕ್ಷ ರೂ., ಮತ್ತೊಂದರಲ್ಲಿ 38 ಲಕ್ಷ ರೂ. ಇಡಲಾಗಿತ್ತು. ಜೊತೆಗೆ ಎರಡು ಲಕ್ಷ ರೂ. ನಗದು ಜೆಬಿನಲ್ಲಿ ಇಟ್ಟುಕೊಂಡಿದ್ದರು. ಮಲೆಬೆನ್ನೂರು ಸಮೀಪಕ್ಕೆ ಬಂದಾಗ, ಅನುಮಾನಾಸ್ಪದ ಕಾರೊಂದು ಮಾಲತೇಶ್ ಅವರ ಕಾರಿಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ಎಚ್ಚರಗೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಆದರೆ ಆ ಕಾರು...
ಮೈಸೂರು :- ಖರ್ಚಿಗೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಮಂಗಳಮುಖಿಯರ ಮೇಲೆ ಯುವಕರು ತಲ್ವಾರ್ನಿಂದ ದಾಳಿ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭಯ ಹಾಗೂ ಆತಂಕದ ವಾತಾವರಣವನ್ನು ಉಂಟುಮಾಡಿದೆ. ಘಟನೆಯ ವಿವರಗಳ ಪ್ರಕಾರ, ಆನಮ್ ಎಂಬ ಮಂಗಳಮುಖಿ ಅಮೃತ ಬಡಾವಣೆಯಲ್ಲಿದ್ದು, ಕೆಲ ಯುವಕರು ಆಕೆಯ ಬಳಿ ಖರ್ಚಿಗೆ ಹಣ ಕೇಳಿದ್ದಾರೆ. ಆದರೆ ಆನಮ್ ಇದಕ್ಕೆ ನಿರಾಕರಿಸಿದಾಗ, ಮಾತಿನ ಚಕಮಕಿ ಉಂಟಾಗಿ ಗಲಾಟೆ ತೀವ್ರಗೊಂಡಿದೆ. ಮಾತಿನ ವಾದ ವಾಗ್ವಾದದಿಂದ ಆರಂಭವಾದ ವಿವಾದ ಕ್ಷಣಾರ್ಧದಲ್ಲೇ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆನಮ್ ತನ್ನ ಸ್ನೇಹಿತೆಯಾದ ಪಾರಿ ಅವರನ್ನು ಕರೆಸಿಕೊಂಡಿದ್ದಾಳೆ. ಗೌಸಿಯಾನಗರದಿಂದ ಪಾರಿ ಸ್ಥಳಕ್ಕೆ ಬಂದ ತಕ್ಷಣವೇ ಯುವಕರು ಇಬ್ಬರ ಮೇಲೂ ತಲ್ವಾರ್ನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ...
ಹುಣಸೂರು:- ತಾಲ್ಲೂಕು ಬಿಳಿಕೆರೆ ಹೋಬಳಿ, ಹಳೇಬೀಡು ಗ್ರಾಮ ಪಂಚಾಯ್ತಿಗೆ ಒಳಪಡುವ ಮೈದನಹಳ್ಳಿ ಗ್ರಾಮದ ಪರಿಶಿಷ್ಟ ಆದಿ ಕರ್ನಾಟಕ ಜಾತಿಗೆ ಸೇರಿದ ಕುಮಾರನ ಹೆಂಡತಿ ಪುಟ್ಟಸಾವಿತ್ರಿ (38 ವರ್ಷ) ಎಂಬುವರು ಕಳೆದ 1 ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ತುಂಬಾ ತೊಂದರೆಪಡುತ್ತಿದ್ದು, ಈ ಕುಟುಂಬವು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈ ನೊಂದ ಕುಟುಂಬಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಧನಸಹಾಯ ಮಾಡುವಂತೆ ಸಹೃದಯರಲ್ಲಿ ಹುಣಸೂರು ತಾಲ್ಲೂಕು ದಸಂಸ ಮನವಿ ಮಾಡಿಕೊಳ್ಳುತ್ತದೆ. ಈ ಬಗ್ಗೆ ದಿನಾಂಕ : 30-03-2026 ರ ಸೋಮವಾರ ಹುಣಸೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಕ್ಯಾನ್ಸರ್ ಪೀಡಿತ ಪುಟ್ಟಸಾವಿತ್ರಿ ಇವರ ಕುಟುಂಬದವರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿ ಇವರನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಉಮೇಶ್ ರವರ ಬಳಿ ಕರೆದುಕೊಂಡು ಹೋಗಿ ಇವರ ಪರಿಸ್ಥಿತಿಯನ್ನು ವೈದ್ಯರಿಗೆ ತಿಳಿಸಲಾಯಿತು....
ಬಂಗಾರಪೇಟೆ, ಮಾರ್ಚ್ 2026: ನಿವಾರಾ ತನ್ನ 100ನೇ ಶಾಖೆಯನ್ನು ಬಂಗಾರಪೇಟೆಯಲ್ಲಿ ಉದ್ಘಾಟಿಸುವ ಮೂಲಕ ತನ್ನ ದಶಕದ ಸಾಧನೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 10 ವರ್ಷಗಳ ಹಿಂದೆ ಸ್ಥಾಪಿತವಾದ ನಿವಾರಾ, ಕಡಿಮೆ ಮತ್ತು ಮಧ್ಯಮ ಆದಾಯ ವರ್ಗದ ಕುಟುಂಬಗಳಿಗೆ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದರಲ್ಲಿ ತೊಡಗಿಕೊಂಡಿದೆ. ವಿಶೇಷವಾಗಿ ಕೈಗೆಟುಕುವ ಗೃಹ ನಿರ್ಮಾಣ ಸಾಲಗಳ ಮೂಲಕ, ಗ್ರಾಹಕರ ಆಸೆ ಮತ್ತು ಆರ್ಥಿಕ ಸಹಾಯದ ನಡುವೆ ಸೇತುವೆಯಾಗಿರುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಈ 100ನೇ ಶಾಖೆಯನ್ನು ಎಂ.ಡಿ. ಮತ್ತು ಸಿಇಒ ಶ್ರೀ ಸಿ.ವಿ. ರಾವ್, ಮುಖ್ಯ ವ್ಯವಹಾರಾಧಿಕಾರಿ (CBO) ಶ್ರೀ ಶ್ರೇಯಸ್, ಮತ್ತು ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶ್ರೀ ನಾಗೇಶ್ ಎಚ್‌ಎಸ್ ಅವರಿಂದ ಉದ್ಘಾಟಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಾಹಕರು, ಪಾಲುದಾರರು ಮತ್ತು ನಿವಾರಾ ತಂಡದ ಸದಸ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಾಯಕರು,...
ಧಾರವಾಡ: ಕಾನೂನು ಕೈಗೆ ಸಿಕ್ಕಿದರೂ ಕೃತ್ಯ ಬದಲಾಗದ ಸ್ಥಿತಿ… ಜೈಲು ಶಿಕ್ಷೆಯಲ್ಲಿದ್ದರೂ ಪಾಠ ಕಲಿಯದ ಆರೋಪಿ, ಜೈಲಿನೊಳಗಿಂದಲೇ ಅಪ್ರಾಪ್ತೆಯೊಬ್ಬಳಿಗೆ ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಘಟನೆ ಧಾರವಾಡ ಜೈಲು ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೋಕ್ಸೋ ಪ್ರಕರಣದ ಆರೋಪಿ ಮತ್ತೆ ಕಿರುಕುಳ ಅಪ್ರಾಪ್ತೆಯ ಮೇಲಿನ ಪ್ರಕರಣದಲ್ಲಿ (POCSO) ಜೈಲಿಗೆ ಸೇರಿರುವ ಆರೋಪಿ, ಜೈಲಿನೊಳಗಿಂದಲೇ ಸಂತ್ರಸ್ತೆಯೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಎನ್ನಲಾಗಿದೆ. ವಿಡಿಯೋ ಕಾಲ್ ಮಾಡಿ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕರೆ ಸ್ವೀಕರಿಸದಿದ್ದರೆ ಜೀವ ಬೆದರಿಕೆ ಹಾಕಿದ್ದು, ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದೂ ತಿಳಿದುಬಂದಿದೆ. ಜೈಲಿನಲ್ಲಿದ್ದರೂ ಆರೋಪಿ ಈ ಮಟ್ಟದ ಪ್ರಭಾವ ಬೀರುತ್ತಿರುವುದು ಆತಂಕ ಹುಟ್ಟಿಸಿದೆ. ವಿಡಿಯೋ ಕಾಲ್ ಘಟನೆ ಬಗ್ಗೆ ಅಧಿಕಾರಿಗಳಿಗೆ...
ಮೈಸೂರು ಜಿಲ್ಲೆ ಹುಣಸೂರು:- ಮೈಸೂರು ಜಿಲ್ಲೆ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ಹೊಸಿಲಲ್ಲಿ ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವೇ 7 ತಿಂಗಳ ಮಗುವಿನ ಪ್ರಾಣ ತೆಗೆಯುವಂತಾಗಿದೆ. ದೊಡ್ಡ ಹೆಜ್ಜೂರು ಗ್ರಾಮದ ಸುದರ್ಶನ್ ಹಾಗೂ ನವ್ಯ ದಂಪತಿಯ ಪುತ್ರ ಚಿನ್ಮಯ್ ಗೌಡ (7 ತಿಂಗಳು) ಈ ದುರ್ಘಟನೆಯ ಬಲಿಯಾಗಿದ್ದಾನೆ. ಕುಟುಂಬದ ಸಂತೋಷವನ್ನು ನುಂಗಿದ ಈ ಘಟನೆ ಗ್ರಾಮಸ್ಥರ ಮನದಲ್ಲಿ ಆಘಾತ ಮೂಡಿಸಿದೆ. ಮೊನ್ನೆ ಮನೆಯ ಹೊಸಿಲಿಗೆ ಪೂಜೆ ನೆರವೇರಿಸಿ, ದಾಸವಾಳ ಹೂವುಗಳನ್ನು ಅಲಂಕಾರವಾಗಿ ಇಡಲಾಗಿತ್ತು. ಇದೇ ವೇಳೆ ಚಿನ್ಮಯ್ ತನ್ನ ಅಣ್ಣನ ಜೊತೆ ಮನೆಯ ಹೊರಾಂಗಣದಲ್ಲಿ ಆಟವಾಡುತ್ತಿದ್ದ. ಆಟದ ನಡುವೆ ಮಗುವು ಪೂಜೆಗೆ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದೆ. ಈ ಸಂಗತಿಯನ್ನು ಗಮನಿಸಿದ ಅಣ್ಣ ತಕ್ಷಣವೇ ಹೂವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಮಗು...
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 30:- ಶ್ರೀ ಮಲೈ ಮಹದೇಶ್ವರರು, ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವುದರಿಂದ ಮನುಷ್ಯ ಮುಕ್ತಿ ಪಡೆಯಬಹುದೆಂದು ಸುತ್ತೂರು ಮಠಾಧೀಶರಾದ...
ಮೈಸೂರು:- ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಭಾನುವಾರ ನಡೆದ ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ (Moot Court) ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ, ಕಾನೂನು...