ರಂಗಾಯಣದ ವನರಂಗದಲ್ಲಿ ‘ಪಾರ್ಟಿ’ ನಾಟಕ ಕನ್ನಡಾನುವಾದ ಬಿಡುಗಡೆ: ಸಾಹಿತ್ಯ ರಂಗಭೂಮಿ ಗಣ್ಯರ ಸಮ್ಮೇಳನಕ್ಕೆ ವೇದಿಕೆ
ಮೈಸೂರು : ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಮತ್ತೊಂದು ಮೆರಗು ಸೇರ್ಪಡೆಯಾಗಲಿದ್ದು, ನಿರಂತರ ಫೌಂಡೇಶನ್ (ರಿ), ಮೈಸೂರು ಹಾಗೂ ಅಭಿರುಚಿ ಪ್ರಕಾಶನ ಸಂಯುಕ್ತವಾಗಿ ಆಯೋಜಿಸಿರುವ ಮರಾಠಿ ಖ್ಯಾತ ನಾಟಕಕಾರ ಮಹೇಶ್ ಎಲಕುಂಚವಾರ್ ಅವರ ‘ಪಾರ್ಟಿ’ ನಾಟಕದ ಕನ್ನಡಾನುವಾದ ಪುಸ್ತಕ ಬಿಡುಗಡೆ ಸಮಾರಂಭವು ಇದೇ ಶನಿವಾರ ಸಂಜೆ ನಡೆಯಲಿದೆ. ಈ ಕಾರ್ಯಕ್ರಮವು ರಂಗಾಯಣದ ವನರಂಗ ಸಭಾಂಗಣದಲ್ಲಿ ಮಾರ್ಚ್ 28ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಮರಾಠಿ ಮೂಲದ ‘ಪಾರ್ಟಿ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುವವರು ಪ್ರಸಾದ್ ಕುಂದೂರು. ಈ ಕೃತಿ ಮೂಲಕ ಕನ್ನಡ ಓದುಗರಿಗೆ ಸಮಕಾಲೀನ ನಾಟಕದ ಸವಿಯನ್ನು ಪರಿಚಯಿಸುವ ಪ್ರಯತ್ನವಾಗಿದೆ. ಅಭಿರುಚಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕಾರ್ಯಕ್ರಮವನ್ನು ಡಾ. ಓ. ಎಲ್. ನಾಗಭೂಷಣಸ್ವಾಮಿ ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಿದ್ದು, ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ, ಖ್ಯಾತ ಕವಿ ಹಾಗೂ ಲೇಖಕ ಜಯಂತ...





