ಜಾಕಿ ಸಂಸ್ಥೆಯು ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಂಬುಲೆನ್ಸ್ ಕೊಡುಗೆ.
ಮೈಸೂರು:- ಮೈಸೂರಿನ ಜೆ ಪಿ ನಗರದಲ್ಲಿರುವ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಾಕೀ) ಸಂಸ್ಥೆಯು ತನ್ನ ಸಮಾಜಮುಖಿ ಸೇವೆಗೆ ಮತ್ತೊಂದು ಹೊಸ ಮೈಲುಗಲ್ಲು ಮೂಡಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ ಜಿಲ್ಲಾ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕಕ್ಕೆ ತನ್ನ ಸಿಎಸ್ಆರ್ ಅನುದಾನದಡಿಯಲ್ಲಿ 32 ಲಕ್ಷ ಮೌಲ್ಯದ ಹೊಸದಾದ ಆಂಬುಲೆನ್ಸ್ ವಾಹನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಬಿ ಸಿ ಕುಮಾರಸ್ವಾಮಿ ಅವರಿಗೆ ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಈ ಆಂಬುಲೆನ್ಸ್ ವಾಹನವು ಎಚ್ಐವಿ ಏಡ್ಸ್, ಸಂಶಯಾತ್ಮಕ ಪ್ರಕರಣಗಳ ತುರ್ತು ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮತ್ತು ತಪಾಸಣೆಗೆ ಸಹಕಾರಿಯಾಗಲಿದೆ ಎಂದರು. ಇದರಿಂದಾಗಿ ಸೂಕ್ತ ಸಮಯದಲ್ಲಿ ಆಪ್ತ ಸಮಾಲೋಚನೆ ಮತ್ತು ಆರೋಗ್ಯ ಸೇವೆ ನೀಡುವುದರಿಂದ ದೂರದ ಊರುಗಳಿಗೆ ಹತ್ತಿರದ ಆರೈಕೆ ಸಾಧ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಾಕಿ...



