ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ : ಶೋಷಿತ ಸಮುದಾಯಗಳ ಹಿತಕ್ಕಾಗಿ ಅವಿರತ ಶ್ರಮ
ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ : ಡಾ. ಬಾಬು ಜಗಜೀವನ ರಾಮ್ ರವರ ಆಡಳಿತ ಸುಧಾರಣೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಹಸೀಲ್ದಾರ್ ನಿಸರ್ಗ ಪ್ರಿಯಾ ತಿಳಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾಕ್ಟರ್ ಬಾಬು ಜಗಜೀವನ ರಾಮ್ ರವರು ರಾಷ್ಟ್ರದ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ರಾಷ್ಟ್ರವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭ ಅನ್ನು ಆಧುನಿಕ ಯೋಜನೆಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿ ಆಹಾರ ಸಮಸ್ಯೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಅವಿರತ ಶ್ರಮವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ ಡಾ. ರಮೇಶ್ ಡಾಕ್ಟರ್ ಬಾಬು ಜಗಜೀವನ ರಾಮ್ ರವರ ಸಾಮಾಜಿಕ,ಆರ್ಥಿಕ, ವಿಮೋಚನ ಚಿಂತನೆ ಹಾಗೂ ರಾಷ್ಟ್ರದ...

