Latest News

ಎರಡನೇ ದಿನಕ್ಕೂ ಮುಂದುವರೆದ ರೈತ ಸಂಘದ ಧರಣಿ – ಪರಿಹಾರ ಮತ್ತು ಉದ್ಯೋಗಕ್ಕೆ ಆಗ್ರಹ

ಮೈಸೂರು, ಫೆ.27: ನಂಜನಗೂಡು ತಾಲೂಕು ಇಮ್ಮಾವು ಗ್ರಾಮದ ಸರ್ವೆ ನಂ. 390ರಿಂದ 430ರವರೆಗೆ ಇರುವ ಜಮೀನಿನ ಗೇಣಿದಾರ ರೈತರಿಗೆ ಪರಿಹಾರ ಪಾವತಿಸುವಂತೆ ಹಾಗೂ ಕಾನೂನುಬಾಹಿರವಾಗಿ ಪರಿಹಾರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೂ ಮುಂದುವರಿಯಿತು. ಧರಣಿಯಲ್ಲಿ ಭಾಗವಹಿಸಿದ ರೈತರು ಸರ್ಕಾರ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ...
Latest News

ಬಿ.ಎಸ್.ಯಡಿಯೂರಪ್ಪ ಧೀಮಂತ ನಾಯಕರು-ಶ್ರೀವತ್ಸ ಬಣ್ಣನೆ

ಮೈಸೂರು: ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಶಾಸಕ ಟಿ ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ಬಿ ಎಸ್ ವೈ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜನರಿಗೆ ಸಿಹಿ ವಿತರಿಸಲಾಯಿತು. ಪೂಜಾ ನಂತರ ಮಾತನಾಡಿದ ಶ್ರೀವತ್ಸ ಅವರು,ರೈತರ ಪರ ಹೋರಾಟಗಾರರು ಜನನಾಯಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್...
Latest News

ಪರಿಸರ ಸಂರಕ್ಷಿಸದಿದ್ದರೆ ಭೂಮಿಯ ವಿನಾಶ : ಭೇರ್ಯ ರಾಮಕುಮಾರ್ ಎಚ್ಚರಿಕೆ

ಕೆ.ಆರ್.ನಗರ:- ಭೂಮಿ ಮನುಷ್ಯನ ಏಕೈಕ ಆವಾಸ ತಾಣ. ಪರಿಸರ ನಾಶ ಮಾಡುತ್ತಾ ಹೋದರೆ ಭೂಮಿಯ ಜೊತೆಗೆ ಮಾನವ ಸಂತತಿಯೂ ವಿನಾಶ ಆಗುವುದು ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲೆ ತಿಪ್ಪುರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಪರಿಸರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ...
Latest News

ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ

ಮೈಸೂರು, ಫೆ.22: ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ 2026–31ನೇ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರಿಗೆ ಮೈಸೂರು ವಕೀಲರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಹಾಗೂ ಕಾರ್ಯದರ್ಶಿ ಎ.ಜಿ. ಸುಧೀರ್ ಅವರು ನೂತನ ನಿರ್ದೇಶಕರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ...
Latest News

ಸಮರ್ಥನಂ ಸಂಸ್ಥೆ: ವಿಕಲಚೇತರಿಗೆ ಸಾಧನ ಸಲಕರಣೆ ವಿತರಣೆ

ಮೈಸೂರು:- ಸಮರ್ಥನಂ ಅಂಗವಿಕಲರ ಸಂಸ್ಥೆಯ 29ನೇ ವಾರ್ಷಿಕೋತ್ಸವದ ಅಂಗವಾಗಿ  ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿಂದು  ವಿಕಲಚೇತನರಿಗೆ ವಿವಿಧ ಸಹಾಯಕ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿವರಾಮ ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಆದರೆ ವಿಶೇಷ ಚೇತನರಿಗೆ ಇನ್ನಷ್ಟು ಸುಧಾರಿತ ಹಾಗೂ ನೆರವಾಗುವ ತಂತ್ರಜ್ಞಾನದ ಅಗತ್ಯ ಹೆಚ್ಚಾಗಿದೆ. ತಂತ್ರಜ್ಞಾನದಿಂದ ಯಾರೂ ಹೊರತಲ್ಲ; ಎಲ್ಲರೂ ಅದರ ಸದುಪಯೋಗ ಪಡೆಯಬೇಕು...
Latest News

ರಾಜ್ಯ ಬಜೆಟ್ ಕುರಿತು ಆತ್ಮಾವಲೋಕನ ಅಗತ್ಯ: ಮೈಸೂರು ಕನ್ನಡ ವೇದಿಕೆ ವತಿಯಿಂದ ಆಗ್ರಹ

    ಮೈಸೂರು, ಫೆ.27: ರಾಜ್ಯ ಸರ್ಕಾರ 2026ನೇ ಸಾಲಿನ ಬಜೆಟ್ ಮಂಡನೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಅಭಿವೃದ್ಧಿ ಆದ್ಯತೆಗಳ ಕುರಿತು ಪ್ರಜ್ಞಾವಂತ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮೈಸೂರು ಜಿಲ್ಲೆಯ ನಾಗರಿಕರು ಅಭಿಪ್ರಾಯಪಟ್ಟರು. ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಡಳಿತದಲ್ಲಿ ಸ್ಥಿರತೆ ಕಾಣಿಸದೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಗುಂಪುಗಾರಿಕೆ, ಪದೇಪದೇ ದೆಹಲಿಗೆ ಭೇಟಿ, ಹಾಗೂ ವಿವಿಧ ನಿಗಮ...
Latest News

ಪರಿಶಿಷ್ಟ ಜಾತಿಯ ಬಲಗೈ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು: ಮಾಜಿ ಸದಸ್ಯ ಅಚ್ಚುತಾನಂದ

  ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 27:- ಪರಿಶಿಷ್ಟ ಜಾತಿಯ ಬಲಗೈ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಈಗ ಜಾರಿಗೆ ತಂದಿರುವ ವರದಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಚ್ಚುತಾನಂದ ಸರ್ಕಾರವನ್ನು ಅಗ್ರಹಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ...
Latest News

ಮುಖ್ಯ ಇಂಜಿನಿಯರ್ ಮೃತ್ಯುಂಜಯ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರು, ಫೆ.26, 2026:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಮೈಸೂರು ವೃತ್ತದ ಮುಖ್ಯ ಇಂಜಿನಿಯರ್ ಆಗಿದ್ದ ಮೃತ್ಯುಂಜಯ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಇಂಜಿನಿಯರ್ ಮೃತ್ಯುಂಜಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಹಿರಿಯ ಹಾಗೂ...
Latest News

ಮಾ.1ರಂದು ಕಲಾ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ – ಓವಲ್ ಮೈದಾನದಲ್ಲಿ ವಿಶೇಷ ಮಕ್ಕಳಿಗಾಗಿ ಕ್ರೀಡಾಕೂಟ

  ಮೈಸೂರು:-  ಜಿಲ್ಲಾಡಳಿತ ಹಾಗೂ ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 1ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ ಎಂದು ಸಮಿತಿ ಪದಾಧಿಕಾರಿ ಶ್ರೀಶೈಲ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸುಧಾರಕ ಹಾಗೂ ಧಾರ್ಮಿಕ ಚಿಂತಕರಾದ ರೇಣುಕಾಚಾರ್ಯರ ಜೀವನ ಮತ್ತು ಸಂದೇಶಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ...
Latest News

ಒಳಚರಂಡಿ ನೀರು ಕಾಲುವೆ ಸೇರದಂತೆ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ: ಶಾಸಕ ಜಿಟಿಡಿ

ಲಿಂಗಾಂಬುದಿಕೆರೆಗೆ ಹರಿಯುವ ಯುಜಿಡಿ ನೀರು ತಡೆಗೆ ಶೀಘ್ರ ಶಾಶ್ವತ ಪರಿಹಾರ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆಗೆ ನಿರ್ಧಾರ ಮೈಸೂರು:-  ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ ಜತೆಗೆ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲಾಗದ ಸನ್ನಿವೇಶ ನಿರ್ಮಾಣವಾಗಿ ದುರ್ವಾಸನೆ ಮತ್ತಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಜತೆಗೆ, ಕಾಮಗಾರಿಗೆ ಬೇಕಾಗಿರುವ ಅನುದಾನದ...
1 24 25 26 27 28 62
Page 26 of 62