ಮಾ.6 ರಂದು ವಿಕಲಚೇತನರು ಹಾಗೂ ಮಹಿಳೆಯರಿಗೆ ಆರ್ಥಿಕ ಮಟ್ಟ ಸುಧಾರಿಸಲು ಕಾರ್ಯಾಗಾರ: ನಿತೇಶ್ ಪಾಟೀಲ್
ಮೈಸೂರು, ಮಾ.4:- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಹಿಳೆಯರು ಹಾಗೂ ವಿಕಲಚೇತನರಿಗೆ ಉದ್ಯೋಗ ಕಲ್ಪಿಸಿ ಆರ್ಥಿಕ ಮಟ್ಟ ಸುಧಾರಿಸಲು ಮಾಚ್೯ 6 ರಂದು ಬೆಳಿಗ್ಗೆ 9.30 ಗಂಟೆಗೆ ಶ್ರೀ ರಂಗಚಾರ್ಲು ಪುರಭವನದಲ್ಲಿ ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಯ ಪರಿಹಾರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ತಿಳಿಸಿದರು. ಅವರು ಇಂದು ಮೈಸೂರು ಮಹಾನಗರ ಪಾಲಿಕೆಯ...



