ಹೂಟಗಳ್ಳಿ ನಗರಸಭೆಯ ನೂತನ ಕಚೇರಿ ಕಾರ್ಯಾರಂಭ: ವಿಶೇಷ ಪೂಜೆಯೊಂದಿಗೆ ಸೇವೆಗೆ ಚಾಲನೆ
ಮೈಸೂರು :- ಮೈಸೂರು ತಾಲ್ಲೂಕಿನ ಹೂಟಗಳ್ಳಿ ನಗರದ ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೂಟಗಳ್ಳಿ ನಗರಸಭೆಯ ಆಡಳಿತ ಕಚೇರಿ ಗುರುವಾರ ವಿಶೇಷ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಹೊಸ ಕಚೇರಿ ಆರಂಭದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಸಂಭ್ರಮದ ವಾತಾವರಣ ಕಂಡುಬಂತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಜಿ.ಟಿ. ದೇವೇಗೌಡ ಅವರು ಪೂಜೆಯಲ್ಲಿ ಭಾಗವಹಿಸಿ ನೂತನ ಕಚೇರಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ...








