Latest News

ಪ್ರಾಣಿ ಪಕ್ಷಿಗಳಿಗೆ ನೆರವಾದ ಹೃದಯವಂತ ಕನ್ನಡಿಗರ ಬಳಗ

Ask ಮೈಸೂರು June 10, 2021.

ಕೊರೋನಾ ಪ್ರಯುಕ್ತ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಸುತ್ತಮುತ್ತಲ ಪ್ರದೇಶಗಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವಾದ ಮೈಸೂರಿನ ಹೃದಯವಂತ ಕನ್ನಡಿಗರ ಬಳಗವು ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಒದಗಿಸಿದೆ. ಹಿರಿಯ ಸಾಹಿತಿ ಬನ್ನೂರು ರಾಜು ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

sri krishnadevaraya hampi

ಹಣ್ಣು ಹಂಪಲು ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ತಕ್ಕಂತೆ ವಿವಿಧ ಬಗೆಯ ಆಹಾರವನ್ನ ಹಾಗೂ ನೀರಿನ ವ್ಯವಸ್ಥೆಯನ್ನು ಬಳಗದ ಅಧ್ಯಕ್ಷ ಡಿ.ಪಿ.ಕೆ ಪರಮೇಶ್ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.

ಬಳಗದ ಉಪಾಧ್ಯಕ್ಷೆ ಯಶೋಧ ನಾರಾಯಣ, ಪ್ರಧಾನ ಕಾರ್ಯದರ್ಶಿ ಸತೀಶ್, ಕುಮಾರ್ ಆರ್ಯ, ಮಲ್ಲೇಶ್, ಸಹಕಾರ್ಯದರ್ಶಿ ಸಿದ್ದರಾಜು, ಕನ್ನಡ ಹೋರಾಟಗಾರ ಆರ್. ಎ. ರಾಧಾಕೃಷ್ಣ ಹಾಗೂ ಆರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

 

Contact us for classifieds and ads : +91 9742974234 
error: Content is protected !!