“ನನಗೆ ಅಕ್ಷರಗಳನ್ನು ಗುರುತಿಸಲು ಬರಲ್ಲ ಸಾರ್…”
ಅದು 8ನೇ ತರಗತಿ. ಮಕ್ಕಳು ಬೇರೆಬೇರೆ ಶಾಲೆಗಳಿಂದ ಬಂದಿರುವವರು. ಹೊಸದಾದ ಶಾಲೆ, ಗೆಳೆಯರು, ಶಿಕ್ಷಕರು ಹಾಗಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಖಂಡಿತವಾಗಿ ಬೇಕೇಬೇಕಿದೆ ಎಂಬುದು ನಮಗೆಲ್ಲ ತಿಳಿದಿರುವ ಅಂಶವೇ ಸರಿ. ಯಾವಯಾವ ಶಾಲೆಯಲ್ಲಿ ಹೇಗೇಗೆ, ಏನೇನು ಪಾಠಗಳನ್ನು ಮಾಡಿರುತ್ತಾರೋ ತಿಳಿಯದು. ತರಗತಿಯಲ್ಲಿರುವ ಒಂದೊಂದು ಮಗುವು ಭಿನ್ನ, ವಿಭಿನ್ನ. ಕೆಲವು ಮಕ್ಕಳು ಓದುವುದರಲ್ಲಿ, ಕೆಲವರು ಆಟೋಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಕೆಲವು ಓದುವುದರಲ್ಲೂ ಇಲ್ಲ ಯಾವುದರಲ್ಲೂ ಇಲ್ಲ. ಆದರೆ...