Latest News

ಸರ್ಕಾರಿ ಆಸ್ತಿಯನ್ನು ಉಳಿಸಿದ ಶಾಸಕ ಟಿ.ಎಸ್. ಶ್ರೀವತ್ಸರಿಗೆ ನಾಗರಿಕರಿಂದ ಅಭಿನಂದನೆ

ಮೈಸೂರು:- ಮೈಸೂರಿನ ಕೆ.ಸಿ. ಬಡಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಲು ಮುಂದಾಗಿ ಕ್ರಮ ಕೈಗೊಂಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರಿಗೆ ಅಗ್ರಹಾರದಲ್ಲಿರುವ ಶಾಸಕರ ಕಚೇರಿಯಲ್ಲಿ ಪ್ರಜ್ಞಾವಂತ ನಾಗರಿಕರು ಸನ್ಮಾನಿಸಿ ಅಭಿನಂದಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಹಳೆಯ ಮೈಸೂರಿನ ಸೌಂದರ್ಯ ಮತ್ತು ಪರಂಪರೆಯ ವೈಶಿಷ್ಟ್ಯವನ್ನು ಹಾಳು ಮಾಡುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೆ.ಸಿ. ಬಡಾವಣೆಯಲ್ಲಿರುವ ಅಮೂಲ್ಯ ಸರ್ಕಾರಿ ಜಾಗವನ್ನು ಕಬಳಿಕೆಗಳಿಂದ ರಕ್ಷಿಸಲು ಶಾಸಕ...
Latest News

ಕೆಎಸ್ಐಸಿ ಜಮೀನಿನಲ್ಲಿ ಕ್ರೀಡಾಂಗಣ ವಿವಾದ: ರಾಜಕೀಯ ಕಣ ಕಾದು ಕೊಂಡಿದೆಯೇ? ಯದುವೀರ್–ಪ್ರತಾಪ್ ಸಿಂಹ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಚರ್ಚೆಗೆ ಕಾರಣ

ಮೈಸೂರು :- ಟಿ. ನರಸೀಪುರದಲ್ಲಿ ಇರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್ಐಸಿ) ಫಿಲೇಚರ್ ಕಾರ್ಖಾನೆಯ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾಪವು ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಆರಂಭದಲ್ಲಿ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಶ್ನೆಯಾಗಿದ್ದ ಈ ವಿಚಾರ ಇದೀಗ ಮೈಸೂರು ರಾಜಕೀಯದ ಕೇಂದ್ರಬಿಂದುವಾಗಿ ರೂಪಾಂತರಗೊಂಡಿದೆ. ಕಾರ್ಮಿಕ ಸಂಘಟನೆಗಳು, ಸ್ಥಳೀಯರು ಹಾಗೂ ವಿವಿಧ ರಾಜಕೀಯ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ವಿವಾದ ಮತ್ತಷ್ಟು ಚುರುಕುಗೊಂಡಿದೆ. ಕೆಎಸ್ಐಸಿ ಫಿಲೇಚರ್ ಕಾರ್ಖಾನೆಯ...
Latest News

ಮೈಸೂರು ನಗರ ಪೊಲೀಸ್ ಸಾಧನೆ: 105 ಪ್ರಕರಣ ಪತ್ತೆ – ಸುಮಾರು ₹2.96 ಕೋಟಿ ಮೌಲ್ಯದ ವಸ್ತು ವಶ

ಮೈಸೂರು:-  ಮೈಸೂರು ನಗರ ಪೊಲೀಸ್ ಇಲಾಖೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿ ಮಹತ್ವದ ಸಾಧನೆ ಮಾಡಿದ್ದು, ಒಟ್ಟು 105 ಪ್ರಕರಣಗಳನ್ನು ಪತ್ತೆಹಚ್ಚಿ ಸುಮಾರು ₹2,96,36,000 ಮೌಲ್ಯದ ನಗದು ಮತ್ತು ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಕುರಿತು ಮೈಸೂರು ನಗರ ಪೊಲೀಸರು ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು, ಸರಗಳ್ಳತನ,...
Latest News

ಅಕ್ರಮ ಕಟ್ಟಡಗಳ ತೆರವಿಗೆ ವಿಳಂಬ ಖಂಡನೆ: ಕಬಿನಿ ಬಂಡಿಪುರ ನಾಗರಹೊಳೆ ಉಳಿಸಿ ಎಂದು ರೈತ ಸಂಘದ ಪ್ರತಿಭಟನೆ

ಮೈಸೂರು:- ಕಬಿನಿ, ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ತಲೆದೋರಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿ ಚುನಾಯಿತ ಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ...
Latest News

ಮೈಸೂರು ವಿಶ್ವವಿದ್ಯಾನಿಲಯ ಚೆಸ್ ತಂಡಕ್ಕೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಆಯ್ಕೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಚೆಸ್ ತಂಡಕ್ಕೆ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಕಾಲೇಜಿಗೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಾದ ಭವಾನಿ ಸಿ.ಎಸ್ (ತೃತೀಯ ಬಿಎಸ್ಸಿ), ಪೂರ್ವಿ ಡಿ.ಎಸ್ (ತೃತೀಯ ಬಿಎಸ್ಸಿ) ಹಾಗೂ ದೇವಿಕಾ (ದ್ವಿತೀಯ ಬಿಸಿಎ) ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಚೆಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಭವಾನಿ ಸಿ.ಎಸ್ ಅವರನ್ನು ತಂಡದ ನಾಯಕಿಯಾಗಿ...
Latest News

ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿ: ಪ್ರೊ. ಕೆ. ರಾಮಕೃಷ್ಣಯ್ಯ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಖ್ಯಾತ ರಂಗಕರ್ಮಿ ಹಾಗೂ ಶಿಕ್ಷಣ ತಜ್ಞರಾದ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಸೋಮವಾರ (ಫೆಬ್ರವರಿ 23,2026) ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಿದರು. ಪ್ರೊ. ರಾಮಕೃಷ್ಣಯ್ಯ ಅವರು ಹಲವು ವರ್ಷಗಳಿಂದ ಪ್ರದರ್ಶಕ ಕಲೆಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ...
Latest News

ನಾಯಕತ್ವ ಚರ್ಚೆಗಳ ಮಧ್ಯೆ ಡಾ. ಜಿ. ಪರಮೇಶ್ವರ್ ಕುಮಾರಸ್ವಾಮಿ ಭೇಟಿ: ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳ ಮಾತು

ವರದಿ:-ವಡ್ಡರಕೊಪ್ಪಲು ಶಿವರಾಮು. ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳು ಜೋರಾಗಿರುವ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಭೇಟಿ ಹೊಸ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಮುಂದಿನ ನಾಯಕತ್ವದ ಪ್ರಶ್ನೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಸಮಯದಲ್ಲಿ ಈ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ ಬೆಂಗಳೂರಿನ...
Latest News

ಗೋಪ್ಯ ಸ್ನೇಹದಿಂದ ಮದುವೆ ಮಾತಿನವರೆಗೆ: ವಿಜಯ್ ದೇವರಕೊಂಡ?ರಶ್ಮಿಕಾ ಸಂಬಂಧದ ಪಯಣ ಮತ್ತೆ ಚರ್ಚೆಯಲ್ಲಿ

ಹೈದರಾಬಾದ್: ದಕ್ಷಿಣ ಭಾರತದ ಜನಪ್ರಿಯ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಸ್ನೇಹ ಹಾಗೂ ಪ್ರೀತಿಯ ಬಗ್ಗೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಸುದ್ದಿಗಳಿಗೆ ಈಗ ಹೊಸ ತಿರುವು ಸಿಕ್ಕಿರುವಂತೆ ಕಾಣುತ್ತಿದೆ. ದೀರ್ಘಕಾಲದಿಂದ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದೆ ಇದ್ದ ಈ ಜೋಡಿ ಈಗ ಜೀವನದ ಹೊಸ ಹಂತಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಮತ್ತೆ ಜೋರಾಗಿ ಕೇಳಿಬರುತ್ತಿವೆ. ಚಿತ್ರರಂಗದಲ್ಲಿ ಪರಿಚಯದಿಂದ ಆರಂಭವಾದ ವಿಜಯ್ ದೇವರಕೊಂಡ...
Latest News

ಮಾರ್ಚ್ 11ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತ ಸಾಧ್ಯತೆ: ಬೇಡಿಕೆ ಈಡೇರಿಕೆಗಾಗಿ ವೈದ್ಯರ ಹೋರಾಟ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರಿ ವೈದ್ಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 11 ರಿಂದ ಹಂತ ಹಂತವಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈಮುಷ್ಕರದ  ಹೋರಾಟದಿಂದ ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಸೇವೆ (ಒಪಿಡಿ) ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಅಗತ್ಯ ಇದ್ದಲ್ಲಿ ತುರ್ತು ಚಿಕಿತ್ಸಾ ಸೇವೆಗಳು ಮಾತ್ರ ಮುಂದುವರಿಯಲಿವೆ ಎಂದು ಮುಷ್ಕರಕ್ಕೆ ಸಜ್ಜಾಗಿರುವ ವೈದ್ಯರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ...
Latest News

ನೇರ ಕೋರ್ಟ್ ಹಾಜರಾತಿಗೆ ನಟ ದರ್ಶನ್ ಮನವಿ: ಜೈಲು ಸೌಲಭ್ಯಗಳ ಬಗ್ಗೆ ನ್ಯಾಯಾಧೀಶರ ಮುಂದೆ ಪ್ರಸ್ತಾಪ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ವಿಚಾರಣೆ ವೇಳೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ದರ್ಶನ್ ತಮ್ಮ ವಕೀಲರ ಮೂಲಕ ಹಾಗೂ ಸ್ವತಃ ನ್ಯಾಯಾಧೀಶರ ಗಮನಕ್ಕೆ ಹಲವು ವಿಷಯಗಳನ್ನು ತಂದರು. ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಮತ್ತು ಸಾಧ್ಯವಾದರೆ ಪ್ರತಿದಿನವೂ ವಿಚಾರಣೆ ನಡೆಯುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ...
1 15 16 17 18 19 52
Page 17 of 52