ಸಾಧನೆಗೆ ತಾರತಮ್ಯವಿಲ್ಲ, ನಿಗದಿತ ತಯಾರಿ ಮುಖ್ಯ.
ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಿಇಟಿ ತರಬೇತಿ ಸಮಾರೋಪದಲ್ಲಿ ಸಿಸಿಎಫ್ ಟಿ. ಹೀರಾಲಾಲ್ ನುಡಿ ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿಯಾಗುತ್ತಾರೆ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಟಿ.ಹೀರಾಲಾಲ್ ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಜ್ಞಾನೋದಯ ಪದವಿ ಪೂರ್ವ...